ಅಪಾಯದ ಅಂಚಿನಲ್ಲಿ ನಾರಿಹಳ್ಳ ಡ್ಯಾಮ್?

ಅಪಾಯದ ಅಂಚಿನಲ್ಲಿ ನಾರಿಹಳ್ಳ ಡ್ಯಾಮ್?

ಬಳ್ಳಾರಿ-

 ಕಳೆದ ಒಂದು ದಶಕದ ಬಳಿಕ ತುಂಬಿರುವ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಾರಿಹಳ್ಳ ಡ್ಯಾಮ್ ಅಪಾಯದಲ್ಲಿ ಇದೆ. ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾದ ಹಿನ್ನೆಲೆಯಲ್ಲಿ ತಾರಾನಗರ ಜಲಾಶಯ ಆಣೆಕಟ್ಟು ಸಂಪೂರ್ಣ ತುಂಬಿ ತುಳುಕುತ್ತಿದೆ.‌ ಹೀಗಾಗಿ ಈ ಭಾಗದ ಜನರ ಆಕರ್ಷಣೆ ಕೇಂದ್ರವಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲಗಲದೇ ಡ್ಯಾಮ್ ಅಲ್ಲಲ್ಲಿ ಬಿರುಕು ಬಿಟಿದ್ದು ಅಪಾಯದ ಮುನ್ಸೂಚನೆ ನೀಡಿದೆ. ಡ್ಯಾಮ್ ನ ತಡೆಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಮೇಲಾಗಿ ವೈರೂಪ್ ಸ್ಲಿಂಗ್ ಕೇಬಲ್ ಸಹ ಕಟ್ಟ ಆಗಿದೆ. ಹೀಗಾಗಿ ಡ್ಯಾಮ್ ಗೆ ಎಲ್ಲಿ ಅಪಾಯ ಆಗಲಿದೆ ಎನ್ನುವ ಆತಂಕವನ್ನು ಇಲ್ಲಿನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

 ಇನ್ನು ಈ ಡ್ಯಾಮ್ 1971ರಲ್ಲಿ ಆಗಿನ ಮೈಸೂರು ಸರ್ಕಾರದ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಮಂತ್ರಿಗಳಾಗಿದ್ದ ಎಂ.ವೈ.ಘೋರ್ಪಡೆಯವರ ಅಧ್ಯಕ್ಷತೆಯಲ್ಲಿ ಪ್ರಾರಂಬಿಸಿ 1982 ರಲ್ಲಿ ಮುಕ್ತಾಯವಾಗಿ. ಬರೋಬ್ಬರಿ 9 ವರ್ಷಗಳ ಕಾಲ ಕಟ್ಟಿ 39 ವರ್ಷಗಳು ಹಳೆಯ ಈ ಡ್ಯಾಮ ಸಂರಕ್ಷಣೆ ಮಾಡುವಂತೆ ಆಗ್ರಹ ಮಾಡಿದ್ದಾರೆ. ಈಗ ಅಲ್ಲಲ್ಲಿ ಸಮಸ್ಸೆಗಳ ಮಹಾಪೂರವೇ ಅಡಗಿ ಮಂಬರುವ ದಿನಗಳಲ್ಲಿ ತುಂಬಾ ಅಪಾಯದ ವಾತಾವರಣ ಸ್ರುಷ್ಠಿಯಾಗುವ ಸಾದ್ಯತೆ ಇದೆ ಆದಕಾರಣ ಸಂಡೂರು ತಾಲ್ಲೂಕಿನ ಶ್ರೀ ಮಾನ್ಯ ಶಾಶಕರೇ ಹಾಗೂ ಸಂಸದರೇ ಹಾಗೂ ಸಂಬಂಧಪಟ್ಟ ಜಲಾನಯನ ಉಗಮ ಮಂಡಳಿಯ #ಅಧಿಕಾರಿಗಳೇ ಇನ್ನೂ ಪದಾಧಿಕಾರಿಗಳೇ ಇತ್ತ ಕಡೆ ಗಮನ ಹರಿಸಿ ಮುಂಬರುವ ದಿನಗಳಲ್ಲಿ ಆಗುವ ಅಪಾಯವನ್ನು ತಡೆಯುವಂತೆ ಮನವಿ ಮಾಡಿದ್ದಾರೆ…

Previous ಸಿಎಂ ಬದಲಾವಣೆ ಎಂಬುವುದು ಮಾಧ್ಯಮದ ಸೃಷ್ಟಿ:ಸಚಿವ ಜಗದೀಶ್ ಶೆಟ್ಟರ್
Next ಕೃಷಿ ಕಾಲೇಜು ಮೇಲ್ದರ್ಜೇಗೆ ಶೀಘ್ರ ಕ್ರಮ - ಸಚಿವ ಆನದಸಿಂಗ್

You might also like

0 Comments

No Comments Yet!

You can be first to comment this post!

Leave a Reply