ಕೊರೊನಾದಿಂದ ತಂದೆ ಮಗ ಏಕಕಾಲಕ್ಕೆ ಅಡ್ಮಿಟ್, ಏಕಕಾಲಕ್ಕೆ ಡಿಸ್ಚಾರ್ಜ್

ಕೊರೊನಾದಿಂದ ತಂದೆ ಮಗ ಏಕಕಾಲಕ್ಕೆ ಅಡ್ಮಿಟ್, ಏಕಕಾಲಕ್ಕೆ ಡಿಸ್ಚಾರ್ಜ್

ಬಳ್ಳಾರಿ-

ತಂದೆ ಮತ್ತು ಮಗ ಇಬ್ಬರಿಗೂ ಒಂದೇ ದಿನ ಪಾಸಿಟಿವ್ ಆಗಿ ಇಬ್ಬರೂ ಒಂದೇ ದಿನ ಡಿಸ್ಚಾರ್ಜ್ ಆಗಿರುವ ಅಪರೂಪದ ಕೊರೊನಾ ಪ್ರಕರಣ ಬಳ್ಳಾರಿಯಲ್ಲಿ ನಡೆದಿದೆ. ಸಿರುಗುಪ್ಪ ತಾಲೂಕಿನ 99 ವರ್ಷದ ಅಚ್ಯತ್ ರಾವ್ ಹಾಗೂ 67 ವರ್ಷದ ಮಗ ರಂಗಾರಾವ್ ಇಬ್ಬರಿಗೂ ಸೆಪ್ಟೆಂಬರ್‌ ಒಂದರಂದು ಸೋಂಕು ಧೃಡಪಟ್ಟಿತ್ತು. ಬಳ್ಳಾರಿಯ ಟ್ರಾಮಕೇರ್ ಸೆಂಟರದ ನಲ್ಲಿ ಇಬ್ಬರಿಗೂ ಚಿಕಿತ್ಸೆ ನಿಡಲಾಗ್ತಿತ್ತು. ಇದೀಗ ಇಬ್ಬರೂ ತಂದೆ ಮಗ ಏಕಕಾಲದಲ್ಲಿ ಒಂದೇ ದಿನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಚಪ್ಪಾಳೆಗಳ ಮೂಲಕ ತಂದೆ ಮತ್ತು ಮಗನನ್ನು ಅಭಿನಂದಿಸಿ ಬೀಳ್ಕೊಟ್ಟರು. ಇನ್ನು ಆರೋಗ್ಯ ಸುಧಾರಣೆಗೆ ಕಾರಣರಾದ ವೈದ್ಯ ಸಿಬ್ಬಂದಿಗಳಿಗೆ ಇದೇ ಸಂದರ್ಭದಲ್ಲಿ ತಂದೆ ಮಗ ಕೃತಘ್ನತೆ ಸಲ್ಲಿಸಿದರು

Previous ಕೋವಿಡ್‍ಗಾಗಿ 16.23ಕೋಟಿ ರೂ.ವೆಚ್ಚ;ಪ್ರತಿನಿತ್ಯ 2500 ಟೆಸ್ಟ್
Next ನಾರಿಹಳ್ಳ ಜಲಾಶಯದಿಂದ ನೀರು ಬಿಡುಗಡೆ-ಹಳ್ಳದ ವ್ಯಾಪ್ತಿಯ ಜನ ಜಾನುವಾರುಗಳಿಗೆ ಎಚ್ಚರಿಕೆ

You might also like

0 Comments

No Comments Yet!

You can be first to comment this post!

Leave a Reply