ಕೋವಿಡ್ ಹಿನ್ನೆಲೆ ನಷ್ಟ ,ರಾಜ್ಯ ಸರ್ಕಾರ ನೆರವು

ಕೋವಿಡ್ ಹಿನ್ನೆಲೆ ನಷ್ಟ ,ರಾಜ್ಯ ಸರ್ಕಾರ ನೆರವು

ದಾವಣಗೆರೆ-

 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೋವಿಡ್ ಹಿನ್ನೆಲೆಯಲ್ಲಿ ನಷ್ಟದಲ್ಲಿದ್ದರೂ ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಹಾಗೂ ಸೇವಾ ಮನೋಭಾವದಿಂದ ರಾಜ್ಯಾದ್ಯಂತ ಉತ್ತಮವಾಗಿ ಕಾರ್ಯಾಚರಣೆ ಮಾಡುತ್ತಿದೆ. ಸೇವಾ ಮನೋಭಾವವೇ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಚಂದ್ರಪ್ಪ ಹೇಳಿದರು.

 ಕೆಎಸ್‍ಆರ್‍ಟಿಸಿ ಹಿಂದೆ ಲಾಭವೂ ಇಲ್ಲ. ನಷ್ಟವೂ ಇಲ್ಲವೆಂಬಂತೆ ಕಾರ್ಯಾಚರಣೆ ಮಾಡುತ್ತಿತ್ತು. ಕೋವಿಡ್ ಬಂದ ನಂತರ ರಾಜ್ಯಾದ್ಯಂತ ಅಂದಾಜು 1500 ಕೋಟಿ ನಷ್ಟ ಅನುಭವಿಸಿತು. ರಾಜ್ಯ ಸರ್ಕಾರ 1350 ಕೋಟಿ ಬಿಡುಗಡೆ ಮಾಡುವ ಮೂಲಕ ಅಧಿಕಾರಿ/ಸಿಬ್ಬಂದಿಗಳಿಗೆ ವೇತನ, ವಾಹನಗಳ ನಿರ್ವಹಣೆ ಮಾಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ನೌಕರರು ಉತ್ತಮವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆ ನಷ್ಟದಲ್ಲಿದ್ದರೂ ಸರ್ಕಾರ ವೇತನ ನೀಡುತ್ತಿದ್ದು, ಮುಖ್ಯಮಂತ್ರಿಗಳು ಅಭಿನಂದಿಸಿದ್ದಾರೆ ಎಂದರು.

 ರಾಜ್ಯ ಬಸ್ ಕಾರ್ಯಾಚರಣೆ ಆರಂಭವಾಗಿದ್ದು ಗೋವಾ, ಆಂಧ್ರ ಮತ್ತು ಈಗ ಮಹಾರಾಷ್ಟ್ರಕ್ಕೂ ಅನುಮತಿ ದೊರೆತಿದೆ. ಇದೀಗ ಶೇ.50 ಆದಾಯ ಬರುತ್ತಿದೆ. ಖಾಸಗಿ ಸಂಸ್ಥೆಗಳು ನಷ್ಟದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಿಲ್ಲಿಸಿವೆ. ಆದರೆ ರಾಜ್ಯ ರಸ್ತೆ ಸಾರಿಗೆಯ ಉದ್ದೇಶ ಸೇವೆ ಆಗಿದೆ. ನಷ್ಟದಲ್ಲಿಯೂ ಕೆಲಸ ಮಾಡುತ್ತಿದ್ದು, ಉತ್ತಮ ಸೇವೆಗಾಗಿ ನಮ್ಮ ಸಂಸ್ಥೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ ಎಂದರು.

 ಸಂಸ್ಥೆಗೆ ಸಾಲವಾದರೂ ಪರವಾಗಿಲ್ಲ. ನೌಕರರ ಮತ್ತು ಎಲ್ಲ ವರ್ಗದ ಜನರ ಹಿತ ಕಾಪಾಡುವುದು ಮುಖ್ಯ ಉದ್ದೇಶವಾಗಿದೆ. ಸದ್ಯ ಕೋವಿಡ್ ಹಿನ್ನೆಲೆಯಲ್ಲಿ ಹೊಸ ಬಸ್‍ಗಳು ಮತ್ತು ಮಾರ್ಗಗಳಿಗೆ ಅವಕಾಶ ಇಲ್ಲವಾಗಿದೆ ಎಂದರು.

Previous ಕೊರೋನಾ ಚಿಕಿತ್ಸೆಗೆ 19 ದಿನಕ್ಕೆ 11 ಲಕ್ಷ ಬಿಲ್, 11 ಲಕ್ಷದಲ್ಲಿ ಡಿಸ್ಕೌಂಟ್ ಕೊಟ್ಟಿದ್ದು ಕೇವಲ 1 ರೂಪಾಯಿ"
Next ತಂಬಾಕು ಮಾರಾಟಗಾರರಿಗೆ ಪ್ರತ್ಯೇಕ ಉದ್ಯಮ ಪರವಾನಿಗೆ

You might also like

0 Comments

No Comments Yet!

You can be first to comment this post!

Leave a Reply