ರಂಭಾಪುರಿ ಶ್ರೀಗಳಿಗೆ ಕರೋನಾ ಸೋಂಕು ದೃಡ

ರಂಭಾಪುರಿ ಶ್ರೀಗಳಿಗೆ ಕರೋನಾ ಸೋಂಕು ದೃಡ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗೆ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದೆ.

ಶಿವಾಚಾರ್ಯ ಸ್ವಾಮೀಜಿಗೆ ನಿನ್ನೆ ನಿನ್ನೆ ಸೋಮವಾರ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಪಟ್ಟಣದ ಆರೋಗ್ಯ ಕೇಂದ್ರದ ವೈದ್ಯರು ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿದ್ದು, ಸ್ವಾಮೀಜಿಗೆ ಕೊರೊನಾ ಸೋಂಕು ಇರುವುದು ಖಾತರಿಯಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸ್ವಾಮೀಜಿಯನ್ನು ಬೆಂಗಳೂರಿಗೆ ರವಾನಿಸಲಾಗಿದೆ.

ಸೋಂಕು ದೃಢಪಟ್ಟ ಹಿನ್ನೆಲೆ‌ಯಲ್ಲಿ ಮಠದ ಆವರಣವನ್ನು ಇಂದು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಮಠದ ಸುತ್ತ 100 ಮೀಟರ್ ಪ್ರದೇಶವನ್ನು ಕಂಟೇನ್ಮಂಟ್ ಝೋನ್ ಮಾಡಿ ಓಡಾಟಕ್ಕೆ ನಿಷೇಧ ಹೇರಲಾಗಿದೆ.‌ ಹೀಗಾಗಿ ಮಠದ ಒಳೆಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ..

Previous ಅಜ್ಜಿಯ ಆಸೆ ಪೂರೈಸಿದ ಯುವ ಬ್ರಿಗೇಡ್
Next ಇಂದ್ರಜೀತ ಲಂಕೇಶ್ ಹಿಂದೇಟು ಹಾಕಿದ್ದೇಕೆ..?

You might also like

0 Comments

No Comments Yet!

You can be first to comment this post!

Leave a Reply