ಟಾಟಾ ಮೋಟರ್ಸ್ ಗೆ ವರವಾದ ಕರೋನಾ ಸೋಂಕು

ಟಾಟಾ ಮೋಟರ್ಸ್ ಗೆ ವರವಾದ ಕರೋನಾ ಸೋಂಕು

ಬೆಂಗಳೂರು-

 ಕರೋನಾ ವೈರಸ್ ದಾಳಿಯಿಂದಾಗಿ ಬಹುತೇಕ ಉದ್ಯಮಗಳು ಸಂಪೂರ್ಣವಾಗಿ ನೆಲೆಕಚ್ಚಿವೆ. ಕರೋನಾ ಸೋಂಕು ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ಸಂಪೂರ್ಣವಾಗಿ ನೆಲಕಚ್ಚಿದ್ದ ಹೊಸ ವಾಹನಗಳ ಮಾರಾಟ ಪ್ರಮಾಣವು ಇದೇ ಕರೋನಾ ಪರಿಣಾಮವಾಗಿ ಭಾರೀ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಳವಾಗಲು ಕಾರಣವಾಗಿದ್ದು, ಟಾಟಾ ಕಾರು ಮಾರಾಟವು ಕಳೆದ ವರ್ಷಕ್ಕಿಂತಲೂ ಈ ವರ್ಷ ದುಪ್ಪಟ್ಟು ಹೆಚ್ಚಳವಾಗಿದೆ.

 ಟಾಟಾ ಮೋಟಾರ್ಸ್ ನಿರ್ಮಾಣದ ಕಾರುಗಳ ಮಾರಾಟ ಪ್ರಮಾಣವು ಈ ವರ್ಷದ ಅಗಸ್ಟ್ ತಿಂಗಳಿನಲ್ಲಿ ಶೇ. 154ರಷ್ಟು ಏರಿಕೆಯಾಗಿದ್ದು, ಅಗಸ್ಟ್ ತಿಂಗಳಿನಲ್ಲಿ ಒಟ್ಟು 18,538 ಯುನಿಟ್ ಮಾರಾಟ ಮಾಡುವ ಮೂಲಕ ಮೂರನೇ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿ ಹೊರಹೊಮ್ಮಿದೆ. 2019ರ ಅಗಸ್ಟ್ ಅವಧಿಯಲ್ಲಿ ಕೇವಲ 7,316 ಯನಿಟ್ ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ 18,538 ಯುನಿಟ್ ಮಾರಾಟ ಮಾಡಿದೆ..

 ಕರೋನಾ ವೈರಸ್‌ನಿಂದಾಗಿ ಆರಂಭದಲ್ಲಿ ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಕರೋನಾ ವೈರಸ್‌ನಿಂದಾಗಿ ಹೊಸ ವಾಹನಗಳ ಮಾರಾಟದಲ್ಲಿ ಅತ್ಯಧಿಕ ಬೇಡಿಕೆ ಪಡೆದುಕೊಳ್ಳುತ್ತಿದ್ದು, ವೈರಸ್ ಭೀತಿಯಿಂದಾಗಿ ಬಹುತೇಕರು ಸ್ವಂತ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿರುವುದು ಈ ಬೆಳವಣಿಗೆ ಪ್ರಮುಖ ಕಾರಣವಾಗಿದೆ. ಅಲ್ಲದೇ ದೇಶಿಯ ಕಂಪನಿಯ ಬಬ್ಯಾಂಡ್ ಕಾರ್ ಗಳಿಗೆ ಬೇಡಿಕೆ ಹೆಚ್ಚಿದ್ದು. ಮೇಲಾಗಿ ಉಳಿದ ಕಾರ್ ಗಳ ಬೆಲೆಗೆ ಹೋಲಿಕೆ ಮಾಡಿಕೊಂಡರೆ ಟಾಟಾ ಕಂಪನಿಯ ಕಾರ್ ಗಳ ಬೆಲೆ ಅಗ್ಗ ಹೀಗಾಗಿ ಟಾಟಾ ಕಾರಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಸೃಷ್ಠಿ ಮಾಡಿದೆ.

Previous ಅನಾಥ ಮಕ್ಕಳಿಗೆ ಆಸರೆಯಾದ, ಸಾರಾ ಆಸರೆ.
Next ಪೇಟಿಎಂ ನಲ್ಲೂ ಬಂತು ಷೇರು ವಹಿವಾಟು

You might also like

Sorry, no posts were found.

0 Comments

No Comments Yet!

You can be first to comment this post!

Leave a Reply