ಜಿಲ್ಲೆಯಲ್ಲಿಯೇ ಮೊದಲ ಸ್ಕೇಟಿಂಗ್ ಅಂಕಣ ನಿರ್ಮಾಣ

ಜಿಲ್ಲೆಯಲ್ಲಿಯೇ ಮೊದಲ ಸ್ಕೇಟಿಂಗ್ ಅಂಕಣ ನಿರ್ಮಾಣ

ಬಳ್ಳಾರಿ-

ಸಚಿವರ ಶ್ರಮದಿಂದ ತಾಲೂಕಿನ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಆಗುತ್ತಿದ್ದು, ಕ್ರೀಡಾಸಕ್ತರ ಬೇಡಿಕೆಯಂತೆ ಸ್ಕೇಟಿಂಗ್ ಅಂಕಣ ಕೂಡ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಹುಡಾ ಅಧ್ಯಕ್ಷ ಅಶೋಕ್ ಜೀರೆ ತಿಳಿಸಿದರು.ತಾಲೂಕಿನ ಒಳಾಂಗಣ ಕ್ರೀಡಾ ಸಂಕಿರಣದಲ್ಲಿ ಬುಧವಾರ ನಡೆದ 2019-20ನೇಸಾಲಿನ ಡಿ.ಎಂ.ಎಫ್ ಯೋಜನೆಯ ಅಡಿಯಲ್ಲಿ ಮಂಜೂರಾದ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ ಅವರು ಮಾತನಾಡಿದರು.

ಕ್ರೀಡಾಸಕ್ತರಿಗಾಗಿ ಹೊಸಪೇಟೆಯ ಬಳ್ಳಾರಿ ನಿರ್ಮಿತಿ ಕೇಂದ್ರದಿಂದ ರೂ. 1.44ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾ ಸಂಕಿರಣದ ವಿವಿಧ ನವೀಕರಣ ಹಾಗೂ ದುರಸ್ತಿ ಕಾಮಗಾರಿಗಳು ನಡೆಯಲಿವೆ, ವಿಶೇಷವಾಗಿ 86.54 ಲಕ್ಷ ವೆಚ್ಚದಲ್ಲಿ ಸ್ಕೇಟಿಂಗ್ ಅಂಕಣ ನಿರ್ಮಾಣ ಕಾಮಗಾರಿ ಸಹ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಕ್ರೀಡಾ ಶಾಲೆ ನಿರ್ಮಾಣವಾದರೆ ಸ್ಥಳೀಯ ಕ್ರೀಡಾಳುಗಳು ತಾಲೀಮು ನಡೆಸಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ನಂತರ ಮಾತನಾಡಿದ ಸ್ಕೇಟಿಂಗ್ ತರಬೇತುದಾರ ಶ್ರವಣ ಕುಮಾರ್ ಮಾತನಾಡಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸ್ಕೇಟಿಂಗ್ ಅಂಕಣ ಹೊಸಪೇಟೆಯಲ್ಲಿ ನಿರ್ಮಾಣವಾಗುತ್ತಿದ್ದು, ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ ಸಚಿವರಿಗೆ ಧನ್ಯವಾದಗಳು. ಸ್ಕೇಟಿಂಗ್ ಅಂಕಣದಿಂದ ಹಲವಾರು ಮಕ್ಕಳಿಗೆ ಕ್ರೀಡಾಸಕ್ತಿ ಹೆಚ್ಚಾಗಲಿದೆ ಎಂದರು.

Previous 473 ಪೊಲೀಸರಿಗೆ ಕೋವಿಡ್, 7ಜನರ ಸಾವು
Next 60 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ

You might also like

0 Comments

No Comments Yet!

You can be first to comment this post!

Leave a Reply