ಸಿಎಂ ಬದಲಾವಣೆ ಎಂಬುವುದು ಮಾಧ್ಯಮದ ಸೃಷ್ಟಿ:ಸಚಿವ ಜಗದೀಶ್ ಶೆಟ್ಟರ್

ಸಿಎಂ ಬದಲಾವಣೆ ಎಂಬುವುದು ಮಾಧ್ಯಮದ ಸೃಷ್ಟಿ:ಸಚಿವ ಜಗದೀಶ್ ಶೆಟ್ಟರ್

ಹುಬ್ಬಳ್ಳಿ –

 ಸಿಎಂ ದೆಹಲಿ‌ ಭೇಟಿ‌ಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ.ಅವರು ಇಲಾಖೆಗಳಿಗೆ ಸಂಬಂಧಿಸಿದಂತೆ ಹಾಗೂ ಅನುದಾನ ಕುರಿತು ಚರ್ಚಿಸಲು ಹೋಗುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಎಂಬುದು ಮಾಧ್ಯಮಗಳ ಸೃಷ್ಟಿ.ನೀವೇ ಎಲ್ಲ ಹೇಳುತ್ತಿದ್ದೀರಿ. ಇದೆಲ್ಲವೂ ಸುಳ್ಳು. ಸಿಎಂ ಬದಲಾವಣೆ ವಿಚಾರ ಇಲ್ಲ ಎಂದು ಸ್ಪಷ್ಟ ಪಡಿಸಿದರು.

 ಕುಮಾರಸ್ವಾಮಿ ಸಿಎಂ ಭೇಟಿ ವಿಚಾರವಾಗಿ ಮಾತನಾಡಿದ ಅವರು,ಕುಮಾರಸ್ವಾಮಿಯವರು ಯಾಕೆ ಭೇಟಿ ಆಗಿದ್ದೆನೆ ಎಂಬುದನ್ನು ಅವರೇ  ತಿಳಿಸಿದ್ದಾರೆ ಎಂದರು.ಕೈಗಾರಿಕೆಗಳಿಗೆ ಆಕ್ಸಿಜನ್ ಕೊರತೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿದೆ, ಆದರೆ ಉತ್ಪಾದನೆ ಅಷ್ಟೇ ಇದೆ.‌ ಹಾಗಾಗಿ ಕೊರತೆ ಕಂಡು ಬಂದಿದೆ. ಉತ್ಪಾದನೆ ಹೆಚ್ಚಿಸಲು ‌ನಿರ್ದೇಶನ ನೀಡ ಲಾಗಿದೆ.‌ ಮೊದಲು ಜೀವ ಉಳಿಸಲು ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ತದನಂತರದಲ್ಲಿ ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದರು.ಡ್ರಗ್ಸ್ ಪ್ರಕರಣದ ಕುರಿತು ಮಾತನಾಡಿದ ಅವರು, ಡ್ರಗ್ಸ್  ಪ್ರಕರಣಗಳಲ್ಲಿ ರಾಜಕಾರಣಿಗಳ‌ ಮಕ್ಕಳು ಭಾಗಿಯಾಗಿದ್ದರೆ ಅವರ ಹೆಸರು ಕೊಡಿ,‌ಗೃಹ ಸಚಿವರಿಗೆ ಕೊಡುತ್ತೇನೆ ಎಂದು ಹೇಳಿದರು.‌

Previous ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ ವಿಶ್ವಕರ್ಮ ಗುರುಗಳು ಸಮಾಜಕ್ಕೆ ಮಾದರಿ
Next ಅಪಾಯದ ಅಂಚಿನಲ್ಲಿ ನಾರಿಹಳ್ಳ ಡ್ಯಾಮ್?

You might also like

0 Comments

No Comments Yet!

You can be first to comment this post!

Leave a Reply