ನಟಿ ಸಂಜನಾ ಗಲ್ರಾನಿ ಮನೆ ಮೆಲೆ ಸಿಸಿಬಿ ದಾಳಿ.

ನಟಿ ಸಂಜನಾ ಗಲ್ರಾನಿ ಮನೆ ಮೆಲೆ ಸಿಸಿಬಿ ದಾಳಿ.

ಬೆಂಗಳೂರು-

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ..ಬೆಂಗಳೂರಿನ ಇಂದಿರಾ ನಗರದಲ್ಲಿರುವ ಸಂಜನಾ ಫ್ಲಾಟ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಬೆನ್ನಲೇ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಈ ಮಧ್ಯೆ ಸಂಜನಾ ಆಪ್ತ ರಾಹುಲ್‌ ಸಿಸಿಬಿ ವಶದಲ್ಲಿದ್ದು, ಆತ ನೀಡಿದ ಮಾಹಿತಿ ಆಧಾರದ ಮೇಲೆಯೇ ಇಂದು ಬೆಳಿಗ್ಗೆ ಸಂಜನಾ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.ಸಿಸಿಬಿ ಇನ್ಸ್ ಪೆಕ್ಟರ್ ಗಳಾದ ಪುನೀತ್ ,ಕುಮಾರ್ ,ಅಂಜುಮಾಲ ನೇತೃತ್ವದ ತಂಡ  ಸಂಜನಾ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದು, ಮನೆಯಲ್ಲಿ ಸಂಜನಾ ವಿಚಾರಣೆಗೊಳ ಪಡಿಸಿದ್ದಾರೆ. ಮೂರು ಮೊಬೈಲ್ ಪೋನ್ ವಶಕ್ಕೆ ಪಡೆದಿದ್ದು,ತನಿಖೆ ಸರಿಯಾಗಿ ಸಹಕರಿಸುತ್ತಿಲ್ಲ ಎನ್ನಲಾಗಿದೆ.ಈ ಹಿಂದೆ ನಟಿ ರಾಗಿಣಿಯ ಮನೆ ಮೇಲೂ  ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆಸಿಕೊಂಡು ಅರೆಸ್ಟ್ ಮಾಡಲಾಗಿತ್ತು.

Previous ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ರಾಜಕುಮಾರ್ ಪಾಟೀಲ್ ತೇಲ್ಕೂರ ಪದಗ್ರಹಣ
Next ಅಮಾನತ್ತು ಗೊಂಡ ತಹಶಿಲ್ದಾರರ ಪರ ಪ್ರತಿಭಟನೆ.

You might also like

0 Comments

No Comments Yet!

You can be first to comment this post!

Leave a Reply