ಬೆಲ್ ಬಾಟಮ್ ಸಿನಿಮಾ ಮಾದರಿಯಲ್ಲಿ ಕಳ್ಳತನ..!

ಬೆಲ್ ಬಾಟಮ್ ಸಿನಿಮಾ ಮಾದರಿಯಲ್ಲಿ ಕಳ್ಳತನ..!

ಮೈಸೂರು: ಕನ್ನಡದಲ್ಲಿ ಭಾರಿ ಸದ್ದು ಮಾಡಿದ್ದ ಬೆಲ್ ಬಾಟ್ಮ್ ಸಿನಿಮಾ ಕಥೆಯನ್ನು ಹೋಲುವಂತೆ ಕಳ್ಳತನ ಪ್ರಕರಣ ನಡೆದಿದೆ. ಮೈಸೂರಿನ ಸರಸ್ವತಿಪುರಂನಲ್ಲಿರುವ 5 ನೇ ಮುಖ್ಯ ರಸ್ತೆಯಲ್ಲಿರುವ ವಿಜಿಕುಮಾರ ಹಾಗೂ ವನಜಾಕ್ಷಿ ಎಂಬುವರ ದಂಪತಿ ಮನೆಯಲ್ಲಿ ವಿಚಿತ್ರ ರೀತಿಯಲ್ಲಿ ಕಳ್ಳತನ ನೆಡೆದಿದೆ. ಮನೆಗೆ ಹಾಕಲಾಗಿದ್ದ ಬೀಗ ಒಡೆದಿಲ್ಲ, ಬಾಗಿಲು,ಕಿಟಕಿ ಮುರಿದಿಲ್ಲ. ಆದರು ಮನೆಯಲ್ಲಿದ್ದ ಎರಡು ಕೆ.ಜಿ.ಚಿನ್ನ ಕಳ್ಳತನವಾಗಿದೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಕಳ್ಳತನ ನಡೆದಾಗ ವೇಳೆಯಲ್ಲಿ ಬಾಲಕಿ ಮನೆಯಲ್ಲಿಯೇ ಇದ್ದಳು. ಈ ಚಾಲಾಕಿ ಕಳ್ಳರು ಒಂದೇ ಒಂದು ಸಣ್ಣ ಕುರುಹು ಬಿಡದೆ ಚಿನ್ನ ಕದ್ದಿದ್ದಾರೆ. ಮಧ್ಯ ರಾತ್ರಿ ಮೂರು ಗಂಟೆಯ ಸುಮಾರಿಗೆ ಕಳ್ಳತನ ನೆಡೆದಿದೆ. ಕಳೆದ ಎರಡು ವಾರದ ಹಿಂದೆ ಬ್ಯಾಂಕ್ ಸ್ಥಳಾಂತರವಾದ ಹಿನ್ನೆಲೆಯಲ್ಲಿ ಬ್ಯಾಂಕ್ ನಲ್ಲಿ ಒಡಲಾಗಿದ್ದ ಚಿನ್ನವನ್ನು ಮನಗೆ ತಂದಿದ್ರು . ಮೇಲಾಗಿ ಕರೋನಾ ಸೋಂಕು ಕಂಡ ಬಂದ ಹಿನ್ನೆಲೆಯಲ್ಲಿ ಮನೆ ಮಾಲೀಕರು ಚಿನ್ನವನ್ನು ಮರಳಿ ಬ್ಯಾಂಕ್ ನಲ್ಲಿ ಇಡಲು ಆಗಿರಲಿಲ್ಲಾ.‌ ಹೀಗಾಗ ಚಾಲಾಕಿ ಕಳ್ಳರು ಕಳ್ಳತನ ಮಾಡಿದ್ದಾರೆ.

ಈ ಕಳ್ಳರ ಕೈಚಳಕವನ್ನು ನೋಡಿದರೆ ಕನ್ನಡ ಚಲನಚಿತ್ರ ಬೆಲ್ ಬಾಟಮ್ ಸಿನಿಮಾ ನೆನೆಪಿಗೆ ಬರುತ್ತದೆ. ಏನೇ ಇರಲಿ 2 ಕೆ.ಜಿ ಚಿನ್ನ ಎಂದರೆ ಸಾಮಾನ್ಯನೇ.? ಇನ್ನೂ ಸ್ಥಳಕ್ಕೆ ಸರಸ್ವತಿಪುರಂ ಪೊಲೀಸ್ ಠಾಣಾಧಿಕಾರಿ ವಿಜಯಕುಮಾರ್ ಹಾಗೂ ಭವ್ಯ ಭೇಟಿ‌ ನೀಡಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಸಹಾಯದಿಂದ ತನಿಖೆ ಪರಿಶೀಲನೆ ನೆಡೆಸಿದ್ದಾರೆ. ಈ ಕುರಿತಾಗಿ ಸರಸ್ವತಿಪುರಂ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Previous ಯಶ್ ಪುತ್ರನ ನಾಮಕರಣ, ಕೊನೆಗೂ ರಿವಿಲ್ ಯಾದ ಯಶ್ ಪುತ್ರನ ಹೆಸರು
Next ಇನ್ನುಮುಂದೆ ಆರಾಮವಾಗಿ ಬಾರ್ ನಲ್ಲಿ ಕುಳಿತು ಕುಡಿಯಬಹುದು

You might also like

0 Comments

No Comments Yet!

You can be first to comment this post!

Leave a Reply