ಬೆಳಗಾವಿ ಸಂಸದ ಸುರೇಶ್ ಅಂಗಡಿ ಇನ್ನಿಲ್ಲಾ.

ಬೆಳಗಾವಿ ಸಂಸದ ಸುರೇಶ್ ಅಂಗಡಿ ಇನ್ನಿಲ್ಲಾ.

ದೆಹಲಿ..

ಕೇಂದ್ರ ರೈಲ್ವೆ ಕಾಥೆ ಸಚಿವ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ ಇಂದು ಕರೋನಾ ಮಾಹಾ ಮಾರಿಗೆ ಬಲಿಯಾಗಿದ್ದಾರೆ‌ . ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಸಾವಿಗೀಡಾಗಿದ್ದಾರೆ. 64 ವರ್ಷದ ಅವರು ಕಳೆದ ಹಲವು ದಿನಗಳಿಂದ ಕರೋನಾ ಸೋಂಕು ಪೀಡಿತರಾಗಿದ್ದು ಹೀಗಾಗಿ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಇಂದು ಇಹಲೋಕ ತೆಚಿಸಿದ್ದಾರೆ. ಸತತ ನಾಲ್ಕು ಭಾರಿ ಬೆಳಗಾವಿ ಇಂದ ಸಂಸದರಾಗಿ ಆಯ್ಕೆಯಾದ ಹೆಮ್ಮೆ ಇವರಿಗೆ ಸಲ್ಲುತ್ತದೆ. 2004 ರಿಂದ ಸತತವಾಗಿ ನಾಲ್ಕು ಭಾರಿ ಸಂಸದರಾಗಿ ಆಯ್ಕೆ ಆಗಿದ್ದರು. ಸುರೇಶ್ ಚನ್ನಬಸಪ್ಪ ಅಂಗಡಿ ಅವರು ಪ್ರಸ್ತುತ ಭಾರತದ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದು ಮತ್ತು ಕರ್ನಾಟಕದ ಪ್ರಭಾವಿ ನಾಯಕರಾಗಿದ್ದರು. ಕಳೆದ ಕಲೆ ದಿನಗಳಿಂದ ಉಸಿರಾಟದ ತೊಂದರೆ ಇಂದ ಬಳಲುತ್ತಿದ್ದ ಅವರು ಇಂದು ಉಸಿರಾಟದ ತೊಂದರೆ ಉಲ್ಬಣಗೊಂಡ ಕಾರಣ ತಮ್ನ ಕೊನೆ ಉಸಿರು ಎಳೆದಿದ್ದಾರೆ.

Previous ಮಾಸ್ಕ್ ಧರಿಸಿ ಪರೀಕ್ಷೆ ಪರೀಕ್ಷೆ ಬರೆಯಲು ಬಂದ ನಕಲಿ ವಿದ್ಯಾರ್ಥಿ
Next S. P. ಬಾಲಸುಬ್ರಹ್ಮಣ್ಯಂ ಇನ್ನಿಲ್ಲ

You might also like

0 Comments

No Comments Yet!

You can be first to comment this post!

Leave a Reply