ರಾಗಿಣಿ ನಾಳೆ ಜಾಮೀನು ಅರ್ಜಿ ವಿಚಾರಣೆ!!

ರಾಗಿಣಿ ನಾಳೆ ಜಾಮೀನು ಅರ್ಜಿ ವಿಚಾರಣೆ!!

ಬೆಂಗಳೂರು-

ಈಗಾಗಲೇ ಡ್ರಗ್ಸ್ ಮಾಫಿಯಾ ವಿಚಾರವಾಗಿ ಜೈಲು ಪಾಲಾಗಿರುವ ಕನ್ನಡ ಚಿತ್ರ ನಟಿ ರಾಗಿಣಿ ಅವರ ಜಮೀನು ಅರ್ಜಿ ನಾಳೆ ವಿಚಾರಣೆ ನಡೆಯಲಿದೆ. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ರಾಗಿಣಿ ಬೇಲಿಗಾಗಿ ಶನಿವಾರವೇ ಅರ್ಜಿ ಸಲ್ಲಿಸಿದ್ದು ಅದು ಸೋಮವಾರದ ನಂತರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಆದ್ರೆ ಮಾಧಕ ವಸ್ತುಗಳ ಸರಬರಾಜು ಹಾಗೂ ಸೇವೆನೆ ಅಂಥಾ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಬೇಗನೆ ಬೇಲ್ ಸಿಗುವುದು ಅಷ್ಟ ಸುಲಭವಲ್ಲಾ‌. ಕಾರಣ ಕನಿಷ್ಠ ಪಕ್ಷ ಒಂದು ವರ್ಷ ಇಲ್ಲವೇ ಆರು ತಿಂಗಳ ಕಾಲ ರಾಗಿಣಿ ಅವರು ಜೈಲಿನಲ್ಲಿ ಇರಲೇ ಬೇಕಾದ ಅನಿವಾರ್ಯತೆ ಎದುರಾಗಲಿದೆ.

ಶುಕ್ರವಾರ ಸಂಜೆ ಬಂಧನಕ್ಕೆ ಒಳಗಾದ ರಾಗಿಣಿ ಅವರನ್ನು ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ. ಆರೋಗ್ಯ ತಪಾಸಣೆ ಮಾಡಲಾಗಿದ್ದು ಸೋಮವಾರ ಅವರನ್ನು ವಿಚಾರಣೆಗೆ ಗುರಿಪಡಿಸುವ ಸಾಧ್ಯತೆ ಇದೆ.

ರಾಗಿಣಿ ಅವರ ಜೊತೆ 11 ಮಂದಿ ಇತರರ ಮೇಲೂ ಪ್ರಕರಣ ದಾಖಲಾಗಿದೆ. ಈ ಪೈಕಿ ನಿರ್ಮಾಪಕ ಮತ್ತು ರಾಗಿಣಿಯ ಸ್ನೇಹಿತ ಶಿವಶಂಕರ್‍ ಮತ್ತು ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಅವರ ಹೆಸರೂ ಸಹ ಆರೋಪಿಗಳ ಪಟ್ಟಿಯಲ್ಲಿದೆ

Previous ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸಹಾಯಕ್ಕೆ ದಾವಿಸಿದ ಹಳೆಯ ವಿದ್ಯಾರ್ಥಿಗಳು
Next 143 ಜನ ಗುಣಮುಖ, 180 ಹೊಸ ಪ್ರಕರಣಗಳು ದೃಡ

You might also like

0 Comments

No Comments Yet!

You can be first to comment this post!

Leave a Reply