ಯೂನಿಟ್-3ರ ನಿರ್ಮಾಣದ ನೀಲನಕ್ಷೆಗೆ ಶೀಘ್ರವೇ  ಅನುಮೋದನೆ

ಯೂನಿಟ್-3ರ ನಿರ್ಮಾಣದ ನೀಲನಕ್ಷೆಗೆ ಶೀಘ್ರವೇ ಅನುಮೋದನೆ

ಬಾಗಲಕೋಟೆ-

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾದಿತಗೊಳಗಾಗುವ ಆರ್.ಎಲ್ 523 ರಿಂದ 525 ಮೀಟರ್ ವರೆಗಿನ ಯುನಿಟ್-3ರ ನಿರ್ಮಾಣದ ನೀಲನಕ್ಷೆ ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲಿಯೇ ಅನುಮೋದನೆ ದೊರೆಯಲಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.ಬಾಗಲಕೋಟೆ ಪಟ್ಟಣ ಅಭಿವೃಧ್ದಿ ಪ್ರಾಧಿಕಾರದ ಸಭಾಂಗಣದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಯುನಿಟ್-3ರ ವ್ಯಾಪ್ತಿಯಲ್ಲಿ ಕೈಗೊಂಡ ಸಮೀಕ್ಷೆಯನ್ವಯ 2421 ಮಾಲಿಕರು ಹಾಗೂ 1163 ಬಾಡಿಗೆದಾರು ಸಂತ್ರಸ್ಥರಾಗಿದ್ದು, ಈ ವ್ಯಾಪ್ತಿಯ ಸಂತ್ರಸ್ಥರಿಗೆ ನವನಗರದ ಯುನಿಟ್-3ರಲ್ಲಿ ಪುನರ್‍ವಸತಿ ಕಲ್ಪಿಸಲು ಕಟ್ಟಡಗಳ ಸ್ವಾಧೀನ ಐತೀರ್ಪು ಆಗಿದ್ದು, ಪರಿಹಾರಧನ ಪಾವತಿಸಲಾಗಿದೆ ಎಂದರು.

ಈ ವ್ಯಾಪ್ತಿಯಲ್ಲಿ ಬರುವ ಸಂತ್ರಸ್ಥರ ಪುನರ್‍ವಸತಿಗಾಗಿ 1640 ಎಕರೆ ಜಮೀನು ಬಾಗಲಕೋಟೆ ಮುಚಖಂಡಿ ತಾಂಡಾ ಹಾಗೂ ಸಿಗಿಕೇರಿ ಗ್ರಾಮಗಳ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದ್ದು, ಅದರಲ್ಲಿ 1224.05 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಉಳಿದ ಜಮೀನಿನ ಮಾಲಿಕರು ನ್ಯಾಯಾಲಯದಿಂದ ಸ್ವಾಧೀನ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿದ್ದು, ಇಂತರಹ ಜಮೀನುಗಳನ್ನು ನ್ಯಾಯಾಲಯದ ತೀರ್ಮಾನದ ನಂತರ ಕ್ರಮಕೈಗೊಳ್ಳಲಾಗುತ್ತಿದೆ. ಇವೆಲ್ಲವನ್ನೂ ಸೇರಿ ನೀಲನಕ್ಷೆ ತಯಾರಿಸಿದ್ದ, ಅನುಮೋದನೆ ನಂತರ ನಿರ್ಮಾಣ ಕಾರ್ಯಕೈಗೊಳ್ಳಲಾಗುವುದೆಂದು ತಿಳಿಸಿದರು.

ಯುನಿಟ್-3ರನ್ನು 300 ರಿಂದ 500 ಎಕರೆಗೆ 1 ಬ್ಲಾಕ್‍ದಂತೆ ಆಧುನಿಕ ಮಾಧರಿಯ 5 ಬ್ಲಾಕ್‍ಗಳನ್ನೊಳಗೊಂಡ ಲೇಔಟ್ ಪ್ಲ್ಯಾಲ್ ತಯಾರಿಸಿದ್ದು, ನಗರ ಯೋಜನಾ ಇಲಾಖೆಗೆ ಅನುಮೋದನೆಗೆ ಸಲ್ಲಿಸಲಾಗಿದೆ. ಅದು ಅನುಮೋದನೆ ಹಂತದಲ್ಲಿದ್ದು, 12.27 ಕೋಟಿ ರೂ. ಶುಲ್ಕ ಪಾತಿಸಿಗೆ ನಗರ ಯೋಜನಾ ಪ್ರಾಧಿಕಾರವು ತಿಳಿಸಿದ್ದು, ಈ ಶುಲ್ಕಕ್ಕೆ ವಿನಾಯಿತಿ ಕೋರಿ ಜಲಸಂಪನ್ಮೂಲ ಇಲಾಖೆ ಮುಖಾಂತರ ನಗರಾಭಿವೃದ್ದಿ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಸದರಿ ಪ್ರಸ್ತಾವನೆ ಪರಿಗಣಿಸಿ ಶುಲ್ಕ ವಿನಾಯಿತಿ ನೀಡಿದ್ದು, ಈಗ 9.45 ಕೋಟಿ ರೂ. ಪಾವತಿಸಲಾಗಿದ್ದು, ಯುನಿಟ್-3ರ ನೀಲನಕ್ಷೆಗೆ ಶೀಘ್ರವೇ ಅನುಮೋದನೆ ದೊರೆಯಲಿದೆ ಎಂದರು.

ಯುನಿಟ್-1ರ ಆರ್.ಎಲ್ 521 ಮೀಟರ್ ವ್ಯಾಪ್ತಿಯಲ್ಲಿ ಬರುವ 4585 ಯೋಜನಾ ಸಂತ್ರಸ್ಥರನ್ನು ಸ್ಥಳಾಂತರಿಸಿ ನವನಗರದ ಯುನಿಟ್-1ರಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಯುನಿಟ್-1ರ ನವೀಕರಣ ಮತ್ತು ದುರಸ್ಥಿ ಕಾಮಗಾರಿಗಳನ್ನು ಕೈಗೊಳ್ಳಲು 133 ಕೋಟಿ ರೂ.ಗಳೊಂದಿಗೆ ನಗರಸಭೆಗೆ ಹಸ್ತಾಂತರಿಸಲಾಗಿತ್ತು, ಸರಕಾರದ ಆದೇಶದನ್ವು ಆ ಹಣವನ್ನು ಮರಳಿ ಅದರ ಮೇಲಿನ ಆಕರಿಸಿದ ಬಡ್ಡಿಯ ಸಮೇತ ಪ್ರಾಧಿಕಾರಕ್ಕೆ ಪಡೆದುಕೊಳ್ಳಲಾಗಿದೆ. ಸರಕಾರದ ಆದೇಶದನ್ವಯ 150 ಕೋಟಿ ರೂ.ಗಳಿಗೆ ಮೀರದಂತೆ ನವನಗರದ ಯುನಿಟ್-1ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಕಾಮಗಾರಿ ಅನುಷ್ಠಾನಗೊಳ್ಳಲಿದೆ ಎಂದರು.

ಯುನಿಟ್-2ರ ವ್ಯಾಪ್ತಿಯ ಸಂತ್ರಸ್ಥರ ಕುಟುಂಬಗಳನ್ನು ನವನಗರದ ಯುನಿಟ್-2ರಲ್ಲಿ ಪುನರ್‍ವಸತಿ ಕಲ್ಪಿಸಲು ಉದ್ದೇಶಿಸಿದ್ದು, ಬಿಟಿಡಿಎ ವ್ಯಾಪ್ತಿಯಲ್ಲಿ ಬರುವ 1333 ಎಕರೆ ಪ್ರದೇಶದಲ್ಲಿ ಈಗಾಗಲೇ 53 ಸೆಕ್ಟರ್‍ಗಳನ್ನು ಗುರುತಿಸಿದ್ದು, ಅದರಕ್ಕಿ 42 ಸೆಕ್ಟರ್‍ಗಳನ್ನು ವಸತಿಗಾಗಿ, 6 ಸೆಕ್ಟರ್‍ಗಳನ್ನು ಸರಕಾರಿ, ಅರೆ ಸರಕಾರಿ, ಸಂಸ್ಥೆಗಳು ಇತ್ಯಾದಿಗಳಿಗೆ ಮೀಸಲಿಡಲಾಗಿದೆ. 36 ವಸತಿ ಸೆಕ್ಟರ್‍ಗಳಲ್ಲಿ ಮೂಲಭೂತಸೌಕರ್ಯಗಳಾದ ರಸ್ತೆ, ಮಳೆ ನೀರು ಚರಂಡಿ, ನೀರು ಸರಬರಾಜು, ಒಳಚರಂಡಿ, ವಿದ್ಯುತ್ತೀಕರಣ ಅಭಿವೃದ್ದಿ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ ಎಂದು ತಿಳಿಸಿದರು.

Previous ಯಾವುದೇ ಕಾರಣಕ್ಕು ರಾಗಿಣಿ ಅರೆಷ್ಟ್ ಮಾಡಬೇಡಿ ..!
Next ವಾಯುಪಡೆಯ ನೇಮಕಾತಿ ರ್ಯಾಲಿ

You might also like

0 Comments

No Comments Yet!

You can be first to comment this post!

Leave a Reply