ಯೋಗ ತರಬೇತುದಾರರಿಂದ – ಅರ್ಜಿ ಆಹ್ವಾನ

ಯೋಗ ತರಬೇತುದಾರರಿಂದ – ಅರ್ಜಿ ಆಹ್ವಾನ

ಮಂಗಳೂರು-

 ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೆಲ್‍ನೆಸ್ ಸೆಂಟರುಗಳಾದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ – ಬಳ್ಕುಂಜೆ, ಸಜಿಪಮೂಡ ಇಲ್ಲಿಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಯೋಗ ತರಬೇತುದಾರರು (ಪಾರ್ಟ್ ಟೈಂ)-II ಹುದ್ದೆಗೆ ಹಾಗೂ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಕಣಿಯೂರು ಇಲ್ಲಿಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಯೋಗ ತರಬೇತುದಾರರು (ಪಾರ್ಟ್ ಟೈಂ)-I ಮತ್ತು II ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

 ಅಭ್ಯರ್ಥಿಗಳು ಕನಿಷ್ಟ 10+2 ಉತ್ತೀರ್ಣರಾಗಿರಬೇಕು ಮತ್ತು ಯೋಗ ವೆಲ್‍ನೆಸ್ ಇನ್‍ಸ್ಟ್ರಕ್ಟರ್ ಕೋರ್ಸ್ ಪ್ರಮಾಣ ಪತ್ರವನ್ನು ಯೋಗ ಸರ್ಟಿಫಿಕೇಷನ್ ಬೋರ್ಡ್‍ನಿಂದ ಪಡೆದಿರಬೇಕು ಮತ್ತು ಪ್ರತಿಷ್ಟಿತ ಸಂಸ್ಥೆಯಲ್ಲಿ ಯೋಗ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಹೊಂದಿರಬೇಕು. ವಯೋಮಿತಿ ಕನಿಷ್ಟ 21 ವರ್ಷ ಹಾಗೂ ಗರಿಷ್ಟ 60 ವರ್ಷ.  ಸ್ಥಳೀಯರಿಗೆ ಪ್ರಾಶಸ್ತ್ಯವನ್ನು ನೀಡಲಾಗುವುದು. ಅರ್ಜಿ ಸಲ್ಲಿಕೆಯ ಕೊನೆಯ ಸೆಪ್ಟೆಂಬರ್ 8 ಕೊನೆಯ ದಿನವಾಗಿದೆ.

 ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಚೇರಿ ಅಥವಾ ದೂರಾವಾಣಿ ಸಂಖ್ಯೆ; 0824-2453063 ಸಂಪರ್ಕಿಸಲು ಮಂಗಳೂರು ಜಿಲ್ಲಾ ಆಯುಷ್ ಅಧಿಕಾರಿ ಪ್ರಕಟಣೆ ತಿಳಿಸಿದೆ.

Previous ಆರೋಗ್ಯ ಇಲಾಖೆಯಲ್ಲಿ ವೈದ್ಯರ ನೇಮಕಾತಿ
Next ಒಳಚರಂಡಿ ಮಿಶ್ರಿತ ನೀರು ಕುಡಿಯುವ ಬಳ್ಳಾರಿ ಜನತೆ..?

You might also like

0 Comments

No Comments Yet!

You can be first to comment this post!

Leave a Reply