ಭಾರತೀಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟ ಆ್ಯಪಲ್…!

ಭಾರತೀಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟ ಆ್ಯಪಲ್…!

ಬೆಂಗಳೂರು: ವಿಶ್ವದ ತಂತ್ರಜ್ಞಾನ ಮಾರುಕತ್ತೆಯಲ್ಲಿ ತನ್ನದೇ ಚಾಪನ್ನು ಮೂಡಿಸಿದ ಆ್ಯಪಲ್ ಸಂಸ್ಥೆ ವಿಶಿಷ್ಟ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಮೂಲಕ ತನ್ನದೇ ಆದಂತಹ ಗ್ರಾಹಕರನ್ನು ಸೆಳೆದಿದೆ. ಈಗಲೂ ಕೂಡಾ ಅದರ ಹವಾ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಆ್ಯಪಲ್ ವೇಗವಾಗಿ ಮುಂದುವರೆಯುತ್ತಿದ್ದು , ಇದೀಗ ಆಪಲ್ ತನ್ನ ವ್ಯಾಪಾರ ವಹಿವಾಟನ್ನು ಹೆಚ್ಚಿಸುವ ಸಲುವಾಗಿ ಆನ್ ಲೈನ್ ಸ್ಟೊರ್ ನ್ನು ಮಾರುಕತ್ಟಗೆ ತೆರೆಯುತ್ತಿದೆ. ಅತಿ ಹೆಚ್ಚಾಗಿ ಮೊಬೈಲ್ ಫೋನ್ ಕೊಳ್ಳಲು ಮತ್ತು ಬಳಸಲು ಭಾರತ ಹೆಸರುವಾಸಿಯಾಗಿದೆ.

ಭಾರತೀಯ ಮಾರುಕತ್ತಯಲ್ಲಿ ಹೆಚ್ಚಾಗಿ ಫೋನ್ ಗಳು ಮಾರಾಟವಾಗತ್ತವೆ. ಎಲ್ಲ ಕಂಪನಿಯ ಫೋನ್ ಗಳು ಹೆಚ್ಚಾಗಿ ಮಾರಾಟವಾಗುವ ದೇಶವೆಂದರೆ, ಅದು ಭಾರತ ಆದ್ದರಿಂದ ಫೋನ್ ಗಳನ್ನು ಉತ್ಪಾದಿಸುವವರಿಗೆ ಭಾರತೀಯ ಮಾರುಕಟ್ಟೆಯೂ ಅತ್ಯಂತ ಪ್ರೀಯವಾಗಿದೆ. ಸಾಮಾನ್ಯವಾಗಿ ಎಲ್ಲ ಕಂಪನಿಯೂ ಇನ್ನು ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿ ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಆನ್ ಲೈನ್ ಮಾರುಕಟ್ಟೆಯ ಮೊರೆ ಹೊಗುತ್ತಿದ್ದಾರೆ. ಹಾಗೆಯೇ ಇದೀಗ ಆ್ಯಪಲ್ ಕಂಪನಿಯೂ ಆನ್ ಲೈನ್ ಸ್ಟೋರ್ ಗಳನ್ನು ತೆರೆಯಲು ಮುಂದಾಗಿದ್ದು ವಿಶೇಷವಾಗಿದೆ…

ಕೊರೊನಾ ಮಹಾಮಾರಿಯಿಂದಾಗಿ ಜಗತ್ತಿನ ಬಹುತೇಕ ವ್ಯಾಪಾರ ವಹಿವಾಟುಗಳು ನಡೆಯುತ್ತಿಲ್ಲ. ಆದ್ದರಿಂದ ಎಲ್ಲ ವ್ಯಾಪಾರಸ್ತರು ನಷ್ಟವನ್ನು ಇಂದಿಗೂ ಅನುಭವಿಸುತ್ತಿದ್ದಾರೆ. ಅಗತ್ಯವಿರುವ ವಸ್ತಗಳನ್ನು ಖರೀದಿಸುವ ಬಯಕೆ ಇದ್ದರೂ ಹೊರಗೆ ಬರದಂತಹ ಸ್ಥಿತಿ ಕೊರೊನಾದಿಂದ ನಿರ್ಮಾಣವಾಗಿದೆ. ಆದ್ದರಿಂದ ಜನರು , ಎಲ್ಲ ಬೇಕಾದಂತಹ ವಸ್ತಗಳ ಖರೀದಿಗೆ ಆನ್ ಲೈನ್ ಮೊರೆ ಹೋಗಿದ್ದಾರೆ. ಅದನ್ನು ಆಧಾರವಾಗಿಟ್ಟುಕೊಂಡು ಆ್ಯಪಲ್ ಕಂಪನಿಯೂ ಅದೇ ನಿಯಮವನ್ನು ಪಾಲಿಸುತ್ತಿದೆ. ಅದರಿಂದ ಜನರಿಗೂ ಅನುಕೂಲವಾಗಿ ಮತ್ತು ಆ್ಯಪಲ್ ಕಂಪನಿಯ ವ್ಯಾಪಾರ ಚೆನ್ನಗಿ ಸಾಗಲಿ ಎಂಬುವುದು ಅವರ ಆಶಯವಾಗಿದೆ….

ಇದೇ ಸೆಪ್ಟೆಂಬರ್ ನಲ್ಲಿ ಆನ್ ಲೈನ್ ಆ್ಯಪಲ್ ಸ್ಟೋರಗಳು ಆರಂಭಗೊಳ್ಳಲ್ಲಿದೆ. ದೀಪಾವಳಿ ಹಬ್ಬಕ್ಕೆ ಜನರು ಹೊಸ ಫೋನ್ ಗಳನ್ನು ಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಷ್ಟರಲ್ಲಿ ಆ್ಯಪಲ್ ಸ್ಟೋರ್ ಗಳ ಪ್ರಚಾರ ಕೊಟ್ಟು, ಅಲ್ಲಿ ವಿಶಿಷ್ಟ ರಿಯಾಯಿತಿಗಳನ್ನು ಕೊಟ್ಟು ಹ್ರಾಹರನ್ನು ಸೆಳೆಯುವ ಮಾರ್ಗ ಇದಾಗಿದೆ. ಭಾರತದಲ್ಲಿ 1.3 ಶತಕೊಟಿ ಜನರು ದೊಡ್ಡ ಮತ್ತು ಸಣ್ಣ ಪ್ರಮಾಣದ ಸ್ಮಾರ್ಟಫೋನ್ ಗಳ ಮಾರುಕಟ್ಟಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗಾಗಿಯೇ ಇಲ್ಲಿ ಆ್ಯಪಲ್ ಆನ್ ಲೈನ್ ಸ್ಟೋರ್ ತೆಗೆಯುವ ಮುಖಾಂತರ ತಮ್ಮ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಆ್ಯಪಲ್ ಫೋನ್ ಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಆ್ಯಪಲ್ ಸಂಸ್ಥೆ ಅಭಿಪ್ರಾಯ ಪಟ್ಟಿದೆ. ಹೌದು ಹೇಗೂ ಕೊರೊನಾದಿಂದ ಬಹುತೇಕ ಎಲ್ಲ ಕೆಲಸಗಳು ಫೋನ್ ಮುಖಾಂತರವೆ ನಡೆಯುತ್ತಿವೆ. ಹಾಗಾಗೀ ಜನರು ಕೊಳ್ಳುಕೊಳ್ಳುವ ನಿರೀಕ್ಷೇಯಲ್ಲಿ ಆ್ಯಪಲ್ ಕಂಪನಿ ಇದೆ.

Previous ಇಂದಿನ ಸ್ಟಾಕ್-ಮಾರುಕಟ್ಟೆ-ಮಾಹಿತಿ
Next ಭಾರತದ ರಾಫೆಲ್ ಗೆ ಗಂಡಾತರ...!

You might also like

0 Comments

No Comments Yet!

You can be first to comment this post!

Leave a Reply