ಕೂದಲೆಳೆ ಅಂತರದಲ್ಲಿ ನಟಿ ಕಾಜಲ್ ಅಗರವಾಲ್ ಪಾರು…!

ಕೂದಲೆಳೆ ಅಂತರದಲ್ಲಿ ನಟಿ ಕಾಜಲ್ ಅಗರವಾಲ್ ಪಾರು…!

90 ರ ದಶಕದಲ್ಲಿ ಭಾರಿ ಸದ್ದು ಮಾಡಿದ್ದ ಕಮಲ್ ಹಾಸನ್ ಅಭಿನಯದ  ಇಂಡಿಯನ್  ಚಿತ್ರ ಈಗ ಎರಡನೇ ಭಾಗ ಇಂಡಿಯನ್ -2 ರೆಡಿಯಾಗುತ್ತಿದೆ, ಇಧೆ ಚಿತ್ರದ ಚಿತ್ರಿಕರಣದ ವೇಳೆಯಲ್ಲಿ ಶೂಟಿಂಗ್‌ನ ಭಾಗವಾಗಿ ಲೈಟಿಂಗ್ ಹಾಕಲಾಗುತ್ತಿತ್ತು. ಈ ಸಂದರ್ಭದಲ್ಲಿ ರಾತ್ರಿ ಸುಮಾರು 150 ಅಡಿ ಎತ್ತರದಿಂದ ಕ್ರೇನ್ ಮುರಿದು ಚಿತ್ರತಂಡವಿದ್ದ ಟೆಂಟ್ ಮೇಲೆ ಬಿದ್ದಿದೆ. ಕಾರಣ ಮೂವರು ಮೃತಪಟ್ಟಿದ್ದು, ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸುಪರ್ ಸ್ಟಾರ್ ಕಮಲ್ ಹಾಸನ್ ನಾಯಕನಟನಾಗಿರುವ ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಇಂಡಿಯನ್ 2’ ಸಿನಿಮಾ ಸೆಟ್‌ನಲ್ಲಿ ಭಾರಿ ದುರಂತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕಿಯರಲ್ಲಿ ಒಬ್ಬರಾಗಿರುವ ಕಾಜಲ್ ಅಗರವಾಲ್ ಟ್ವೀಟ್ ಮಾಡಿದ್ದಾರೆ.

ಇಂಡಿಯನ್ 2 ಸೆಟ್‌ನಲ್ಲಿ ನಮ್ಮೊಂದಿಗೆ ಕೆಲಸ ಮಾಡುವ ಕೃಷ್ಣ, ಚಂದ್ರನ್, ಮಧು ಅವರನ್ನು ನಿನ್ನೆ ರಾತ್ರಿ ನಡೆದ ಅವಘಡದಲ್ಲಿ ಕಳೆದುಕೊಂಡಿದ್ದು ತುಂಬಾ ನೋವಿನ ಸಂಗತಿ.  ಮೃತಪಟ್ಟವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪ ತಿಳಿಸುತ್ತಿದ್ದೇನೆ. ದೇವರು ಅವರಿಗೆ ಇನ್ನಷ್ಟು ಧೈರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನ ಎಂದು ಟ್ವಿಟ್ ಮಾಡಿದ್ದಾರೆ . ಬಳಿಕ ಇನ್ನೊಂದು ಟ್ವೀಟ್ ಮಾಡಿದ್ದು, ಕ್ರೇನ್ ಅವಘಡದ ಶಾಕ್‍ನಲ್ಲಿ ನಾನು ಇನ್ನೂ ಇದ್ದೇನೆ. ಕೇವಲ ಕೆಲವು  ಕ್ಷಣಗಳ ಅಂತರದಲ್ಲಿ ನಾನು ಈ ಅವಘಡದಿಂದ ಪಾರಾಗಿ ಈ ದಿನ ನಿಮಗೆ ಟ್ವೀಟ್ ಮಾಡುತ್ತಿದ್ದೇನೆ. ಆ ಒಂದು ಕ್ಷಣ, ನನಗೆ ಕಾಲ, ಬದುಕಿನ ಮೌಲ್ಯ ಅರಿವಾಯಿತು ಎಂದಿದ್ದಾರೆ….

ಶಂಕರ್ ನಿರ್ದೇಶನದಲ್ಲಿ 1996ರಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಸಿನಿಮಾ ಇಂಡಿಯನ್ ಚಿತ್ರದ ಮುಂದುವರೆದ ಭಾಗ ಇದಾಗಿದ್ದು . ಈ ಚಿತ್ರದಲ್ಲಿ ಕಮಲ್ ಹಾಸನ್, ಸಿದ್ಧಾರ್ಥ್, ಕಾಜಲ್ ಅಗರವಾಲ್, ರಾಕುಲ್ ಪ್ರೀತ್ ಸಿಂಗ್ ಮುಖ್ಯ ಪಾತ್ರಗಳನ್ನು ಪೋಷಿಸಿದ್ದಾರೆ. ಅನಿರುಧ್ ಸಂಗೀತ ಚಿತ್ರಕ್ಕಿದೆ. ಲೈಕಾ ಪ್ರೊಡಕ್ಷನ್ ಲಾಂಛನದಲ್ಲಿ ಸಿನಿಮಾ ನಿರ್ಮಿಸಲಾಗುತ್ತಿದೆ. ಇದೇ ವರ್ಷದ ಕೊನೆಯಲ್ಲಿ ಚಿತ್ರಿ ತೆರೆಗೆ ಬರಲಿದೆ ಆದ್ರೆ ಚಿತ್ರಿಕರಣ ವೇಳೆಯಲ್ಲಿ ನಡೆದ ಈ  ದುರಂತ ಚಿತ್ರತಂಡಕ್ಕೆ ಸಾಕಷ್ಟು ನೋಫವು ತಂದಿದೆ…

Previous ಹುಲಿಯ ಹಾಲಿನ ಮೇವು ಸಿನಿಮಾದಲ್ಲಿ ವರನಟ ಡಾ.ರಾಜ್ ರೊಂದಿಗೆ ಸೆಣಸಿದ ಪೈಲ್ವಾನ್ ಗೌಡಪ್ಪ.
Next ಕಾಂಗ್ರೆಸ್ ಮುಸ್ಲಿಮರನ್ನು ಬಾವಿಯಲ್ಲಿ ಇಟ್ಟಿರುತ್ತಾರೆ, ಚುನಾವಣಾ ಬಂದಾಗ ಮಾತ್ರ ಹೊರತೆಗೆಯುತ್ತಾರೆ

You might also like

0 Comments

No Comments Yet!

You can be first to comment this post!

Leave a Reply