ಅಜ್ಜಿಯ ಆಸೆ ಪೂರೈಸಿದ ಯುವ ಬ್ರಿಗೇಡ್

ಅಜ್ಜಿಯ ಆಸೆ ಪೂರೈಸಿದ ಯುವ ಬ್ರಿಗೇಡ್

ಬೆಳಗಾವಿ –

ಕಳೆದ ವರ್ಷದಲ್ಲಿ ಬಂದ ಪ್ರವಾಹದಲ್ಲಿ ಉತ್ತರ ಕರ್ಣಾಟಕದ ಅದೆಷ್ಟೋ ಕುಟುಂಬಗಳು ತಮ್ಮ ಮನೆಮಠ ಕಳೆದುಕೊಂಡ ಬೀದಿಗೆ ಬಿದ್ದಿವೆ. ಬೆಳೆದ ಬೆಳೆ ಮನೆಯಲ್ಲಿ ಇದ್ದ ದವಸ ಧಾನ್ಯ ಮನೆಯಲ್ಲಿ ಇದ್ದ ಎಲ್ಲಾ ವಸ್ತುಗಳನ್ನಿ ಕಳೆದುಕೊಂಡ ತುತ್ತು ಕೂಳಿಗು ಪರತಿಪಿಸಿದ್ದು ಇನ್ನು ಕಣ್ಮುಂದೆ ಹಾಗೆ ಇದೆ. ಈ ವರ್ಷವೂ ಪ್ರವಾಹ ಬಂದಿದ್ದು ಅಷ್ಟೇನೂ ಆಸ್ತಿಪಾಸ್ತಿ ಹಾನಿ ಮಾಡಲಿಲ್ಲಾ. ಆದ್ರೆ ಮನೆಗಳು ಹಾಳಾಗಿಲ್ಲಾ ಹೊರತೆ ಹೊಲದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಕಳೆದ ವರ್ಷ ಉತ್ತರ ಕರ್ಣಾಟಕದಲ್ಲಿ ಉಂಟಾದ ಪ್ರವಾಹದ ಹಿನ್ನೆಲೆಯಲ್ಲಿ ಅದೆಷ್ಟೋ ಜನರ ತಮ್ಮ ಸಹಾಯ ಹಸ್ತ ಚಾಚಿದ್ರು. ಇನ್ನು ಅದರಂತೆ ಬೆಳಗಾವಿ ಬಳಿಯ ಹೊಸೂರಿನ ಮೀರಮ್ಮ ಬಾಗ್‌ಬಾನ್ ಅಜ್ಜಿ ಕಳೆದ ಬಾರಿಯ ಪ್ರವಾಹದ ಪರಿಹಾರ ಕಾರ್ಯದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ತೊಡಗಿದ್ದಾಗ, ಅವರನ್ನು ಗಟ್ಟಿಯಾಗಿ ಅಪ್ಪಿಕೊಂಡು ಎಲ್ಲವೂ ಪ್ರವಾಹದಲ್ಲಿ ಕೊಚ್ಚಿಹೋಯ್ತೆಂದು ಕಣ್ಣೀರಿಟ್ಟಿದ್ದರು. ಅಜ್ಜಿಯ ಸಹಾಯಕ್ಕೆ ಧಾವಿಸಿ, ಅಂದು ಅಜ್ಜಿಗೆ ಮನೆ ಕಟ್ಟಿಕೊಡುತ್ತೇವೆಂದು ಶ್ರೀ ಚಕ್ರವರ್ತಿ ಸೂಲಿಬೆಲೆ ಯುವಾಬ್ರಿಗೇಡ್ ಪರವಾಗಿ ಮಾತು ಕೊಟ್ಟಿದ್ದರು.

ಈ ಹಿನ್ನಲೆಯಲ್ಲಿ ವೀಣಾ ಬನ್ನಂಜೆಯವರ ಗೆಳೆಯರ ಬಳಗ ಮಾಡಿದ ಸಹಕಾರದಿಂದಾಗಿ ಸುಂದರ ಮನೆಯೊಂದು ಈಗ ತಲೆ ಎತ್ತಿ ನಿಂತಿದೆ. ಅಜ್ಜಿಗೆ ಅದನ್ನು ಯುವಾಬ್ರಿಗೇಡ್ ಸಂಸ್ಥಾಪಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಹಸ್ತಾಂತರಿಸಿದ್ದಾರೆ. ಅಲ್ಲದೆ ಅಜ್ಜಿಗೆ ಮನೆಗೆ ಅಗತ್ಯವಿರುವ ದಿನನಿತ್ಯದ ಬಳಕೆಯ ವಸ್ತುಗಳನ್ನೂ ಕೂಡ ಕೊಡಿಸಬೇಕೆಂದು ನಿರ್ಧರಿಸಿದ್ದಾರೆ. ಇದು ಯುವಾಬ್ರಿಗೇಡ್ ಈ ವರ್ಷ ನಿರ್ಮಿಸಿಕೊಟ್ಟ ಆರನೇ ಮನೆ.

Previous ರಾಕಿಂಗ್ ಸನ್ ಡಿಫರಂಟ್ ನೇಮ್..!
Next ರಂಭಾಪುರಿ ಶ್ರೀಗಳಿಗೆ ಕರೋನಾ ಸೋಂಕು ದೃಡ

You might also like

0 Comments

No Comments Yet!

You can be first to comment this post!

Leave a Reply