ಮಾಸ್ಕ್ ಧರಿಸಿ ಪರೀಕ್ಷೆ ಪರೀಕ್ಷೆ ಬರೆಯಲು ಬಂದ ನಕಲಿ ವಿದ್ಯಾರ್ಥಿ

ಮಾಸ್ಕ್ ಧರಿಸಿ ಪರೀಕ್ಷೆ ಪರೀಕ್ಷೆ ಬರೆಯಲು ಬಂದ ನಕಲಿ ವಿದ್ಯಾರ್ಥಿ

ಬೆಂಗಳೂರು –

 ಮಾಹಾ ಮಾರಿ ಕರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನ ಕಡ್ಡಾಯಗೊಳಿಸಿದೆ. ಇದನ್ನೇ ತನ್ನ ಬಂಡವಾಳ ಮಾಡಿಕೊಂಡ ಅಭ್ಯರ್ಥಿ ಒಬ್ಬ ಇಂದು ನಡೆಯುತ್ತಿದ್ದ ಸಿವಿಲ್ ಪೊಲೀಸ್ ಕಾನ್ಸ್​ಟೇಬಲ್ ಲಿಖಿತ ಪರೀಕ್ಷೆಗೆ ಅಭ್ಯರ್ಥಿಯ ಬದಲಾಗಿ ಹಾಜರಾಗಿ ಪರೀಕ್ಷೆ ಬರೆಯುತ್ತಿರುವಾಗ ಖಾಕಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗಣೇಶನಗುಡಿ ಗ್ರಾಮದ ಬಳಿ ಇರುವ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಕಾನ್ಸ್​ಟೇಬಲ್ ಪರೀಕ್ಷೆ ನಡೆಯಿತಿತ್ತು ಈ ವೇಳೆ ಪರೀಕ್ಷಾ ಅಭ್ಯರ್ಥಿಯಾದ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ನಿವಾಸಿ ಮಂಜುನಾಥ್ ಬದಲು ಆತನ ಹೆಸರಿನಲ್ಲಿ ಕೋಲಾರ ಜಿಲ್ಲೆ‌ ಶ್ರೀನಿವಾಸಪುರ ತಾಲೂಕಿನ ತೇರನಹಳ್ಳಿ ನಿವಾಸಿ ಶಿವಪ್ರಸಾದ್ ಪರೀಕ್ಷೆ ಬರೆಯಲು ಕೂತಿದ್ದನಂತೆ.

 ಕೊವಿಡ್‌ನಿಂದ ಮಾಸ್ಕ್ ಧರಿಸುವುದನ್ನೇ ತನ್ನ ಅನುಕೂಲಕ್ಕೆ ಬಳಸಿಕೊಂಡ ನಕಲಿ ಅಭ್ಯರ್ಥಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ‌.

Previous ನಿಗದಿಪಡಿಸಿದ ದಿನಾಂಕಗಳಲ್ಲೇ ಹಂಪಿ ಉತ್ಸವ ಆಚರಿಸಲು ಕರ್ನಾಟಕ ಜನಸೈನ್ಯದಿಂದ ಪ್ರತಿಭಟನೆ
Next ಬೆಳಗಾವಿ ಸಂಸದ ಸುರೇಶ್ ಅಂಗಡಿ ಇನ್ನಿಲ್ಲಾ.

You might also like

0 Comments

No Comments Yet!

You can be first to comment this post!

Leave a Reply