ರಾಜ್ಯದಲ್ಲಿ 98 ಜನರಿಗೆ ಪಾಸಿಟಿವ್.

ರಾಜ್ಯದಲ್ಲಿ 98 ಜನರಿಗೆ ಪಾಸಿಟಿವ್.

ರಾಜ್ಯದಲ್ಲಿ ಇದುವರೆಗೆ 98 ಜನರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ,ಅದರಲ್ಲಿ 6 ಜನರು ಗುಣಮುಖರಾಗಿದ್ದು, ಮೂರು ಜನರು ಮೃತಪಟ್ಟಿದ್ದಾರೆ ಎಂದು ಸಚಿವ ಶ್ರೀರಾಮುಲು ಅವರು ವಿವರಿಸಿದರು. ಬಳ್ಳಾರಿಯ ಅವರ ನಿವಾಸದಲ್ಲಿ ಮಾತನಾಡಿದ ಅವರು 26 ಸಾವಿರ ಜನರನ್ನು ಗುರುತಿಸಿ ಅದರಲ್ಲಿ 3243 ಜನರ ಸ್ಯಾಂಪಲ್ ಲ್ಯಾಬ್‍ನಲ್ಲಿ ಪರೀಕ್ಷಿಸಲಾಗಿ ಅದರಲ್ಲಿ 91 ಜನರಿಗೆ ಸೊಂಕು ಇರುವುದು ದೃಢಪಟ್ಟಿದೆ. 226 ಜನರು ಐಸೋಲೇಶಷನ್ ವಾರ್ಡ್‍ನಲ್ಲಿದ್ದಾರೆ ಎಂದು ಅವರು ವಿವರಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳು, ಟಾಸ್ಕ್‍ಫೋರ್ಸ್, ಮುಖ್ಯಮಂತ್ರಿಗಳು ಹಾಗೂ ನಾನೂ ಸಭೆ ನಡೆಸಿ ಸೊಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಈ ಕೆಲಸದಲ್ಲಿ ನಿರತರಾಗಿರುವವರಲ್ಲಿ ಆತ್ಮಸ್ಥೈರ್ಯ,ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

*ಹೊಸಪೇಟೆಯಲ್ಲಿ 3 ಪಾಸಿಟಿವ್*

 ಹೊಸಪೇಟೆಯಲ್ಲಿಯೂ ಮೂರು ಜನರಿಗೆ ಕೊರೊನಾ ಸೊಂಕು ಪಾಸಿಟಿವ್ ಇರುವುದು ನಿನ್ನೆ ಸಂಜೆ ದೃಢಪಟ್ಟಿದೆ. ಇಡೀ ನಗರವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ. ಸೊಂಕಿತರ ಮನೆಯ 5 ಕಿ.ಮೀ ಸುತ್ತ ಬಫರ್‍ಝೋನ್ ಆಗಿ ಮಾಡಲಾಗಿದೆ. ಅಲ್ಲಿ ಸೊಂಕು ವ್ಯಾಪಿಸದಂತೆ ಎಲ್ಲ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ ಎಂದು ಅವರು ವಿವರಿಸಿದರು.

ಅವರ ಟ್ರಾವೆಲ್ ಹಿಸ್ಟರಿ ಕಲೆಹಾಕಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ 59399 ಜನರಿಗೆ ತಪಾಸಣೆ ಮಾಡಲಾಗಿದ್ದು,ಅದರಲ್ಲಿ 57 ಜನರ ಸ್ಯಾಂಪಲ್ ಪ್ರಯೋಗಾಲಯದಿಂದ ಬಂದಿದ್ದು,ಅದರಲ್ಲಿ 3 ಜನರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. 45 ಜನರಿಗೆ ನೆಗೆಟಿವ್ ಅಂತ ಬಂದಿದೆ. 9 ಜನರ ವರದಿ ಬರಬೇಕಿದ್ದು, 13 ಜನರನ್ನು ಐಸೋಲೇಶನ್ ವಾರ್ಡ್‍ನಲ್ಲಿಡಲಾಗಿದೆ. 216 ಜನರು 14 ದಿನಗಳ ಹೋಮ್‍ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.9 ಜನರು 28 ದಿನಗಳ ಹೋಮ್ ಕ್ವಾರಂಟೈನ್ ಪೂರ್ಣಗೊಳಿಸಿದ್ದು, ಇನ್ನೂ 356 ಜನರು ಗೃಹಬಂಧನದಲ್ಲಿದ್ದಾರೆ ಎಂದು ಅವರು ವಿವರಿಸಿದರು.

Previous 700 ವೆಂಟಿಲೇಟರ್ಗಳ ವ್ಯವಸ್ಥೆ ,ಕಳಪೆ ಮಾಸ್ಕ್ ಮಾರಾಟದ ವಿರುದ್ಧ ಕ್ರಮ
Next ಬಳ್ಳಾರಿ ಜಿಲ್ಲೆಯಲ್ಲಿ ಸೋಂಕು ಹರಡಲು ಬಿಡಬಾರದು:ಡಿಸಿಎಂ ಸವದಿ.

You might also like

0 Comments

No Comments Yet!

You can be first to comment this post!

Leave a Reply