700 ವೆಂಟಿಲೇಟರ್ಗಳ ವ್ಯವಸ್ಥೆ ,ಕಳಪೆ ಮಾಸ್ಕ್ ಮಾರಾಟದ ವಿರುದ್ಧ ಕ್ರಮ

700 ವೆಂಟಿಲೇಟರ್ಗಳ ವ್ಯವಸ್ಥೆ ,ಕಳಪೆ ಮಾಸ್ಕ್ ಮಾರಾಟದ ವಿರುದ್ಧ ಕ್ರಮ

ಬಳ್ಳಾರಿ,ಮಾ.31

ವೈದ್ಯರಿಗೆ ಸುರಕ್ಷತಾ ಪರಿಕರಗಳ ಕೊರತೆ ಇರುವುದು ಗಮನದಲ್ಲಿದ್ದು, ಶೀಘ್ರದಲ್ಲಿ ಅವುಗಳನ್ನು ವೈದ್ಯರಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಡೀ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿ ವ್ಯವಸ್ಥೆ ಮಾಡÀಲಾಗಿದ್ದು,ಏಳರಿಂದ ಎಂಟು ಸಾವಿರದ ಬೆಡ್‍ವ್ಯವಸ್ಥೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಸುರಕ್ಷತಾ ಪರಿಕರಗಳ ಕಿಟ್(ಪಿಪಿಇ)ಗಳ ಕೊರತೆಯಾಗುವುದು ಸಹಜ;ಇದು ನಮ್ಮ ಗಮನದಲ್ಲಿದ್ದು ಆದಷ್ಟು ವೈದ್ಯರಿಗೆ ಈ ಸುರಕ್ಷತಾ ಪರಿಕರ ಕಿಟ್ ಒದಗಿಸಿಕೊಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

*ರಾಜ್ಯದಲ್ಲಿ 700 ವೆಂಟಿಲೆಟರ್ ವ್ಯವಸ್ಥೆ;350 ಆರ್ಡರ್*

ರಾಜ್ಯದಲ್ಲಿ ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ 700 ವೆಂಟಿಲೇಟರ್‍ಗಳು ನಮ್ಮಲ್ಲಿವೆ; 350 ವೆಂಟಿಲೆಟರ್‍ಗಳ ಖರೀದಿಗೆ ಆರ್ಡ್‍ರ್ ನೀಡಲಾಗಿದ್ದು,ಅವುಗಳು ಬಂದಿರಬಹದು; ಪರಿಶೀಲಿಸಲಾಗುವುದು ಎಂದು ಹೇಳಿದ ಸಚಿವ ಶ್ರೀರಾಮುಲು ಅವರು ಇದುವರೆಗೆ ವೆಂಟಿಲೆಟರ್ ಮೂಲಕ ಕೊರೊನಾ ಸೊಂಕಿತರಿಗೆ ಚಿಕಿತ್ಸೆ ನೀಡಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸಮರ್ಪಕವಾಗಿ ಥರ್ಮಲ್ ಸ್ಕ್ಯಾನರ್‍ಗಳನ್ನು ಇಡೀ ರಾಜ್ಯದ ಎಲ್ಲೆಡೆ ಒದಗಿಸುವುದಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು. ಕಳಪೆ ಮಾಸ್ಕ್ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವುದು ಸೇರಿದಂತೆ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತಿದ್ದು,ಜನರು ಯಾವುದೇ ಕಾರಣಕ್ಕೂ ಕಳಪೆ ಮಾಸ್ಕ್ ಖರೀದಿಸಬಾರದು ಎಂದು ಅವರು ಮನವಿ ಮಾಡಿದರು. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರೊಂದಿಗೆ ನಿನ್ನೆ ಚರ್ಚಿಸಲಾಗಿದ್ದು,ಅವರು ಇನ್ನೂ ಎರಡು ವಾರಗಳ ಕಾಲ ಹೋಮ್‍ಕ್ವಾರಂಟೈನ್ ಸಮರ್ಪಕವಾಗಿ ಮಾಡುವಂತೆ ತಿಳಿಸಿದ್ದಾರೆ. ಅವರೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಎನ್-95 ಮಾಸ್ಕ್, ತ್ರೀಬಲ್ ಲೇಯರ್ ಮಾಸ್ಕ್, ಸುರಕ್ಷತಾ ಪರಿಕರಗಳ ಕಿಟ್, ವೆಂಟಿಲೇಟರ್,ಸ್ಯಾನಿಟೈಸರ್ ಅಗತ್ಯತೆ ಕುರಿತು ಅವರಿಗೆ ತಿಳಿಸಲಾಗಿತ್ತು; ಅವರು ವಿಶೇಷ ವಿಮಾನದ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟಿದ್ದು, ಅವುಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದರು.

Previous ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸಭೆ; ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಸೂಚನೆ.
Next ರಾಜ್ಯದಲ್ಲಿ 98 ಜನರಿಗೆ ಪಾಸಿಟಿವ್.

You might also like

0 Comments

No Comments Yet!

You can be first to comment this post!

Leave a Reply