ಜಿಲ್ಲೆಯಲ್ಲಿ 58777 ಜನರಿಗೆ ತಪಾಸಣೆ:ಡಿಸಿ ಎಸ್ ಎಸ್ ನಕುಲ್.

ಜಿಲ್ಲೆಯಲ್ಲಿ 58777 ಜನರಿಗೆ ತಪಾಸಣೆ:ಡಿಸಿ ಎಸ್ ಎಸ್ ನಕುಲ್.

ಬಳ್ಳಾರಿ,ಮಾ.30

ಬಳ್ಳಾರಿ ಜಿಲ್ಲೆಯಲ್ಲಿ ಮಾ.30ರಂದು ಮಧ್ಯಾಹ್ನದವರೆಗೆ 58777 ಜನರನ್ನು ತಪಾಸಣೆ ಮಾಡಲಾಗಿದೆ. ಸೋಮವಾರವೇ 14916 ಜನರನ್ನು ತಪಾಸಣೆ ಮಾಡಲಾಗಿದ್ದು, ಇದುವರೆಗೆ ಯಾವುದೇ ರೀತಿಯ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.

   ಈ ಕುರಿತು ಮಿಡಿಯಾ ಬುಲೆಟಿನ್ ಬಿಡುಗಡೆ ಮಾಡಿರುವ ಅವರು, ಇಂದು 7 ಜನರ ಸ್ಯಾಂಪಲ್ ಪಡೆದು ಬೆಂಗಳೂರಿಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಇದುವರೆಗೆ 49 ಸ್ಯಾಂಪಲ್ಸ್ ಕಳುಹಿಸಲಾಗಿತ್ತು; 42 ನೆಗೆಟಿವ್ ಅಂತ ಬಂದಿದ್ದು, 7ರ ವರದಿ ಬರಬೇಕಿದ್ದು, ಅವರನ್ನು ಸದ್ಯ ಐಸೋಲೇಶನ್ ವಾರ್ಡ್‍ನಲ್ಲಿಡಲಾಗಿದೆ. ಇಂದು 73 ಜನರಿಗೆ ಗೃಹಬಂಧನದಲ್ಲಿರಲು ಸೂಚಿಸಲಾಗಿದ್ದು, ಇದುವರೆಗೆ 536 ಜನರು ಗೃಹಬಂಧನದಲ್ಲಿದ್ದಾರೆ ಎಂಬುದರ ಮಾಹಿತಿಯನ್ನು ಬಿಚ್ಚಿಟ್ಟಿರುವ ಅವರು 216 ಜನರು ಗೃಹಬಂಧನವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, 320 ಜನರು ಮಾತ್ರ ಗೃಹಬಂಧನದಲ್ಲಿದ್ದಾರೆ ಎಂದಿದ್ದಾರೆ.ಇನ್ನು ಜಿಲ್ಲೆಯಲ್ಲಿ ಒಟ್ಟು 27 ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು ಅನಾವಶ್ಯಕವಾಗಿ ಓಡಾಡಿದ 117 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಲೀಸರ ಈ ಕಟ್ಟುನಿಟ್ಟಿನ ಕ್ರಮದಿಂದಾಗಿ ಜನ ಮನೆಯಿಂದ ಹೊರಬರುವುದು ಕಡಿಮೆ ಆಗಿದೆ ..  

Previous ಕಲಬುರಗಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಕೋವಿಡ್-19 ಸಭೆ.
Next ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಿ, ಕರೋನಾ ನಿಯಂತ್ರಿಸಿ.

You might also like

0 Comments

No Comments Yet!

You can be first to comment this post!

Leave a Reply