473 ಪೊಲೀಸರಿಗೆ ಕೋವಿಡ್,  7ಜನರ ಸಾವು

473 ಪೊಲೀಸರಿಗೆ ಕೋವಿಡ್, 7ಜನರ ಸಾವು

ಬಳ್ಳಾರಿ-

 ಜೀವನದ ಸುರಕ್ಷತೆಯ ದೃಷ್ಟಿಯಿಂದ ಸುಪ್ರೀಂಕೋರ್ಟ್ ಆದೇಶದ ಅನ್ವಯ ದ್ವಿಚಕ್ರ ವಾಹನಗಳ ಸವಾರರು ಹೆಲ್ಮೆಟ್ ಧರಿಸಿ ಪ್ರಯಾಣಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೈದುಲು ಅಡಾವತ್ ಅವರು ತಿಳಿಸಿದ್ದಾರೆ.

 ಜಿಲ್ಲೆಯಲ್ಲಿ 3 ವರ್ಷಗಳ ಅಪಘಾತಗಳು ಮತ್ತು ಮರಣದ ಪ್ರಮಾಣ ಸರಾಸರಿ ತೆಗೆದುಕೊಂಡಲ್ಲಿ ವರ್ಷಕ್ಕೆ ಒಂದು ಸಾವಿರ ಅಪಘಾತಗಳು ಹಾಗೂ 300ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ;ಅದರಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪುವರ ಸಂಖ್ಯೆ ಹೆಚ್ಚಾಗಿದ್ದು, 40 ವರ್ಷ ವಯಸ್ಸಿನೊಳಗಿನವರೇ ಜಾಸ್ತಿ ಇದ್ದಾರೆ; ಆ ಕಾರಣಕ್ಕಾಗಿ ಹೆಲ್ಮೆಟ್ ಅವಶ್ಯಕ ಹಾಗೂ ಕಡ್ಡಾಯ ಧರಿಸುವುದು ಸೂಕ್ತ ಎಂದು ಅವರು ಪ್ರತಿಪಾದಿಸಿದರು.

 ಜಿಲ್ಲೆಯಲ್ಲಿ ಕರೋನಾ ನಿಯಂತ್ರಣಕ್ಕಾಗಿ ಪೊಲೀಸರು ಸಹ ಸಾಕಷ್ಟು ಶ್ರಮಿಸುತ್ತಿದ್ದಾರೆ. ಇದುವರಗೆ 473 ಜನರಿಗೆ ಕೊರೊನಾ ಸೊಂಕು ತಗುಲಿದ್ದು, ಸದ್ಯ 50 ಸಕ್ರಿಯ ಪ್ರಕರಣಗಳಿವೆ. ಎಂದರು. ಇದುವರೆಗೆ 7 ಜನ ಪೊಲೀಸ್ ಸಿಬ್ಬಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎಂದರು.

Previous ಗಾಂಜಾ ಮಾರಾಟ ಇಬ್ಬರ ಬಂಧನ
Next ಜಿಲ್ಲೆಯಲ್ಲಿಯೇ ಮೊದಲ ಸ್ಕೇಟಿಂಗ್ ಅಂಕಣ ನಿರ್ಮಾಣ

You might also like

0 Comments

No Comments Yet!

You can be first to comment this post!

Leave a Reply