12 ಕೋಟಿಗೂ 12 ಹಳ್ಳಿಗೂ ಸಿಗದ ನೀರು…!

12 ಕೋಟಿಗೂ 12 ಹಳ್ಳಿಗೂ ಸಿಗದ ನೀರು…!

12 ಕೋಟಿ ವೆಚ್ಚ ಮಾಡಿ ಒಂದೇ ಹಳ್ಳಿಗೆ ಮಾತ್ರ ನೀರು ಸರಬರಾಜು*
ಮಡಿಕೇರಿ:-ದೀಪದ ಕೆಳಗೆ ಕತ್ತಲು ಎನ್ನೋ ಹಾಗೆ ಕೊಡಗು ಜಿಲ್ಲೆಯಲ್ಲಿ ಕಾವೇರಿ ಹುಟ್ಟಿ ಹರಿಯುತ್ತಾಳೆ ಆದ್ರೂ ಎಷ್ಟೋ ಗ್ರಾಮಗಳಲ್ಲಿ ಕುಡಿಯುವ ನೀರಿನ ಆಹಾಕಾರ ಮಾತ್ರ ತಪ್ಪಿಲ್ಲ. ಇದನ್ನು ಮನಗಂಡೇ  ಸೋಮವಾರಪೇಟೆ ತಾಲ್ಲೂಕಿನ ಹೆಬ್ಬಾಲೆಯಲ್ಲಿ ಬರೋಬ್ಬರಿ 12 ಕೋಟಿ ವೆಚ್ಚದ ಬೃಹತ್ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿತ್ತು. ಹೆಬ್ಬಾಲೆಯಿಂದ ಗುಮ್ಮನಕೊಲ್ಲಿಯವರೆಗೆ 12 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದು. ಕರ್ನಾಟಕ ನಗರ ನೀರು ಸರಬರಾಜು ಮಂಡಳಿ 2006-07 ರಲ್ಲೇ ಯೋಜನೆ ಕಾಮಗಾರಿಗೆ ಚಾಲನೆ ನೀಡಿತ್ತು.

ಯೋಜನೆ ಪ್ರಕಾರ ಐದು ವರ್ಷಗಳಲ್ಲೇ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದ್ರೆ 2018 ರಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಚಿಕ್ಕಪುಟ್ಟ ಕೆಲಸಗಳು ಬಾಕಿ ಇವೆ. ಹೀಗಾಗಿ ಕೇವಲ ಹೆಬ್ಬಾಲೆ ಗ್ರಾಮಕ್ಕೆ ಮಾತ್ರವೇ ಕೇವಲ 3000 ಸಾವಿರ ಜನರಿಗೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದಂತೆ, ತೊರೆನೂರು, ಹುಲುಸೆ, ಕಣಿವೆ, ಕೂಡಿಗೆ, ಕೂಡ್ಲೂರು, ಮುಳ್ಳುಸೋಗೆ ಮತ್ತು ಗುಮ್ಮನಕೊಲ್ಲಿಗಳಿಗೆ ಇಂದಿಗೂ ಕುಡಿಯುವ ನೀರು ಸಿಗುತ್ತಿಲ್ಲ. ಹೀಗಾಗಿ ಜನರು ಇಂದಿಗೂ ಕುಡಿಯುವ ನೀರಿಗೆ ಪರದಾಡುವಂತ ಸ್ಥಿತಿ ಇದೆ.

ಸಂಬಂಧಿಸಿದ ಅಧಿಕಾರಿಗಳು ಕುಡಿಯುವ ನೀರು ಪೂರೈಸದಿದ್ರೆ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡುತ್ತಿದ್ದಾರೆ.ಇನ್ನೂ ಈ ಯೋಜನೆಯನ್ನು 2006 ರಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಕೆ.ಪಿ ಚಂದ್ರಕಲಾ ಅವರು ಈ ಯೋಜನೆ ಜಾರಿಯಾದ ಬಳಿಕ ಅದನ್ನು ಸುಲಭವಾಗಿ ನಿರ್ವಹಿಸುವುದು ಹೇಗೆ ಎಂದು ಚೀನಾಕ್ಕೆ ಹೋಗಿ ಅಧ್ಯಯನ ಮಾಡಿ ಅಲ್ಲಿಂದ ಪ್ಲಾನ್ ತಂದಿದ್ರಂತೆ. ಎಲ್ಲವನ್ನೂ ಪ್ಲಾನ್‍ನಂತೆ ನಿರ್ಮಿಸಲಾಗಿದೆ. ಅದಕ್ಕಾಗಿ ಹೆಬ್ಬಾಲೆ, ಗುಮ್ಮನಕೊಲ್ಲಿ ಸೇರಿದಂತೆ ವಿವಿಧೆಡೆ ಓವರ್ ಹೆಡ್ ಟ್ಯಾಂಕ್‍ಗಳನ್ನು ನಿರ್ಮಿಸಲಾಗಿದೆ.

ಈ ಟ್ಯಾಂಕ್‍ಗಳಿಗೆ ನೀರು ಪೂರೈಸಲು ಬೃಹತ್ ಪೈಪುಗಳನ್ನು ಜೋಡಿಸಲಾಗಿದೆ. ಆದ್ರೆ ಓವರ್ ಹೆಡ್ ಟ್ಯಾಂಕ್‍ಗಳಿಂದ ಮನೆಗಳಿಗೆ ನೀರು ಪೂರೈಸಲು ಬೇಕಾಗಿರುವ ಕೆಲವೇ ಪೈಪುಗಳ ಅಳವಡಿಸದೇ ಇಂದಿಗೂ ಹನ್ನೊಂದು ಹಳ್ಳಿಗಳಿಗೆ ನೀರು ಪೂರೈಸಲು ಸಾಧ್ಯವಾಗಿಲ್ಲ. ಈ ಹಳ್ಳಿಗಳ ಜನರು ಇಂದಿಗೂ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಹೀಗಾಗಿ ಕೇವಲ ಹೆಬ್ಬಾಲೆ ಒಂದೇ ಗ್ರಾಮಕ್ಕೆ ನೀರು ಪೂರೈಸಲು 12 ಕೋಟಿ ಖರ್ಚು ಮಾಡಬೇಕಾಗಿತ್ತಾ ಎನ್ನೋದು ಜನರ ಪ್ರಶ್ನೆ.ಒಟ್ಟಿನಲ್ಲಿ ಕೊಡಗಿನಲ್ಲಿ ಕಾವೇರಿ ಹುಟ್ಟಿಗೆ ನಾಡಿಗೆ ಜೀವ ಜಲವಾಗಿದ್ರೂ ಜಿಲ್ಲೆಯ ಜನರ ದಾಹ ತಣಿಸಲು ಮಾತ್ರ ಸಾಧ್ಯವಾಗಿಲ್ಲ.

Previous ಟಿಕೆಟ್‌‌ಗಾಗಿ ಹತ್ತು ಕೋಟಿ ಡಿಮ್ಯಾಂಡ್ - ಕೇಜ್ರಿವಾಲ್ ವಿರುದ್ಧ ಆಪ್ ಶಾಸಕ ಗಂಭೀರ ಆರೋಪ
Next ಸಣ್ಣ ಸಣ್ಣ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಸಲಹೆ

You might also like

0 Comments

No Comments Yet!

You can be first to comment this post!

Leave a Reply