ಕೊರೋನಾ ಚಿಕಿತ್ಸೆಗೆ 19 ದಿನಕ್ಕೆ 11 ಲಕ್ಷ ಬಿಲ್,  11 ಲಕ್ಷದಲ್ಲಿ ಡಿಸ್ಕೌಂಟ್ ಕೊಟ್ಟಿದ್ದು ಕೇವಲ 1 ರೂಪಾಯಿ”

ಕೊರೋನಾ ಚಿಕಿತ್ಸೆಗೆ 19 ದಿನಕ್ಕೆ 11 ಲಕ್ಷ ಬಿಲ್, 11 ಲಕ್ಷದಲ್ಲಿ ಡಿಸ್ಕೌಂಟ್ ಕೊಟ್ಟಿದ್ದು ಕೇವಲ 1 ರೂಪಾಯಿ”

ಚಿಕ್ಕಮಗಳೂರು-

 ಕೊರೋನಾ ಚಿಕಿತ್ಸೆಗೆಂದು ದಾಖಲಾದ ವ್ಯಕ್ತಿಗೆ ಖಾಸಗಿ ಆಸ್ಪತ್ರೆ 19 ದಿನಕ್ಕೆ 11 ಲಕ್ಷ ಬಿಲ್ ಮಾಡಿರೋ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಪಿಳ್ಳೇನಹಳ್ಳಿ ಗ್ರಾಮದ 70 ವರ್ಷದ ನಂಜುಡಪ್ಪ ಎಂಬುವರನ್ನ ಆಗಸ್ಟ್ 24ರಂದು ಆರೋಗ್ಯ ಹದಗೆಟ್ಟಿತ್ತೆಂದು ನಗರದ ಆಶ್ರಯ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅವರಿಗೆ ಕೊವೀಡ್ ಇದೆ ಎಂದು ಆಸ್ಪತ್ರೆಯವರು ಕನ್ಫರ್ಮ್ ಮಾಡಿದ್ದರು. ಬಳಿಕ 19 ದಿನಗಳ ಕಾಲ ಚಿಕಿತ್ಸೆ ನೀಡಿದ ಆಸ್ಪತ್ರೆ ಕೊನೆಗೂ ಅವರನ್ನ ಉಳಿಸಲು ಸಾಧ್ಯವಾಗಲಿಲ್ಲ. ಆದರೆ, 19 ದಿನದ ಚಿಕಿತ್ಸೆಗೆ ಆಸ್ಪತ್ರೆಯ ಬಿಲ್ 9 ಲಕ್ಷದ 25 ಸಾವಿರದ 601 ರೂಪಾಯಿ ಹಾಗೂ ಮೆಡಿಕಲ್ ಬಿಲ್ 1 ಲಕ್ಷದ 54 ಸಾವಿರ ಸೇರಿ ಸುಮಾರು 11 ಲಕ್ಷ ಬಿಲ್ ಮಾಡಿದ್ದಾರೆ.

 ಬಿಲ್ ಕಂಡು ಮೃತ ನಂಜುಂಡಪ್ಪನ ಕುಟುಂಬಸ್ಥರಿಗೆ ಶಾಕ್ ಆಗಿದೆ. ಕೊನೆಗೆ ಆಸ್ಪತ್ರೆಯವರು ಬಿಲ್ ಪಾವತಿ ಮಾಡಿ ಮೃತದೇಹ ತೆಗೆದುಕೊಂಡಿ ಹೋಗಿ ಎಂದು ಮೃತನ ಸಂಬಂಧಿಕರಿಗೆ ಹೇಳಿದ್ದಾರೆ. ಮೃತ ನಂಜುಂಡಪ್ಪನ ಸಂಬಂಧಿಗಳು ಬಿಲ್‍ನಲ್ಲಿ ರಿಯಾಯಿತಿ ನೀಡುವಂತೆ ಕೇಳಿಕೊಂಡಾಗ ಆಸ್ಪತ್ರೆಯವರು ಒಂದೇ ಒಂದು ರೂಪಾಯಿ ರಿಯಾಯಿತಿ ನೀಡಿದ್ದಾರೆ. ಇದೀಗ ಮೃತನ ಸಂಬಂಧಿಗಳು ನಾವು ಬೇರೆ ಆಸ್ಪತ್ರೆಗೆ ಹೋಗ್ತೀವಿ ಎಂದರು ಕಳಿಸದೆ. ನಾವೇ ಹುಷಾರು ಮಾಡ್ತೀವಿ ಎಂದು ಇಲ್ಲಿ ಇಟ್ಟುಕೊಂಡು

 ಪ್ರಾಣವನ್ನೂ ಉಳಿಸದೆ ಬಿಲ್ಲನ್ನ ಲಕ್ಷಾಂತರ ರೂಪಾಯಿ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಇದೀಗ ಮೃತನ ಸಂಬಂಧಿಗಳು ಹೆಚ್ಚುವರಿ ಹಣವನ್ನ ಮರುಪಾವತಿಸುವ ಬಗ್ಗೆ ಜಿಲ್ಲಾಧಿಕಾರಿಗೆ ಲಿಖಿತವಾಗಿ ದೂರು ನೀಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಇದ್ದಷ್ಟು ದಿನ ಆಸ್ಪತ್ರೆಯವರು ಯಾವುದೇ ರಿಪೋರ್ಟ್ ಕೇಳಿದರು ಕೊಟ್ಟಿಲ್ಲ ಎಂದು ಆರೋಪಿಸಿರೋ ಕುಟುಂಬಸ್ಥರು ಈ ರೀತಿ ಬೇರೆಯವರಿಗೆ ಆಗೋದು ಬೇಡ. ಹಾಗಾಗಿ, ಜಿಲ್ಲಾಧಿಕಾರಿಯವರು ಡಿಎಚ್‍ಓಗೆ ತನಿಖೆ ನಡೆಸಲು ಸೂಚಿಸಿದ್ದಾರೆ. ಡಿಎಚೋ ಅವರು ಈ ರೀತಿ ಬೇರೆಯವರಿಗೆ ಆಗದಂತೆ ಸೀರಿಯಸ್ಸಾಗಿ ಆದಷ್ಟು ಬೇಗ ತನಿಖೆ ನಡೆಸಬೇಕೆಂದು ಕೇಳಿಕೊಂಡಿದ್ದಾರೆ.

Previous ಮೃಗಾಲಯಕ್ಕೆ ಹರಿದು ಬಂತು ನೆರವಿನ ಮಹಾಪೂರ
Next ಕೋವಿಡ್ ಹಿನ್ನೆಲೆ ನಷ್ಟ ,ರಾಜ್ಯ ಸರ್ಕಾರ ನೆರವು

You might also like

0 Comments

No Comments Yet!

You can be first to comment this post!

Leave a Reply