ಸಣ್ಣ ಸಣ್ಣ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಸಲಹೆ

ಸಣ್ಣ ಸಣ್ಣ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಸಲಹೆ

ಚಿಕ್ಕೋಡಿ: ಯುವಕರು ಹಾಗೂ ರೈತರು ಸಣ್ಣ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಹೇಳಿದರು.ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಸಿಟಿಇ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡು ಆತ್ಮಹತ್ಯಾ ವಿರೋಧಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನೀತಿ ಇಲ್ಲದ ಶಿಕ್ಷಣ, ಮಿತಿ ಇಲ್ಲದ ಜೀವನಕ್ಕೆ ದೇಶ ಅದೋಗತಿಗೆ ಸಾಗುತ್ತಿದೆ.

ತಂದೆ-ತಾಯಿ ಮತ್ತು ಶಾಲೆಯ ಶಿಕ್ಷಕ ಮಕ್ಕಳಿಗೆ ದೈರ್ಯವಾಗಿ ಜೀವನ ನಡೆಸಲು ಜೀವನ ಪಾಠ ಹೇಳುವ ಅವಶ್ಯಕತೆ ಇದೆ. ವಿದ್ಯೆ ಅಂಕಗಳಿಕಿಗೆ ಸೀಮಿತವಾಗದೇ ನಮ್ಮಲ್ಲಿರುವ ಮೂಡನಂಭಿಕೆ ಮತ್ತು ಅಜ್ಞಾನವನ್ನು ಹೋಗಲಾಡಿಸಲು ವಿದ್ಯೆ ಬೇಕಾಗುತ್ತದೆ. ವಿದ್ಯೆ, ವಿನಯತೆ, ಅರ್ಹತೆ ಕೂಡಿಕೊಂಡಾಗ ಒಳ್ಳೆಯ ಮನುಷ್ಯನಾಗಲು ಸಾಧ್ಯವಾಗುತ್ತದೆ ಎಂದು ಸುತಾರ ಅಭಿಪ್ರಾಯ ಪಟ್ಟರು.ದಾವಣಗೇರಿ ಜಿಲ್ಲಾ ನ್ಯಾಯಾದೀಶ ಡಿ.ವೈ.ಬಸ್ಸಾಪೂರ ಮಾತನಾಡಿ ಎಂತಹ ಕಷ್ಟ ಸಂಕಷ್ಟ ಬಂದರೂ ಸಹ ಎದೆ ಗುಂದದೆ ದೈರ್ಯದಿಂದ ಎದುರಿಸುವ ಛಲ ಹೊಂದಬೇಕು ವಿನ: ಆತ್ಮಹತ್ಯೆಗೆ ಶರಣಾಗಬಾರದು ಎಂದರು.

ಹಾಸ್ಯ ಕಲಾವಿದ ಹಾಗೂ ವಿದ್ವಾಂಸ ಪ್ರೊ.ಕೃಷ್ಣೆಗೌಡ ಮಾತನಾಡಿ ಕಳೆದ ಹತ್ತು-ಇಪ್ಪತ್ತು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಅತೀ ವಿರಳವಾಗಿತ್ತು. ಆದರೆ ಜಗತ್ತು ಮುಂದುವರೆದAತೆ ಮನುಷ್ಯನಿಗೆ ಸೌಕರ್ಯಗಳು ಹೆಚ್ಚಾಗುತ್ತಾ ಹೋಗುತ್ತಿದೆ. ಇದನ್ನು ಸಂತೋಷದಿಂದ ಅನುಭವಿಸಬೇಕಾದ ಮನುಷ್ಯ ಆತ್ಮಹತ್ಯೆಗೆ ಶರಣಾಗುತ್ತಿರುವುದು ವಿಷಾಧನೀಯ ಎಂದರು.

ಜಗತ್ತು ಬೆಳೆದಂತೆ ಕಷ್ಟ-ಸುಖ ಎರಡು ಬರುವುದು ಸಹಜ. ಆದರೆ ಕಷ್ಟಗಳನ್ನು ಎದುರಿಸಲು ಯುವಕರು ಹಿಂದೆಟ್ಟು ಹಾಕುತ್ತಿರುವುದು. ಸಣ್ಣ ಸಣ್ಣ ಅವಮಾನಗಳನ್ನು ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗುವುದು ಹೇಡಿಗಳ ಕೆಲಸ. ಪಾಲಕರು ಮಕ್ಕಳನ್ನು ಅನವಶ್ಯಕವಾಗಿ ಸೂಕ್ಷö್ಮಗೊಳಿಸುತ್ತಿದ್ದಾರೆ. ಜಗತ್ತು ಬಹಳ ಸುಂದರವಾಗಿದೆ. ಬದುಕು ದೊಡ್ಡದಾಗಿದೆ. ಯುವಕರು ತಮ್ಮ ಆಲೋಚನೆಗಳನ್ನು ದೀರ್ಘವಾಗಿರಿಸಿಕೊಂಡು ಮತ್ತೊಬ್ಬರಿಗೆ ಬುದ್ಧಿವಾದ ಹೇಳಬೇಕು ಹೊರತು ಜೀವನದಲ್ಲಿ ಸೋತು ಹೋದೆ ಎನ್ನುವ ಕಾರಣದಿಂದ ಆತ್ಮಹತ್ಯೆ ದಾರಿ ತುಳಿಯುವುದು ದೊಡ್ಡ ಮಹಾ ಪಾಪ ಎಂದರು.

ಸಾನಿಧ್ಯ ವಹಿಸಿದ್ದ ಕುಂದರಗಿ ಅಮರ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಆತ್ಮಬಲದಿಂದ ಆತ್ಮ ಸಾಕ್ಷಿಯಾಗಿ ಜೀವನದಲ್ಲಿ ಮೆಟ್ಟಿ ನಿಂತು ದೊಡ್ಡ ಸಾಧನೆಯತ್ತ ಹೋಗಬೇಕು. ಮನುಷ್ಯ ಯಶಸ್ವಿಯಾಗಿ ಜೀವನ ನಡೆಸಿ ಸಾಯಬೇಕು, ಆದರೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡು ಜೀವನ ಪೂರ್ತಿ ತಂದೆ-ತಾಯಿಗೆ ದು:ಖ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ವೇದಿಕೆ ಮೇಲೆ ಡಿವೈಎಸ್‌ಪಿ ಮನೋಜ ನಾಯಿಕ, ನ್ಯಾಯವಾದಿ ಎಂ.ಬಿ.ಪಾಟೀಲ, ಕೆಎಎಸ್ ಅಧಿಕಾರಿ ಶ್ವೇತಾ ಬೀಡಿಕರ, ಸಿ.ಬಿ.ಕುಲಕರ್ಣಿ, ಸಿಪಿಐ ಎಚ್.ಕೆ.ಭಜಂತ್ರಿ ಮುಂತಾದವರು ಇದ್ದರು.

Previous 12 ಕೋಟಿಗೂ 12 ಹಳ್ಳಿಗೂ ಸಿಗದ ನೀರು...!
Next ಬಡ ಕುಟುಂಬಕ್ಕೆ ಬಸವಣ್ಣ ಧನ ಸಹಾಯ

You might also like

0 Comments

No Comments Yet!

You can be first to comment this post!

Leave a Reply