ಬಡ ಕುಟುಂಬಕ್ಕೆ  ಬಸವಣ್ಣ ಧನ ಸಹಾಯ

ಬಡ ಕುಟುಂಬಕ್ಕೆ ಬಸವಣ್ಣ ಧನ ಸಹಾಯ

ಕೊಪ್ಪಳದ ಬಡವನ ಪತ್ರಕ್ಕೆ ಸ್ಪಂದಿಸಿದ್ದ ರಾಮನಗರ ಜಿಲ್ಲೆಯ  ಚಾಮುಂಡೇಶ್ವರಿ ದೇವಿಯ ಎತ್ತಿನ ರೂಪದ ಬಸವಣ್ಣ ಇಂದು ಆ ಬಡವನ ಗುಡಿಸಲಿಗೆ ಆಗಮಿಸಿ ಬಡ ಕುಟುಂಬಕ್ಕೆ ಮನೆ ಕಟ್ಟಿಕೊಡಲು ಧನ ಸಹಾಯ ಮಾಡಿ ಹೋಗಿದ್ದಾನೆ.         

ಕೊಪ್ಪಳದ ಗಂಗಾವತಿಯ ಲಿಂಗರಾಜ ಕ್ಯಾಂಪ್ ನಿವಾಸಿಗಳಾದ ಮಲ್ಲಿಕಾರ್ಜುನ ಗಾಯತ್ರಿ ದಂಪತಿಗಳಿಗೆ ವಾಸಿಸಲು ನಿವಾಸವಿಲ್ಲದೆ ತೀರಾ ಕಡುಬಡತನದಲ್ಲಿ ಜೀವನ ನೆಡಸುತ್ತಿದ್ದರು. ಇವಾಗಿರುವ ಪುಟ್ಟ ತಗಡಿನ ಮನೆಯಲ್ಲಿ ಜೀವನ ನೆಡಸುತ್ತಿದ್ದ ದಂಪತಿಗಳು ಒಂದು ಮನೆ ಕಟ್ಟಿಸಿಕೊಡುವಂತೆ ರಾಜಕಾರಣಿಗಳು, ಅಧಿಕಾರಿಗಳು, ಸರ್ಕಾರದ ಎಲ್ಲಾ ಪ್ರತಿನಿಧಿಗಳಲ್ಲಿ ಕೇಳಿಕೊಂಡರು ಬಡವನಿಗೆ ಒಂದು ನಿವಾಸ ಮಾಡಿಕೊಡುವಲ್ಲಿ ಜನಪ್ರತಿಗಳು ನಿರ್ಲಕ್ಷ್ಯ ವಹಿಸಿದ್ದರು. ಇದಕ್ಕೆ ಬೆಸತ್ತ ಕುಟುಂಬ ಕೊನೆಗೆ ದೇವಿಯ ಮೋರೆಯೊಗಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಗೌಡಗೇರಿ ಗ್ರಾಮದ ಚಾಮುಂಡೇಶ್ವರಿ ಗೆ ಪತ್ರವನ್ನು ಬರೆದಿದ್ದಾರೆ. ಮಲ್ಲಿಕಾರ್ಜುನ ಪತ್ನಿ ಗಾಯತ್ರಿ ಬರೆದ ಪತ್ರವನ್ನು ಚಾಮುಂಡೇಶ್ವರಿ ದೇವಿಯ ಬಸವಣ್ಣನ ಮುಂದೆ ದೇವಸ್ಥಾನ ಆಡಳಿತ ಮಂಡಳಿಯವರು ಓದಿದ್ದಾರೆ. ಬಡವ ಬರೆದ ಪತ್ರಕ್ಕೆ ಬಸವಣ್ಣ ತೆಲೆ ಆಡಿಸಿ ಒಪ್ಪಿಗೆ ಸೂಚನೆ ನೀಡಿದ್ದನು. ಬಸವಣ್ಣನ ಒಪ್ಪಿಗೆ ನೀಡುತಿದ್ದಂತೆ ಗಂಗಾವತಿಯ ಪೊಲೀಸರಿಗೆ ಕರೆ ಮಾಡಿದ ದೇವಸ್ಥಾನ ಆಡಳಿತ ಮಂಡಳಿ ಪತ್ರ ಬಂದಿರುವ ಬಗ್ಗೆ ಮಾಹಿತಿ ನೀಡಿ ಅವರಿಂದ ಇನ್ನೂಳಿದ ಮಾಹಿತಿ ಕಲೆ ಹಾಕಿದ್ದಾರೆ.

ಖಚಿತ ಮಾಹಿತಿ ಪಡೆದು ಗಂಗಾವತಿಯಲ್ಲಿರುವ ಬಡವನ ಗುಡಿಸಲಿಗೆ ಬಸವಣ್ಣನನ್ನು ಕರೆದುಕೊಂಡು ಬಂದ ದೇವಸ್ಥಾನ ಆಡಳಿತ ಮಂಡಳಿ ರಥದಲ್ಲಿ ಬಂದಿದ್ದಾರೆ. ಇನ್ನೂ ಬಸವಣ್ಣನಿಗೆ ಬಡವನ ಪರಸ್ಥಿತಿ ಕುರಿತು ಸತ್ಯ ದರ್ಶನ ಮಾಡಿಸಿದ್ರು. ಬಸವಣ್ಣನೂ ಸಹ ಬಡವನ ಮನೆಯ ಮೂಲೆ ಮೂಲೆಯಲ್ಲಿ ಓಡಾಡಿ ಕೊನೆಗೆ ಬಡವನಿಗೆ ಮನೆ ಕಟ್ಟಿಕೊಡಲು ಒಂದು ಲಕ್ಷ ರೂಪಾಯಿ ಧನ ಸಹಾಯ ಮಾಡಿ ದಂಪತಿಗಳಿಗೆ ಆಶೀರ್ವಾದ ಮಾಡಿದ್ದಾನೆ. ಬಸವಣ್ಣನ ಧನ ಸಹಾಯದಿಂದ ದಂಪತಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ನಮಗೆ ಹಣಕ್ಕಿಂತ ಮುಖ್ಯವಾಗಿ ನಮಗಾಗಿ ಬಸವಣ್ಣನೇ ನಮ್ಮ ಮನೆಗೆ ಬಂದಿರುವುದು ತುಂಬಾ ಸಂತಸವಾಗಿದೆ.

Previous ಸಣ್ಣ ಸಣ್ಣ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಸಲಹೆ
Next ಹುಲಿಯ ಹಾಲಿನ ಮೇವು ಸಿನಿಮಾದಲ್ಲಿ ವರನಟ ಡಾ.ರಾಜ್ ರೊಂದಿಗೆ ಸೆಣಸಿದ ಪೈಲ್ವಾನ್ ಗೌಡಪ್ಪ.

You might also like

0 Comments

No Comments Yet!

You can be first to comment this post!

Leave a Reply