ನೀರಿಲ್ಲದೆ ಒಣಗುತ್ತಿದೆ ಹೈಟೆಕ್ ಉದ್ಯಾನವನ !

ನೀರಿಲ್ಲದೆ ಒಣಗುತ್ತಿದೆ ಹೈಟೆಕ್ ಉದ್ಯಾನವನ !

ಕೊಪ್ಪಳ; ಬಡವಾಣೆಯ ಮಕ್ಕಳಿಗೆ, ವಯಸ್ಕರಿಗೆ, ಯುವಕರಿಗೆ ವಾಯುವಿವಾರಕ್ಕಾಗಿ, ವಿಶ್ರಾಂತಿ ಪಡೆಯಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಗಂಗಾವತಿ ನಗರಸಭೆಯ ವತಿಯಿಂದ ಅಮೃತ ಸಿಟಿ ಯೋಜನೆಯಡಿಯಲ್ಲಿ ನಿರ್ಮಿಸಿರುವ ಹೈಟೆಕ್ ಉದ್ಯಾನವನವು ನೀರಿಲ್ಲದೆ ಹಾಗೂ ನಿರ್ವಹಣೆಯ ಕೊರತೆಯಿಂದ ಹಾಳಾಗಿ ಹೋಗುತ್ತಿದೆ.

ಗಂಗಾವತಿನಗರದ ಸಿದ್ದಿಕೇರಿ ರಸ್ತೆಯ ೪ನೇ ವಾರ್ಡ್ನ ಆಂಜನೇಯ ಬಡವಾಣೆಯಲ್ಲಿ ಕಳೆದ ಆರೇಳು ತಿಂಗಳ ಹಿಂದೆ ಅಮೃತ ಸಿಟಿ ಯೋಜನೆಯಡಿಯಲ್ಲಿ ಲಕ್ಷಾಂತರ ರೂಗಳನ್ನು ಖರ್ಚು ಮಾಡಿ, ಉದ್ಯಾನವನಕ್ಕೆ ಹೈಟೆಕ್ ಸ್ಪರ್ಶವನ್ನು ನೀಡಿ, ಉದ್ಯಾನವನವನ್ನು ನಿರ್ಮಿಸಲಾಗಿದೆ. ಉದ್ಘಾಟನೆಯನ್ನು ಮಾಡಿ, ಸಾರ್ವಜನಿಕರ ಉಪಯೋಗಕ್ಕೆ ನೀಡಿದ ಕೆಲ ತಿಂಗಳುಗಳವರೆಗೆ ಮಾತ್ರ ಉದ್ಯಾನವನದಲ್ಲಿನ ಗಾರ್ಡ್ನ್ ಸೇರಿದಂತೆ ಗಿಡಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಉದ್ಯಾನವನವನ್ನು ನಿರ್ವಹಣೆಯನ್ನು ಮಾಡಲು ನಿರ್ಲಕ್ಷ ತೊರಿಸಲಾಗುತ್ತಿದೆ.

ನಿರ್ವಹಣೆಗಾಗಿ ಗುತ್ತಿಗೆಯನ್ನು ಪಡೆದುಕೊಂಡಿರುವ ಗುತ್ತಿಗೆದಾರರು ಬೇಕಾ ಬಿಟ್ಟಿಯಾಗಿ ನಿರ್ವಹಣೆಯನ್ನು ಮಾಡುತ್ತಿದ್ದಾನೆ ಎನ್ನುವ ಆರೋಪಗಳು ಸ್ಥಳೀಯಯಿಂದ ಕೇಳಿ ಬರುತ್ತಿವೆ.43 ಲಕ್ಷ ರೂಗಳ ವೆಚ್ಚ : ಉದ್ಯಾನವನಕ್ಕೆ ಅಮೃತ ಸಿಟಿ ಯೋಜನೆಯಲ್ಲಿ ಹೈಟೆಕ್ ಸ್ಪರ್ಶವನ್ನು ನೀಡಿ ಒಟ್ಟು 43 ಲಕ್ಷ ರೂಗಳನ್ನು ವೆಚ್ಚ ಮಾಡಲಾಗಿದೆ. ಯೋಜನೆಯ ಪ್ರಕಾರವಾಗಿ ಪಾರ್ಕ್ನ್ ಒಳಗಡೆ ಸುತ್ತಲು ವಾಕ್ ಮಾಡಲು ರಸ್ತೆ, ಮದ್ಯದಲ್ಲಿ ಗಾರ್ಡ್ನ್, ಒಂದು ಭಾಗದಲ್ಲಿ ಆಧುನಿಕ ಮಾದರಿಯ ವ್ಯಾಯಾಮ ಸಾಮಾಗ್ರಿ, ಮಕ್ಕಳ ಆಟಿಕೆ ಸಾಮಾಗ್ರಿಗಳು ಜೊತೆಗೆ ಉದ್ಯಾನವನ ಸುತ್ತಲು ವಿದ್ಯುತ್ ದೀಪದ ವ್ಯವಸ್ಥೆಯನ್ನು ಮಾಡಲಾಗಿದೆ.

ಸುಸಜ್ಜಿತವಾಗಿ ನಿರ್ಮಿಸಿರುವ ಉದ್ಯಾನವನವು ಸದ್ಯ ನಿರ್ವಹಣೆಯ ಕೊರತೆಯನ್ನು ಅನುಭವಿಸುತ್ತಿದೆ. ಸರಿಯಾಗಿ ನಿರ್ವಹಣೆ ಇಲ್ಲದೆ ಲಕ್ಷಾಂತರ ರೂಗಳ ವೆಚ್ಚ ಮಾಡಿ ನಿರ್ಮಿಸಿರುವ ಉದ್ಯಾನವನವು ಹಳ್ಳ ಹಿಡಿಯುತ್ತಿದೆ.ಮೂರು ತಿಂಗಳಿಂದ ನೀರಿಲ್ಲ : ಉದ್ಯಾನವನವು ಹಸಿರಿನಿಂದ ಕೂಡಿದ್ದರೆ ಮಾತ್ರ ಉದ್ಯಾನವನ ಎನ್ನುವ ಅರ್ಥವನ್ನು ಪಡೆದುಕೊಳ್ಳುತ್ತದೆ. ಆದರೆ ಈ ಪಾರ್ಕ್ನಲ್ಲಿ ಗಾರ್ಡ್ನ್ ಸೇರಿದಂತೆ ಹೂವಿನ ಗಿಡಗಳು ನೀರು ಇಲ್ಲದೆ ಒಣಗಿ ಹೋಗುತ್ತಿವೆ. ಉದ್ಯಾನವನ ನಿರ್ಮಿಸಿದ ವೇಳೆಯಲ್ಲಿ ಬೋರೆವೆಲ್ ಕೊರೆಸಿ, ನೀರು ಪಂಪ್ ಮಾಡಲು ಮೋಟರ್ ಅಳವಡಿಸಲಾಗಿತ್ತು. ಆದರೆ ಕಳೆದ ಮೂರು ತಿಂಗಳ ಹಿಂದೆ ಮೋಟರ್ ದುರಸ್ತಿಯಾಗಿ ಉದ್ಯಾನವನಕ್ಕೆ ನೀರು ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯ ನಿವಾಸಿಗಳು ಪಾರ್ಕ್ ಒಣಗುತ್ತಿರುವುದನ್ನು ಗಮನಿಸಿ, ಗುತ್ತಿಗೆದಾರರಿಗೆ ಮೋಟರ್ ರಿಪೇರಿಯನ್ನು ಮಾಡಿಸಲು ಹೇಳಿದರೆ ಯಾವುದೇ ಕಾರ್ಯಕ್ಕೆ ಮುಂದಾಗದ ಗುತ್ತಿಗೆದಾರರು ನಿರ್ಲಕ್ಷವನ್ನು ತೊರಿಸುತ್ತಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಸ್ಥಳೀಯ ನಿವಾಸಿಗಳು ನಗರಸಭೆ ಪೌರಾಯುಕ್ತರಿಗೆ ಹಾಗೂ ನಗರಸಭೆ ಸದಸ್ಯರಿಗೂ ಮಾಹಿತಿಯನ್ನು ನೀಡಿದ್ದಾರೆ.

Previous ಕರೋನಾ ಭೀತಿ ಕುಸಿದ ಮೆಣಸಿನಕಾಯಿ ದರ ಕುಸಿತ
Next ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲೆ ಇದ್ದು ಇಲ್ಲವಾದ ಪಶು ಪಾಲಿ ಕ್ಲಿನಿಕ್

You might also like

0 Comments

No Comments Yet!

You can be first to comment this post!

Leave a Reply