ಟಿಕೆಟ್‌‌ಗಾಗಿ ಹತ್ತು ಕೋಟಿ ಡಿಮ್ಯಾಂಡ್ – ಕೇಜ್ರಿವಾಲ್ ವಿರುದ್ಧ ಆಪ್ ಶಾಸಕ ಗಂಭೀರ ಆರೋಪ

ಟಿಕೆಟ್‌‌ಗಾಗಿ ಹತ್ತು ಕೋಟಿ ಡಿಮ್ಯಾಂಡ್ – ಕೇಜ್ರಿವಾಲ್ ವಿರುದ್ಧ ಆಪ್ ಶಾಸಕ ಗಂಭೀರ ಆರೋಪ

ನವದೆಹಲಿ : ವಿಧಾನಸಭೆ ಚುನಾವಣೆ ಮುನ್ನ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಚುನಾವಣಾ ಟಿಕೆಟ್ ಗಾಗಿ ಹತ್ತು ಕೋಟಿ ಡಿಮ್ಯಾಂಡ್ ಮಾಡಿದ್ದರು ಎಂದು ದ್ವಾರಕ ಕ್ಷೇತ್ರದ ಆಪ್ ಶಾಸಕ ಆದರ್ಶ ಶಾಸ್ತ್ರಿ ಆರೋಪ ಮಾಡಿದ್ದಾರೆ.

ಪ್ರಸುತ್ತ ಚುನಾವಣೆಯಲ್ಲಿ ಆದರ್ಶ ಶಾಸ್ತ್ರಿಗೆ ಆಪ್ ಟಿಕೆಟ್ ನಿರಾಕರಿಸಿತ್ತು ಇದರಿಂದ ಬಂಡಾಯಗೊಂಡು ಶನಿವಾರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಅವರು ಈ ಆರೋಪ ಮಾಡಿದ್ದಾರೆ. ಅರವಿಂದ ಕೇಜ್ರಿವಾಲ್ ಪ್ರತಿ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ೧೦-೨೦ ಕೋಟಿ ಹಣ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಕಳೆದ ಬಾರಿ ಆದರ್ಶ ಮಿಶ್ರಾ ಪ್ರತಿನಿಧಿಸಿದ್ದ ದ್ವಾರಕ ಕ್ಷೇತ್ರಕ್ಕೆ ಈ ಬಾರಿ ಆಮ್ ಅದ್ಮಿ ವಿನಯ್ ಮಿಶ್ರಾ ಎಂಬುವರಿಗೆ ಟಿಕೆಟ್ ನೀಡಿದೆ. ಇದರಿಂದ ಆಕ್ರೋಶ ಗೊಂಡಿದ್ದ ಆದರ್ಶ ಶಾಸ್ತ್ರಿ ನಿನ್ನೆ ಡಿಸಿಸಿ ಅಧ್ಯಕ್ಷ ಸುಭಾಶ್ ಚೋಪ್ರಾ ಸಮ್ಮುಖದಲ್ಲಿ ಕಾಂಗ್ರೆಸ್ ಸೆರ್ಪಡೆಗೊಂಡರು. ಆದರ್ಶ ಶಾಸ್ತ್ರಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮನಾಗಿದ್ದು ಆಮ್ ಅದ್ಮಿ ರಾಷ್ಟ್ರೀಯ ವಕ್ತಾರರೂ ಆಗಿದ್ದರು.

ಅರವಿಂದ ಕೇಜ್ರಿವಾಲ್ ವಿರುದ್ಧ ಇದೇ ಮೊದಲಲ್ಲ, 2019 ರ ಲೋಕಸಭಾ ಚುನಾವಣೆ ವೇಳೆ ಟಿಕೆಟ್ ಗಾಗಿ ಆರು ಕೋಟಿ ಡಿಮ್ಯಾಂಡ್ ಮಾಡಿದ್ದರು ಎನ್ನುವ ಆರೋಪಗಳು ಕೇಳಿ ಬಂದಿತು.

Previous ಮಂಗಳೂರು‌ ಗಲಭೆಯಲ್ಲಿ ಆಗಿದ್ದೇನು?
Next 12 ಕೋಟಿಗೂ 12 ಹಳ್ಳಿಗೂ ಸಿಗದ ನೀರು...!

You might also like

0 Comments

No Comments Yet!

You can be first to comment this post!

Leave a Reply