ಕರೋಡ್ ಪತಿ ಆಗಲು ಹೋಗಿ ವಂಚನೆಗೊಳಗಾದ..!

ಕರೋಡ್ ಪತಿ ಆಗಲು ಹೋಗಿ ವಂಚನೆಗೊಳಗಾದ..!

ಹುಬ್ಬಳ್ಳಿ: ಕೌನ್ ಬನೇಗಾ ಕರೋಡ್ ಪತಿ ಎಂಬ ಸ್ಪರ್ದೆಯಿಂದ ಕರೆ ಮಾಡಿತ್ತಿರುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಬ್ಯಾಂಕ ಖಾತೆಯಿಂದ ೩೪.೫೦೦ ರೂಪಾಯಿ ಹಣ ವಂಚಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.


ಹುಬ್ಬಳ್ಳಿಯ ಉಣಕಲ್ ಗವಿಸಿದ್ದೇಶ್ವರ ನಗರದ ಮಲ್ಲಿಕಾರ್ಜುನ ಪಾಟೀಲ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡವರು. ಕೌನ ಬನೇಗಾ ಕರೋಡಪತಿ ಕಾರ್ಯಕ್ರಮದಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಮಲ್ಲಿಕಾರ್ಜುನಗೆ ವಂಚಿಸಿ ಅವರ ಖಾತೆಯ ವಿವರ ಮಾಹಿತಿ ಪಡೆದುಕೊಂಡು ವಂಚಿಸಲಾಗಿದೆ.


ಮಲ್ಲಿಕಾರ್ಜುನ ಪಾಟೀಲಗೆ ಕರೆ ಮಾಡಿದ ವಂಚಕ ಕೌನಬನೇಗಾ ಕರೋಡಪತಿ ಸ್ಪರ್ದೆಯಲ್ಲಿ ೨೫ಲಕ್ಷ ರೂಪಾಯಿ ಬಹುಮಾನ ಬಂದಿದೆ. ಬಹುಮಾನದ ಹಣ ಕಳುಹಿಸಲು ಬ್ಯಾಂಕ ಖಾತೆಯ ವಿವರ ನೀಡಿ ಎಂದು ಮಾಹಿತಿ ಪಡೆದ ವಂಚಕರು ಬಹುಮಾನದ ಹಣ ಪಡೆಯಲು ೩೪.೫೦೦ ರೂಪಾಯಿ ಪಾವತಿಸುವಂತೆ ಸೂಚಿಸಿದ್ದರು.
ತಮ್ಮಗೆ ಬಂದ ಕರೆಯನ್ನ ನಂಬಿ ವಂಚಕನ ಮಾತಿಗೆ ಮರುಳಾಗಿ ಮಲ್ಲಿಕಾರ್ಜುನ ಗೂಗಲ ಪೇ ಮೂಲಕ ಹಣ ವರ್ಗಾಯಿಸಿದ್ದರು. ಆದ್ರೆ ಹಣ ವರ್ಗಾವಣೆಯಾದ ನಂತರ ಮಲ್ಲಿಕಾರ್ಜುನ ವಂಚನೆಗೆ ಒಳಗಾಗಿರುವುದು ಅರಿತು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Previous ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲೆ ಇದ್ದು ಇಲ್ಲವಾದ ಪಶು ಪಾಲಿ ಕ್ಲಿನಿಕ್
Next ಬಲಿಗಾಗಿ ಬಾಯಿತೆರೆದಿರುವ ಹತ್ತಾರು ಕೊಳವೆ ಬಾವಿಗಳು

You might also like

0 Comments

No Comments Yet!

You can be first to comment this post!

Leave a Reply