ಈ ಬಾರಿ ಹೆಚ್ಚಳವಾಗಲಿದೆಯೇ ಬಳ್ಳಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ?

ಈ ಬಾರಿ ಹೆಚ್ಚಳವಾಗಲಿದೆಯೇ ಬಳ್ಳಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ?

*ವೈವಿಧ್ಯಮಯ ಕ್ರಮಗಳಿಗೆ ಮುಂದಾದ ಸಾರ್ವಜನಿಕ ಶಿಕ್ಷಣ ಇಲಾಖೆ*

ಬಳ್ಳಾರಿ ಜಿಲ್ಲೆಯನ್ನು ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅಗ್ರಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಪಂ ಸಹಕಾರದೊಂದಿಗೆ ನಾನಾ ಪ್ರಯತ್ನಕ್ಕೆ ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಬಾರಿ ಜೂನ್ ಆರಂಭದಿಂದಲೇ ವೈವಿಧ್ಯಮಯ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಆ ಆಸೆ ಚಿಗುರುವಂತೆ ಮಾಡಿದೆ. 

ಕಳೆದ ಬಾರಿ ಶೇ.77.98ರಷ್ಟು ಫಲಿತಾಂಶ ಪಡೆಯುವುದರ ಮೂಲಕ ರಾಜ್ಯದಲ್ಲಿ 23ನೇ ಸ್ಥಾನಗಳಿಸಿದ್ದ ಬಳ್ಳಾರಿ ಜಿಲ್ಲೆಯು ಈ ಬಾರಿ ಆ ಫಲಿತಾಂಶ ವೃದ್ಧಿಸುವ ಮೂಲಕ ಟಾಪ್ ಪಟ್ಟಿಯಲ್ಲಿ ಬರಲು ನಾನಾ ಪ್ರಯತ್ನಗಳಿಗೆ ಕೈಹಾಕಿದೆ. ಮಾ.27ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ 37223 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. 116 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈಗಾಗಲೇ ವಿಶೇಷ ತರಗತಿಗಳು, ಪರೀಕ್ಷೆ, ಸರಣಿ ಪರೀಕ್ಷೆಗಳು ಈಗಾಗಲೇ ಕೈಗೊಳ್ಳಲಾಗಿದ್ದು, ಪೂರ್ವಭಾವಿ ಪರೀಕ್ಷೆ ಮಾಡಲಾಗುತ್ತಿದೆ. ಇದರ ಜೊತೆಗೆ ಕಲಿಕೆಯಲ್ಲಿ ಅತಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ತೀವ್ರನಿಗಾ ಕೇಂದ್ರಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಪ್ಪ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಅತಿಹೆಚ್ಚು ಸಮಸ್ಯೆ ಎದುರಿಸುವ ಇಂಗ್ಲಿಷ್,ವಿಜ್ಞಾನ ಮತ್ತು ಗಣಿತ ವಿಷಯಗಳ ಪರಿಣಾಮಕಾರಿ ಬೋಧನೆಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ನವೆಂಬರ್‌ನಿಂದ ಆರಂಭವಾಗಿದ್ದು ಫೆಬ್ರುವರಿ ಅಂತ್ಯಕ್ಕೆ ಮುಗಿಯಲಿದೆ. ರೆಡ್‌ ಝೋನ್, ಯೆಲ್ಲೋ ಝೋನ್ ಮತ್ತು ಗ್ರೀನ್‌ಝೋನ್ ಹಂತ ಗುರುತಿಸಿ ವಿದ್ಯಾರ್ಥಿಗಳ ಕಲಿಕಾ ಸುಧಾರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ.ಜಿಪಂ ಅಧ್ಯಕ್ಷರ ಕನಸಿನ ಕೂಸಾದ ‘ಓದಿನ ಮನೆ’ ಜಿಲ್ಲೆಯ ಎಲ್ಲ ಸರಕಾರಿ ಪ್ರೌಢಶಾಲೆಗಳಲ್ಲಿ ಈಗಾಗಲೇ ಆರಂಭಿಸಲಾಗಿದ್ದು, ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮುಖ್ಯಗುರುಗಳ ಸಭೆ, ವಿಷಯವಾರು ಕ್ಲಬ್‌ಗಳ ರಚನೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಪಾಸಿಂಗ್ ಪ್ಯಾಕೇಜ್ ಅನುಸಾರ ಅಣಿಗೊಳಿಸುವುದು, ಗುಂಪು ಚರ್ಚೆ, ವಿಷಯವಾರು ಶಿಕ್ಷಕರ ಸಮಾಗಮ, ಅತಿಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನ,ಮಕ್ಕಳೊಂದಿಗೆ ಸಂವಾದ, ವಿದ್ಯಾರ್ಥಿಗಳು ಓದುತ್ತಾ ಇದ್ದಾರೆಯೋ ಇಲ್ಲವೋ ಎಂದು ಪರಿಶೀಲಿಸಲು ಫೋನ್-ಇನ್ ಕಾರ್ಯಕ್ರಮ, ದತ್ತು ಯೋಜನೆ, ಪರಿಹಾರ ಬೋಧನೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜೂನ್ ತಿಂಗಳಿನಿಂದಲೇ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ.  

2018ರಲ್ಲಿ ಶೇ.82.73ರಷ್ಟು ಫಲಿತಾಂಶ ಪಡೆಯುವುದರ ಮೂಲಕ 12ನೇ ಸ್ಥಾನಕ್ಕೇರಿತ್ತು. 2019ರಲ್ಲಿ ಶೇ.77.98ರಷ್ಟು ಫಲಿತಾಂಶ ಬರುವುದರ ಮೂಲಕ 23ನೇ ಸ್ಥಾನವನ್ನು ಬಳ್ಳಾರಿ ಜಿಲ್ಲೆ ಪಡೆದುಕೊಂಡಿತ್ತು. ಈ ವರ್ಷ ನಾನಾ ಕ್ರಮಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿರುವ ಪರಿಣಾಮ ಫಲಿತಾಂಶದಲ್ಲಿ ತೀವ್ರ ಸುಧಾರಣೆಯಾಗಲಿದೆ ಎಂಬ ಆಶಯ ಶಿಕ್ಷಕರ ಸಮುದಾಯದ್ದು.

Previous 10 ವರ್ಷ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಆಸ್ಪತ್ರೆಯಲ್ಲಿ ಸಾವು
Next ಕರೋನಾ ಭೀತಿ ಕುಸಿದ ಮೆಣಸಿನಕಾಯಿ ದರ ಕುಸಿತ

You might also like

0 Comments

No Comments Yet!

You can be first to comment this post!

Leave a Reply