ಅಗತ್ಯ ವಸ್ತುಗಳ ಹೆಚ್ಚಿನ ದರ ಮಾರಾಟ ಮಾಡಿದಲ್ಲಿ ಸೂಕ್ತ ಕ್ರಮ.

ಅಗತ್ಯ ವಸ್ತುಗಳ ಹೆಚ್ಚಿನ ದರ ಮಾರಾಟ ಮಾಡಿದಲ್ಲಿ ಸೂಕ್ತ ಕ್ರಮ.

ಬಾಗಲಕೋಟೆ ಮಾ.30

ಅಗತ್ಯ ವಸ್ತುಗಳಾದ ಕಿರಾಣಿ, ದಿನಸಿ ಅಂಗಡಿ, ಹಾಲು, ಪೆಟ್ರೊಲ್ ಹಾಗೂ ಇತ್ಯಾದಿ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಅಂತವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ. ಅವಶ್ಯಕ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ  ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್-19 ಭೀತಿ ಹಿನ್ನಲೆಯಲ್ಲಿ ಜೀವನಾವಶ್ಯಕ ವಸ್ತುಗಳು ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುಕ್ತ ಮಾರುಕಟ್ಟೆಯಲ್ಲಿ ಮಳಿಗೆಗಳನ್ನು ತೆರೆದು ವಿತರಿಸಲು ಈಗಾಗಲೇ ಸೂಚಿಸಲಾಗಿದೆ.

 ಕೋವಿಡ್-19 ಪರಿಸ್ಥಿತಿಗೆ ಅನ್ವಯವಾಗುವಂತೆ ಗ್ರಾಹಕರು ಹಾಗೂ ವ್ಯಾಪಾರಸ್ಥರು ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಕೋನ ಇಟ್ಟುಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕೂಡಾ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ.

 ಗ್ರಾಹಕರಿಂದ ಹೆಚ್ಚಿನ ದರ ಪಡೆದಲ್ಲಿ ಹಾಗೂ ಕೃತಕ ಅಭಾವ ಮತ್ತು ಅನಧಿಕೃತವಾಗಿ ದಾಸ್ತಾನು ಕಂಡುಬಂದಲ್ಲಿ ಅಂತವರ ವಿರುದ್ದ ವಸ್ತುಗಳ ಕಾಯ್ದೆಯಡಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous ವ್ಯಾಲೆಂಟೇನ್ಸ್ ಡೇಗೆ ಮನಸ್ಸಿನ ಮಾತು ಬಿಚ್ಚಿಟ್ಟ ರಶ್ಮಿಕಾ.
Next ಕಲಬುರಗಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಕೋವಿಡ್-19 ಸಭೆ.

You might also like

0 Comments

No Comments Yet!

You can be first to comment this post!

Leave a Reply