ವಿಶ್ವದ ದೊಡ್ಡಣ್ಣ ಅಮೇರಿಕಾ…?

ವಿಶ್ವದ ದೊಡ್ಡಣ್ಣ ಅಮೇರಿಕಾ…?

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೊನಾ ವೈರಸ್‌ ಮಿಂಚಿನ ವೇಗದಲ್ಲಿ ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ ಈ ದೇಶದಲ್ಲಿ 2,569 ಮಂದಿ ಮೃತಪಟ್ಟಿದ್ದಾರೆ. ಇಷ್ಟು ಜನ ಒಂದೇ ದಿನ ಪ್ರಾಣ ಕಳೆದುಕೊಂಡಿರೋದು ಇದೇ ಮೊದಲಾಗಿದ್ದು, ಕೋವಿಡ್‌ ಸಾವಿನಲ್ಲಿ ಹೊಸ ದಾಖಲೆಯಾಗಿದೆ. ಇದರೊಂದಿಗೆ ಅಮೆರಿಕಾದಲ್ಲಿ ಸಾವಿನ ಸಂಖ್ಯೆ 28,326ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 6,37,000ಕ್ಕೆ ತಲುಪಿದೆ. ಈ ಮೂಲಕ ನಾನೇ ವಿಶ್ವದ ದೊಡ್ಡಣ್ಣ ಎಂದು ಜಂಭಕ್ಕೆ ಕೊಡಲಿ ಏಟು ಬಿದ್ದಿದೆ. ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕಾ ಅಗ್ರಸ್ಥಾನಕ್ಕೇರಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಒಪ್ಪಿಕೊಂಡಿದ್ದಾರೆ.  ಇದುವರೆಗೆ 200ಕ್ಕೂ ಹೆಚ್ಚು ದೇಶಗಳಲ್ಲಿ ವಿಸ್ತರಿಸಿರುವ ಕೊರೊನಾ ವೈರಸ್‌ ಸುಮಾರು 1 ಲಕ್ಷ 34 ಸಾವಿರ ಮಂದಿಯನ್ನು ಬಲಿ ಪಡೆದುಕೊಂಡಿದೆ. 20.83 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಐರೋಪ್ಯ ದೇಶಗಳಲ್ಲೇ ಇದರ ಪ್ರಭಾವ ಹೆಚ್ಚಾಗಿದೆ.

ಅಮೆರಿಕಾದ ಆರ್ಥಿಕತೆ ಮೇಲೆ ಕೊರೊನಾ ವೈರಸ್‌ ಎಷ್ಟು ಪರಿಣಾಮ ಬೀರಲಿದೆ ಎಂಬ ಮಾಹಿತಿ ಆಧಾರ ಸಹಿತ ಬಹಿರಂಗವಾಗುತ್ತಿದೆ. ಎರಡನೇ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಕೈಗಾರಿಕೆ ಉತ್ಪಾದನೆಯ ಪ್ರಮಾಣವೂ ಗಣನೀಯವಾಗಿ ಕುಸಿದಿದೆ. ನಿರುದ್ಯೋಗ ಹೆಚ್ಚುತ್ತಲೇ ಇದೆ. ಕಳೆದ ಮೂರು ವಾರಗಳಲ್ಲಿ 1 ಕೋಟಿ 70 ಲಕ್ಷ ಮಂದಿ ನಿರುದ್ಯೋಗದ ಪರಿಹಾರಕ್ಕೆ ಮನವಿ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಮತ್ತಷ್ಟು ನಷ್ಟ ಸಂಭವಿಸಲಿದೆ .  ಈ ಬಾರಿ 2020ರ ಮಾರ್ಚ್‌ನಲ್ಲಿ ಅಂಗಡಿ, ರೆಸ್ಟೋರೆಂಟ್‌ಗಳ ವಹಿವಾಟು ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದೆ.. ಆರ್ಥಿಕ ವ್ಯವಸ್ಥೆಯ ಮೇಲೆ ಕೊರೊನಾ ವೈರಸ್‌ ವ್ಯತಿರಿಕ್ತ ಪರಿಣಾಮ ಬೀರಿರುವುದರಿಂದ ಅಲ್ಲಿನ ಪ್ರಜೆಗಳ ನೆರೆವಿಗೆ ಧಾವಿಸಿರುವ ಟ್ರಂಪ್‌ ಸರ್ಕಾರ, ಎಲ್ಲರ ಖಾತೆಗಳಿಗೆ ಹಣ ಜಮೆ ಮಾಡುತ್ತಿದೆ.

Previous ಚೀನಾದಲ್ಲಿ ಮತ್ತೆ ಹೊಸದಾಗಿ 46 ಕೋವಿಡ್ ಕೇಸ್ಗಳು.
Next ಲಾಕ್ ಡೌನ್ ಸರಣಿ ರಜೆ: ಸೋವೇನಹಳ್ಳಿಯ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಮೂವರು ಕಾರ್ಮಿಕರು..!

You might also like

0 Comments

No Comments Yet!

You can be first to comment this post!

Leave a Reply