ರಸ್ತೆ ಮೇಲೆ ಅನಗತ್ಯ ಓಡಾಡಿದರೆ ಜೈಲೇ ಗತಿ.

ರಸ್ತೆ ಮೇಲೆ ಅನಗತ್ಯ ಓಡಾಡಿದರೆ ಜೈಲೇ ಗತಿ.

ಕಲಬುರಗಿ.ಏ.11

 ಕೊರೋನಾ ಸಾಂಕ್ರಾಮಿಕ ಸೋಂಕು ಹರಡದಂತೆ ಜನಸಂದಣಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಇರುವುದರಿಂದ ಸಾರ್ವಜನಿಕರು ಅನಗತ್ಯ ರಸ್ತೆ ಮೇಲೆ ಓಡಾಡಿದರೆ ಅಂತಹವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಸಂಬಂಧ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಸುಮಾರು 200ಕ್ಕೂ ಹೆಚ್ಚು ದೇಶಗಳಲ್ಲಿ ಹಬ್ಬಿರುವ ಕೊರೋನಾ ಸೋಂಕಿಗೆ ಇದೂವರೆಗೆ ವಿಶ್ವದಲ್ಲಿ 1 ಲಕ್ಷ ಜನ ಮೃತಪಟ್ಟಿದ್ದು, 17 ಲಕ್ಷ ಜನ ಕೋವಿಡ್-19 ಸೋಂಕಿತರಾಗಿದ್ದಾರೆ. ಕೊರೋನಾ ಸೋಂಕು ಗುಣಪಡಿಸಲು ಯಾವುದೇ ಔಷಧಿಯಿಲ್ಲ. ಮನೆಯಿಂದ ಹೊರಬಾರದಿರುವುದೇ ದಿವ್ಯೌಷಧಿಯಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

 ತಮ್ಮ ಜೀವನ ಲೆಕ್ಕಿಸದೆ ಪೊಲೀಸ್, ವೈದ್ಯರು, ಅಶಾ-ಅಂಗನವಾಡಿ ಕಾರ್ಯಕರ್ತೆಯರು, ಅಧಿಕಾರಿ ವರ್ಗ ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಜಿಲ್ಲಡಳಿತಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Previous ಲಾಕ್ಡೌನ್ ಆದೇಶ ಉಲ್ಲಂಘನೆ: 1374 ದ್ವಿಚಕ್ರ ವಾಹನ ಜಪ್ತಿ.
Next ರೋಗಿಗಳಿಗೆ ಚಿಕಿತ್ಸೆ ನೀಡಿ: ಇಲ್ಲವೇ ಕಾನೂನು ಕ್ರಮ.

You might also like

0 Comments

No Comments Yet!

You can be first to comment this post!

Leave a Reply