ಒಂದೇ ಕಲ್ಲಿಗೆ ಎರಡು ಹಕ್ಕಿ, ರೈತರಿಗೆ ವರವಾದ ದಾನಿಗಳ ಹೊಸ ಉಪಾಯ..

ಒಂದೇ ಕಲ್ಲಿಗೆ ಎರಡು ಹಕ್ಕಿ, ರೈತರಿಗೆ ವರವಾದ ದಾನಿಗಳ ಹೊಸ ಉಪಾಯ..

ಬಳ್ಳಾರಿ-ಏ-18

ಮಹಾ ಮಾರಿ ಕೊರೋನ ಭಿತಿ ಹಿನ್ನಲೆಯಲ್ಲಿ ರೂತರು ತಾವು ಬೆಳೆದ ಬೆಳಯನ್ನು ಮಾರಲು ಆಗದೇ ಇತ್ತ ಹಾಳು ಮಾಡಲು ಮನಸ್ಸು ಬಾರದ ಸ್ಥಿತಿಯಲ್ಲಿ ರೈತರಿದ್ದಾರೆ. ಆದ್ರೆ ಈ ರೀತಿಯ ಬಡ ರೈತರ ಸಹಾಯಕ್ಕೆ ಈಗ ದಾನಿಗಳು ಮುಂದೆ ಬಂದಿದ್ದು ಒಂದೆ ಕಲ್ಲಿಗೆ ಎರಡು ಹಕ್ಕಿ ಹೊಡೆದಂತೆ ಬಡ ರೈತರಿಂದ ಅವರು ಬೆಳೆದ ಬೆಳೆಯನ್ನು ಖರೀದಿ ಮಾಡಿ ಬಡವರಿಗೆ ಹಂಚುವ  ಮೂಲಕ ಇಬ್ಬರಿಗೂ ಸಹಾಯ ಮಾಡಿದ್ದಾರೆ.  

ಕೊರೋನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿರುವ ನಿಮಿತ್ಯ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗ್ರಾಮಗಳ ರೈತರು ಬೆಳೆದ ತರಕಾರಿ ಫಸಲನ್ನು ನೇರವಾಗಿ ಅವರ ಜಮೀನಿನಲ್ಲಿಯೇ ಖರೀದಿಸಿ, ಬಡ ಆಟೋ ಚಾಲಕರು , ಕೂಲಿಕಾರ್ಮಿಕರು, ತೊಂದರೆಗೊಳಗಾದ  ದಿನಗೂಲಿ ಕೆಲಸಗಾರರಿಗೆ  ದಿನನಿತ್ಯದ  ದಿನಸಿ ಸಾಮಗ್ರಿಗಳ ರೇಷನ್ ಕಿಟ್ ಗಳನ್ನು ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ಮತ್ತು ಅವರ ತಂಡ ವಿತರಣೆ ಮಾಡಿದೆ. ಈ ಮೂಲಕ ಬಡವಿಗೆ ಸಹಾಯ ಮಾಡುವದರ ಜೊತೆಯಲ್ಲಿ ಲಾಕ್ ಡೌನ್ ನಿಂದ ಅಸಹಾಯಕ ಸ್ಥಿತಿಯಲ್ಲಿ ಇರುವ ರೈತನ ಸಹಾಯಕ್ಕೆ ದಾವಿಸಿದ್ದಾರೆ. ಇನ್ನು ಈ ರೀತಿಯಲ್ಲಿ ಸಹಾಯ ಮಾಡುವುದರಿಂದ ರೈತರು ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆದು ರೈತರ ಕಷ್ಟ ಪರಿಹಾರಕ್ಕೆ ಸಹಾಯ ಮಾಡಿದ್ದಾರೆ. 

Previous ಲಾಕ್ ಡೌನ್ ಸಡಿಲಿಕೆ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ.
Next ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುತ್ತದೆ ಹತಾಶರಾಗದೆ ಅಧ್ಯಯನಶೀಲರಾಗಿ- ಶಿಕ್ಷಣ ಸಚಿವ ಸುರೇಶ್ ಕುಮಾರ್.

You might also like

0 Comments

No Comments Yet!

You can be first to comment this post!

Leave a Reply