ಗಾಂಜಾ ಮಾರಾಟ ಇಬ್ಬರ ಬಂಧನ

ಗಾಂಜಾ ಮಾರಾಟ ಇಬ್ಬರ ಬಂಧನ

ಕೋಲಾರ-

ಇಂದು ಗಲ್‍ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯ ಆರ್.ಜಿ. ಲೇಔಟ್ ಮುಖ್ಯ ರಸ್ತೆಯ ಬಳಿ 02 ಜನ ಗಾಂಜಾ ಮಾರಾಟ ಮಾಡಲು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾರೆಂದು ಮಾಹಿತಿ ಅವರು ಮಾರಾಟ ಮಾಡಲು ತಂದಿದ್ದ ಬೆಲೆ ಸುಮಾರು 4 ಲಕ್ಷ ರೂ. ಮೌಲ್ಯದ 10 ಕೆ.ಜಿ ತೂಕದ ಮಾದಕ ವಸ್ತುವಾದ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ  ಪಡೆದ ಪೋಲಿಸರು ಸದರಿ ಸ್ಥಳದಲ್ಲಿ ಪಂಚರೊಂದಿಗೆ ಕೋಲಾರ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಸಾಹಿಲ್ ಬಾಗ್ಲಾ ರವರ ಉಪಸ್ಥಿತಿಯಲ್ಲಿ ದಾಳಿ ಮಾಡಿ ಆರೋಪಿಗಳಾದ ನರಸಿಂಹಲು ಬಿನ್ ಲೇಟ್ ರಾಮಣ್ಣ, 56 ವರ್ಷ, ಪ್ಲಾಸ್ಟಿಕ್ ಬಿಂದಿಗೆ ವ್ಯಾಪಾರ, ವಾಸ ಭಗತ್ ಸಿಂಗ್ ಕಾಲೋನಿ, ಮೇಲಪಟ್ಟಲು ಅಂಚೆ, ಪುಂಗನೂರು ತಾಲ್ಲೂಕು, ಆಂಧ್ರಪ್ರದೇಶ  ಹಾಗೂ ಮತ್ತೊಬ್ಬ ಆರೋಪಿ ರೆಡ್ಡಪ್ಪ. ಜಿ ಬಿನ್ ಗಟ್ಟಪ್ಪ, 42 ವರ್ಷ, ಪೆಟಿಂಗ್ ಕೆಲಸ, ಮಾರ್ಜೇನಹಳ್ಳಿ ಗ್ರಾಮ, ಗುಂಡಗಲ್ಲು ಅಂಚೆ, ಪಲಮನೇರು ತಾಲ್ಲೂಕು, ಆಂಧ್ರಪ್ರದೇಶ ಇವರುಗಳನ್ನು ದಸ್ತಗಿರಿ ಮಾಡಿ ಒಂದು ಟಿ.ವಿ.ಎಸ್ ಎಕ್ಸೆಲ್ ಹೆವಿ ಡ್ಯೂಟಿ ದ್ವಿಚಕ್ರ ವಾಹನ ಸಂಖ್ಯೆ ಎಪಿ-03-ಸಿಹೆಚ್-4311 ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಗಲ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಕೋಲಾರ ಜಿಲ್ಲೆಯ ಗಲ್‍ಪೇಟೆ ಪೊಲೀಸ್ ಠಾಣೆಯ ಉಪ  ಆರಕ್ಷಕ ನಿರೀಕ್ಷಕರು ತಿಳಿಸಿದ್ದಾರೆ.

Previous ಸರ್ಕಾರಿ ವಸತಿ ಶಾಲೆಯ ಹೊರಗುತ್ತಿಗೆ ನೌಕರರ ಸೇವೆಯನ್ನ ಕಾಯಂಗೊಳಿಸಲು ಮನವಿ
Next 473 ಪೊಲೀಸರಿಗೆ ಕೋವಿಡ್, 7ಜನರ ಸಾವು

You might also like

0 Comments

No Comments Yet!

You can be first to comment this post!

Leave a Reply