ಮನೆಯಲ್ಲಿ ಇರುವ ಹೆಂಡತಿಗೆ ಢವಢವ…!

ಮನೆಯಲ್ಲಿ ಇರುವ ಹೆಂಡತಿಗೆ ಢವಢವ…!

ಬೆಂಗಳೂರು –

 ಗಂಡ ಹೆಂಡತಿ ಚಿತ್ರದ ಖ್ಯಾಯಾತಿಯ  ಸಂಜನಾ ಗರ್ಲಾನಿ ಹೆಸರು ಈಗ ಡ್ರಗ್ಸ್ ಮಾಫಿಯಾದಲ್ಲಿ  ತಳುಕು ಹಾಕಿಕೊಂಡಿದೆ. ಸದ್ಯ ಸ್ಯಾಂಡಲ್ವುಡ್ನಲ್ಲಿ ಎದ್ದಿರುವ ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜಾನ ಗರ್ಲಾನಿ ಹೆಸರು ತಳುಕು ಹಾಕಿಕೊಳ್ತಿದ್ದಂತೆ ಎಚ್ಚೆತ್ತ ನಟಿ ನನನ್ನು ಈ ಪ್ರಕರಣದಲ್ಲಿ ಎಳದು ತರಲಾಗಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ ಸಿಸಿಬಿ ಕಸ್ಟಡಿಯಲ್ಲಿ ಇರುವ ಆಪ್ತ ರಾಹುಲ್ ಬಗ್ಗೆ ನಟಿ ಸಂಜನಾ ಬಾಯ್ಬಿಟ್ಟಿದ್ದಾರೆ. ರಾಹುಲ್ ತುಂಬಾ ಅಮಾಯಕ, ರಾಹುಲ್ ನನ್ನ ಅಣ್ಣಾ ಅಲ್ಲ ಆದ್ರೆ ಅಣ್ಣನ ಹಾಗೆ ಎಂದಿದ್ದಾರೆ. ಅಲ್ಲದೆ ಮೂರು ವರ್ಷಗಳಿಂದ ರಾಹುಲ್ ನನಗೆ ಪರಿಚಯ. ರಾಹುಲ್ ತುಂಬಾ ಒಳ್ಳೆಯ ಹುಡುಗ, ಅವನು ರಿಯಲ್ ಎಸ್ಟೇಟ್ ಮಾಡ್ತಾನೆ. ಅಲ್ಲದೆ ಪೊಲೀಸರ ಮೇಲೆ ನನಗೆ ನಂಬಿಕೆ ಇದೆ, ನೊಟೀಸ್ ಬಂದ್ರೆ ನಾನು ತನಿಖೆಗೆ ಸಹಕರಿಸುತ್ತೇನೆ ಎಂದಿದ್ದಾರೆ.

 ಇದರ ಬೆನ್ನಲ್ಲೆ ರಾಹುಲ್ ವಿಚಾರಣೆ ನಡೆಸುತ್ತಿರುವ ಪೊಲೀಸ್ರ ಹಲವಾರು ಮಾಹಿತಿ ಕಲೆಹಾಕಿದ್ದು ಸಂಜಾನಾ ಅವರನ್ನು ವಿಚಾರಣೆಗೆ ಕರೆಸುವ ಸಾದ್ಯತೆ ಹೆಚ್ಚಾಗಿದೆ. ಡ್ರಗ್ಸ್ ಫೆಡ್ಲರ್ ಗಳ ಜೊತೆಯಲ್ಲಿ ರಾಹುಲ್ ಗೆ ಸಂಪರ್ಕ ಹೊಂದಿರುವ ಬಗ್ಗೆ ಹಲವಾರು ಮಾಹಿತಿಯನ್ನು ಪೊಲೀಸ್ರು ಕಲೆ ಹಾಕಿದ್ದಾರೆ ಇದೇ ಕಾರಣಕ್ಕೆ ರಾಹುಲ್ ಯಾರ ಜೊತೆಯಲ್ಲಿ ಸಂಪೊರ್ಕ ಹೊಂದಿದ್ದ ಅವರನ್ನು ವಿವಾರಣೆಗೆ ಕರೆಯಿಸಿಕೊಳ್ಳುವ ಸಾದ್ಯತೆ ಹೆಚ್ಚಾಗಿದೆ. ಹೋಗಾಗಿ  ಸಂಜನಾ ಅವರನ್ನು ಸಿಸಿಬಿ ಪೊಲೀಸ್ರು ವಿಚಾರಣೆಗೆ ಕರೆಯುವ ಸಾದ್ಯತೆ ಹೆಚ್ಚಾಗಿದೆ. ಇನ್ನು ಸಂಜನಾ ಆಪ್ತ ರಾಹೂಲ್ ನೀಡುರುವ ಪ್ರತಿಯೊಂದ ಹೇಳಿಕೆಯನ್ನು ವಿಡಿಯೋ ಚಿತ್ರಿಕರಣ ಮಾಡಿರುವು ಸಿಸಿಬಿ ಪೊಲೀಸ್ರು ಒಂದು ಸಂಜನಾ ಅವರ ಹೇಳಿಕಯನ್ನು ಸಹ ವಿಡಿಯೋ ಚಿತ್ರಿಕರಣ ಮಾಡಲಿದ್ದಾರೆ. ಒಂದು ವೇಳೆ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡು ಬಂದ್ರೆ ಸಿಸಿಬಿ ಪೊಲೂಸ್ ಮುಂದಿನ ಕ್ರಮಕ್ಕೆ ಮುಂದಾಗಲಿದ್ದಾರೆ.

Previous ರಾಹುಲ್ ನನ್ನ ಅಣ್ಣಾ ಅಲ್ಲ, ಅಣ್ಣನ ಹಾಗೆ ..!?
Next ಬಳ್ಳಾರಿಯಲ್ಲಿಂದು ಹೊಸದಾಗಿ 267 ಕೊರೊನಾ ಪಾಸಿಟಿವ್ ಕೇಸ್ ಗಳು‌ ಪತ್ತೆ

You might also like

0 Comments

No Comments Yet!

You can be first to comment this post!

Leave a Reply