ರೋಗಿಗಳಿಗೆ ಚಿಕಿತ್ಸೆ ನೀಡಿ: ಇಲ್ಲವೇ ಕಾನೂನು ಕ್ರಮ.

ರೋಗಿಗಳಿಗೆ ಚಿಕಿತ್ಸೆ ನೀಡಿ: ಇಲ್ಲವೇ ಕಾನೂನು ಕ್ರಮ.

 ಕೋವಿಡ್-19 ನೆಪವೊಡ್ಡಿ, ಕಿಡ್ನಿ, ಮಧುಮೇಹ, ಹೃದ್ರೋಗ ಸೇರಿದಂತೆ ಇತರೆ ಬೇರೆ ರೋಗಿಗಳು ಅಸ್ಪತ್ರೆಗೆ ಬಂದಾಗ ವೈದ್ಯರು ಸೂಕ್ತ ಚಿಕಿತ್ಸೆ ನೀಡಬೇಕು. ಕೋವಿಡ್-19 ಭಯದಿಂದ ಎಲ್ಲಾ ರೋಗಿಗಳನ್ನು ಚಿಕಿತ್ಸೆಗೆ ನಿರಾಕರಿಸಿ ವಾಪಸ್ಸು ಕಳುಹಿಸಬಾರದು. ಈ ರೀತಿ ರೋಗಿಗಳಿಗೆ ಚಿಕಿತ್ಸೆ ನೀಡದೆ ತಮ್ಮ ವೃತ್ತಿ ಧರ್ಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಆರೋಗ್ಯ ತರ್ತು ಪರಿಸ್ಥಿತಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಾದ್ಯಂತ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ  ಶಾಲೆ ಮತ್ತು ನಿಲಯಗಳಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಗೃಹ ಬಂಧನದಲ್ಲಿರುವ 4963 ಜನರಿಗೆ ಊಟದ ವ್ಯವಸ್ಥೆ ಇಲಾಖೆಯಿಂದಲೆ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಖಾತೆಯ ಸಚಿವರು ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದರು.

Previous ರಸ್ತೆ ಮೇಲೆ ಅನಗತ್ಯ ಓಡಾಡಿದರೆ ಜೈಲೇ ಗತಿ.
Next ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರೆಲ್ಲರಿಗೂ ಆಹಾರಧಾನ್ಯ ಕೊಡಿ.

You might also like

0 Comments

No Comments Yet!

You can be first to comment this post!

Leave a Reply