ಸೆ.9 ರಿಂದ‌ 11ರ ವರೆಗೆ ಟ್ರೇಡ್ ಲೈಸೆನ್ಸ್ ಕ್ಯಾಂಪ್

ಸೆ.9 ರಿಂದ‌ 11ರ ವರೆಗೆ ಟ್ರೇಡ್ ಲೈಸೆನ್ಸ್ ಕ್ಯಾಂಪ್

ಕಲಬುರಗಿ-

 ಉದ್ದಿಮೆದಾರರು ತಾವು ನಡೆಸುತ್ತಿರುವ ಉದ್ದಿಮೆಗೆ ಕಲಬುರಗಿ ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಿಗೆ ಪಡೆಯುವುದು ಅತೀ ಅವಶ್ಯಕವಾಗಿರುವ ಹಿನ್ನೆಲೆಯಲ್ಲಿ ಉದ್ದಿಮೆ ಪರವಾನಿಗೆ (ಟ್ರೇಡ್ ಲೈಸೆನ್ಸ್ ) ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ವಿವಿಧೆಡೆ ಕ್ಯಾಂಪ್ ಆಯೋಜಿಸಲಾಗುತ್ತಿದೆ.

 ಆರಂಭಿಕವಾಗಿ ಸೆ.9 ರಿಂದ 11ರ ವರೆಗೆ 3 ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಾಯಂಕಾಲ‌ 5 ಗಂಟೆ ವರೆಗೆ ಮೊದಲ ಕ್ಯಾಂಪನ್ನು ಕಲಬುರಗಿ ನಗರದ ಸೂಪರ್ ಮಾರ್ಕೆಟ್‍ನಲ್ಲಿರುವ ದತ್ತ ಮಂದಿರ ಆವರಣದಲ್ಲಿ ಆಯೋಜಿಸಲಾಗಿದೆ.

ಕಾರಣ ನಗರದ ಉದ್ದಿಮೆದಾರರು ಮೇಲ್ಕಂಡ ಸಮಯದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗುವ ಮೂಲಕ ಸುವರ್ಣಾವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಪಾಲಿಕೆಯ ಅರೋಗ್ಯಾಧಿಕಾರಿ ಡಾ. ವಿನೋದಕುಮಾರ ಎಸ್.ಹೆಚ್-9740627547 ಅವರನ್ನು ಸಂಪರ್ಕಿಸಲು ಕೋರಿದೆ.

Previous ಐಪಿಎಲ್ ವೇಳಾ ಪಟ್ಟಿ ಬಿಡುಗಡೆ
Next ಬಿಂಡಿಗ ದೇವಿರಮ್ಮ ದೇವಾಲಯದ ಅಭಿವೃದ್ಧಿಗೆ ಅನುದಾನ ನೀಡಿದ ಸಚಿವ

You might also like

0 Comments

No Comments Yet!

You can be first to comment this post!

Leave a Reply