ತುಂಬಿ ಹರಿಯುತ್ತಿರುವ ನದಿಯಲ್ಲಿ ಯುವಕರ ಹುಚ್ಚಾಟ

ತುಂಬಿ ಹರಿಯುತ್ತಿರುವ ನದಿಯಲ್ಲಿ ಯುವಕರ ಹುಚ್ಚಾಟ

ಬಳ್ಳಾರಿ-

ತುಂಬಿ ಹರಿಯುತ್ತಿರುವ ನದಿಯಲ್ಲಿ ಯುವಕರ ಹುಚ್ಚಾಟ ಮಾಡಿದ್ದು ,100 ಅಡಿ ಎತ್ತರದ ಬ್ರಿಡ್ಜ್ ಮೇಲಿಂದ ನದಿಗೆ ಯುವಕರು ಹಾರಿದ್ದಾರೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು ದೇಶನೂರು ಗ್ರಾಮದ ಬಳಿ ಇರುವ ಸೇತುವೆಯಿಂದ ಜಿಗಿದು ನದಿಯಲ್ಲಿ ಈಜಾಡಿದ್ದಾರೆ. ತುಂಗಭದ್ರಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ. ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ‌ .

ಆದ್ರೆ ಈ ಯುವಕರು ಅಪಾಯ ಲೆಕ್ಕಿಸದೇ ಸುಮಾರು 100 ಅಡಿ ಎತ್ತರದ ಬ್ರಿಜ್ ನಿಂದ ನದಿಗೆ ಹಾರಿ ಹುಚ್ಚಾಟ ಮಾಡಿದ್ದಾರೆ. ನೀರಿನ ರಭಸದಲ್ಲಿ ಒಂದು ಕ್ಷಣ ಮೈಮರೆತರೂ ನದಿಯಲ್ಲಿ ಕೊಚ್ಚಿಕೊಂಡು ಹೋಗುವ ಸಾದ್ಯತೆ ಹೆಚ್ಚಿದ್ದು ಇದನ್ನು ಲೆಕ್ಕಿಸದೇ ಯುವಕರು ನದಿಗೆ ಹಾರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು , ಸೇತುವೆ ಬಳಿ ಪೊಲೀಸರನ್ನ ನಿಯೋಜಿಸುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.

ವಿಡೀಯೋ ವಿಕ್ಷೀಸಲು ಕೆಳಗಿನ ಲಿಂಕ್ ಒತ್ತಿ.

Previous 60 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ
Next ರೈತರ ಬೆಳೆ ಸಮೀಕ್ಷೆ ತಿದ್ದುಪಡಿಗೆ “ಬೆಳೆ ದರ್ಶಕ್-2020 ಆ್ಯಪ್”

You might also like

0 Comments

No Comments Yet!

You can be first to comment this post!

Leave a Reply