ಜಿಲ್ಲೆಯಲ್ಲಿ 10 ನ್ಯಾಯಬೆಲೆ ಅಂಗಡಿಗಳ ಅಮಾನತ್ತು.

ಜಿಲ್ಲೆಯಲ್ಲಿ 10 ನ್ಯಾಯಬೆಲೆ ಅಂಗಡಿಗಳ ಅಮಾನತ್ತು.

ಹಾಸನ ಏ. 17

 ಕೋವಿಡ್-19 ಸಾಂಕ್ರಾಮಿಕ ರೋಗವು ರಾಷ್ಟ್ರದಾದ್ಯಂತ ವ್ಯಾಪಿಸಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದ್ದು, ಈ ಸಮಯದಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಭದ್ರತೆಯನ್ನು ನೀಡುವ ಸಲುವಾಗಿ ಸಾರ್ವಜನಿಕ ವಿತರಣಾ ಪದ್ದತಿಯಡಿ ಏಪ್ರಿಲ್ ಹಾಗೂ ಮೇ-2020 ಎರಡು ಮಾಹೆಗಳ ಪಡಿತರವನ್ನು ಏಪ್ರಿಲ್-2020 ಮಾಹೆಯಲ್ಲಿ ಒಟ್ಟಿಗೆ ವಿತರಿಸಲು ಸರ್ಕಾರವು ಆದೇಶಿಸಿರುತ್ತದೆ.

 ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿದಾರರು ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದಂತೆ ಪಡಿತರ ವಿತರಿಸಲು ಸೂಚಿಸಲಾಗಿದ್ದರೂ ಸಹ ಕೆಲವು ನ್ಯಾಯಬೆಲೆ ಅಂಗಡಿದಾರರು ಪಡಿತರ ಚೀಟಿದಾರರಿಂದ ಉಚಿತ ಪಡಿತರ ವಿತರಣೆಗೂ ಹಣ ಪಡೆಯುತ್ತಿರುವುದು, ಕಡಿಮೆ ತೂಕ ನೀಡುತ್ತಿರುವುದು, ಇತರೆ ವಸ್ತುಗಳನ್ನು ನೀಡಿ ಹೆಚ್ಚು ಹಣ ಪಡೆಯುತ್ತಿರುವುದು ಹಾಗೂ ಅನುಚಿತವಾಗಿ ವರ್ತಿಸುತ್ತಿರುವ ಪ್ರಕರಣಗಳು ಕಂಡು ಬಂದಿದ್ದರಿಂದ 10 ನ್ಯಾಯಬೆಲೆ ಅಂಗಡಿ ಪ್ರಾಧಿಕಾರಗಳನ್ನು ಅಮಾನತ್ತು ಪಡಿಸಲಾಗಿರುತ್ತದೆ. ಹಾಸನ ನಗರ 4, ಹಾಸನ ತಾಲ್ಲೂಕು 2, ಚನ್ನರಾಯಪಟ್ಟಣ 3 ಹಾಗೂ ಅರಸೀಕೆರೆ 1 ನ್ಯಾಯಬೆಲೆ ಅಂಗಡಿ ಸೇರಿದಂತೆ ಒಟ್ಟು 10 ನ್ಯಾಯಬೆಲೆ ಅಂಗಡಿಗಳನ್ನು ಅಮಾನತ್ತು ಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Previous ಮನೆ ಬಾಗಿಲಿಗೆ ಸಂಚಾರಿ ಎಟಿಎಂ ಸೇವೆ ಪ್ರಾರಂಭ.
Next ಕಲಬುರಗಿ ಜಿಮ್ಸ್ ಕೋವಿಡ್-19 ಆಸ್ಪತ್ರೆಯಾಗಿ ಕಾರ್ಯನಿರ್ವಹಣೆ: 10 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ.

You might also like

0 Comments

No Comments Yet!

You can be first to comment this post!

Leave a Reply