ಎರಡು ವಿಶ್ವವಿದ್ಯಾಲಯಗಳ ವಸತಿ ನಿಲಯಗಳನ್ನು ಕೊರೊಂಟೈನ್ ಸೆಂಟರ್.

ಎರಡು ವಿಶ್ವವಿದ್ಯಾಲಯಗಳ ವಸತಿ ನಿಲಯಗಳನ್ನು ಕೊರೊಂಟೈನ್ ಸೆಂಟರ್.

ಕಲಬುರಗಿ.ಏ.18.

 ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತವಾಗಿ ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿರುವ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ತಾತ್ಕಾಲಿಕವಾಗಿ ಕೊರೊಂಟೈನ್ ಸೆಂಟರ್‍ಗಳನ್ನಾಗಿ ಪರಿವರ್ತಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.

ಸಾಂಕ್ರಾಮಿಕ ಕಾಯ್ದೆ 1897, ಕರ್ನಾಟಕ ಕೋವಿಡ್-19 ರೆಗ್ಯುಲೇಶನ್ ಉಪ ಕಲಂ (24) 2020 ನಿಯಮ 12ರಲ್ಲಿ ಹಾಗೂ   Disaster Management Act 2005 , ಕಲಂ 25, 26 ಮತ್ತು 30 ರಡಿ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 133ರನ್ವಯ ಈ ಆದೇಶ ಹೊರಡಿಸಿದ್ದು, ಎರಡೂ ವಿಶ್ವವಿದ್ಯಾಲಯಗಳ ಕುಲಸಚಿವರು ತಕ್ಷಣವೇ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸುಪರ್ದಿಗೆ ಹಸ್ತಾಂತರಿಸಬೇಕೆಂದು ಡಿ.ಸಿ. ಅವರು ತಮ್ಮ ಆದೇಶ ಮಾಡಿದ್ದಾರೆ.

Previous ಲೈಂಗಿಕ ಕಾರ್ಯಕರ್ತೆಯರಿಗೆ ಸೌಲಭ್ಯ ಒದಗಿಸುವಂತೆ ಮನವಿ.
Next ರೈತ ಕುಟುಂಬಕ್ಕೆ ವಿಧಾನ ಪರಿಷತ್ ಸದಸ್ಯ.

You might also like

0 Comments

No Comments Yet!

You can be first to comment this post!

Leave a Reply