ಕೊರೋನಾ ಸೋಂಕಿನ ಬಗ್ಗೆ ಸಾರ್ವಜನಿಕರು ಭಯಪಡುವಂತಿಲ್ಲ: ಪ್ರಜ್ವಲ್ ರೇವಣ್ಣ.

ಕೊರೋನಾ ಸೋಂಕಿನ ಬಗ್ಗೆ ಸಾರ್ವಜನಿಕರು ಭಯಪಡುವಂತಿಲ್ಲ: ಪ್ರಜ್ವಲ್ ರೇವಣ್ಣ.

ಹಾಸನ,ಏ.3

ಹಾಸನ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಕುರಿತು ಜಿಲ್ಲಾಡಳಿತ ಮುಂಜಾಗೃತ ಕ್ರಮವಹಿಸಿದೆ ಹಾಗಾಗಿ ಸಾರ್ವಜನಿಕರು ಭಯಪಡುವಂತಿಲ್ಲ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಯಾವುದೇ ಲೋಪದೀಷಗಳು ಕಂಡು ಬಂದಲ್ಲಿ ಅದನ್ನು ಸರಿಪಡಿಸುವ ಕ್ರಮ ಕೈಗೊಳ್ಳುತ್ತೇವೆ ಎಂದು ಲೋಕ ಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರು ತಿಳಿಸಿದ್ದಾರೆ.

ಚಿಲ್ಲರೆ ಮಾರಾಟಗಾರರಿಗೆ ಎ.ಪಿ.ಎಂ.ಸಿ. ಯಲ್ಲಿ ಮುಕ್ತವಾಗಿ ವ್ಯಾಪಾರ ಮಾಡಲು ಹಾಗೂ ಓಡಾಡಲು ಅವಕಾಶ ಕಲ್ಪಸಿಕೊಟ್ಟಿದೆ ಹಾಗೂ ದವಸ ದಾನ್ಯಗಳನ್ನ ಹೊರ ರಾಜ್ಯದೊಂದಿಗೆ ಖರೀದಿಸಲು ಅವಕಾಶ ನೀಡಿದ್ದು ಸಾಗಾಣಿಕೆಗೆ ಯಾವುದಾದರು ತೊಂದರೆಯಾದರೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರೆ ಅವರು ಅವಕಾಶ ಕಲ್ಪಿಸುತ್ತಾರೆ ಎಂದರು.  ಸಗಟು ಔಷದ ಮಾರಾಟಗಾರರ ತಾಲ್ಲೂಕಿನ ಎರಡು ವಾಹನಗಳಿಗೆ ಪರವಾನಗಿ ನೀಡಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಿಳಿಸಿದ್ದು ಅವರು ಕೊರತೆ ಇರುವ ತಾಲ್ಲೂಕುಗಳಿಗೆ ಔಷದಗಳ ಸರಬರಾಜು ಮಾಡುತಾರೆ. ಮೆಡಿಕಲ್ ಷಾಪ್‍ಗಳಿಗೆ ಔಷದಗಳ ಸರಬರಾಜಿನ ಅವಶ್ಯಕತೆ ಉಂಟಾದರೆ ಅಲ್ಲಿಯ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಿದರೆ ಅವರು ಔಷದ ತಲುಪಿಸುವ ಕಾರ್ಯ ಮಾಡುತ್ತಾರೆ ಎಂದರು.

Previous ಜಿಲ್ಲೆಗೆ ಈವರೆಗೆ 370 ಜನ ವಿದೇಶದಿಂದ ಬಂದ ಬಗ್ಗೆ ವರದಿ -27 ಜನರ ಪರೀಕ್ಷಾ ವರದಿ ನೆಗೆಟಿವ್.
Next ಜನರಿಗೆ ಪಡಿತರ ಹಂಚಿದ ಶಾಸಕ.

You might also like

0 Comments

No Comments Yet!

You can be first to comment this post!

Leave a Reply