ಪ್ರಧಾನ ಮಂತ್ರಿ ಜನಧನ ಯೋಜನೆ ಮಹಿಳಾ ಖಾತೆದಾರರಿಗೆ ನೇರ ಹಣ ಪಾವತಿ.

ಪ್ರಧಾನ ಮಂತ್ರಿ ಜನಧನ ಯೋಜನೆ ಮಹಿಳಾ ಖಾತೆದಾರರಿಗೆ ನೇರ ಹಣ ಪಾವತಿ.

ರಾಮನಗರ ಏ. ೦೪

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿ ಜನಧನ ಖಾತೆ ಹೊಂದಿರುವ ಮಹಿಳೆಯರಿಗೆ ೩ ತಿಂಗಳ ಕಾಲ ಪ್ರತಿ ತಿಂಗಳು ರೂ.೫೦೦/- ಎಕ್ಸ್ ಗ್ರೇಸಿಯಾ ಹಣವನ್ನು ಪಾವತಿ ಮಾಡಲಾಗುತ್ತದೆ.  ಏಪ್ರಿಲ್ ತಿಂಗಳ ಕಂತು ರೂ.೫೦೦ ಅನ್ನು ಸಂಬಂಧಿಸಿದ ಬ್ಯಾಂಕ್‌ಗಳಿಗೆ ಈಗಾಗಲೇ ಬಿಡುಗಡೆ ಮಾಡಿದ್ದು, ಖಾತೆದಾರರು ಬ್ಯಾಂಕುಗಳಿಂದ ಹಣವನ್ನು ಡ್ರಾ ಮಾಡಿ ಕೊಳ್ಳಬಹುದಾಗಿದೆ.

ಪ್ರಸ್ತುತ ಕೋವಿಡ್-೧೯ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಮುಂದೆ ಏಕಕಾಲಕ್ಕೆ ಜನಸಂದಣಿ ಸೇರುವುದನ್ನು ತಪ್ಪಿಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಏಪ್ರಿಲ್ ೦೩ ರಿಂದ ಏಪ್ರಿಲ್ ೦೯ ರವರೆಗೆ ಕೆಳಕಂಡ ಸರದಿಯಂತೆ ಹಣ ಪಡೆದು ಕೊಳ್ಳಬಹುದು.

ಮಹಿಳಾ ಪಿ.ಎಂ.ಜೆ.ಡಿ.ವೈ ಖಾತೆದಾರರ ಅಕೌಂಟ್ ನಂಬರ್‌ನ ಕೊನೆಯ ಸಂಖ್ಯೆ ೦ ಅಥವಾ ೧ ಇದ್ದವರು ಏಪ್ರಿಲ್ ೦೩ ರಂದು,  ಅಕೌಂಟ್ ನಂಬರ್ ಕೊನೆಯ ಸಂಖ್ಯೆ ೨ ಅಥವಾ ೩ ಇದ್ದವರು ಏಪ್ರಿಲ್ ೦೪ ರಂದು, ಅಕೌಂಟ್ ನಂಬರ್ ಕೊನೆಯ ಸಂಖ್ಯೆ ೪ ಅಥವಾ ೫ ಇದ್ದವರು ಏಪ್ರಿಲ್ ೦೭ ರಂದು,  ಅಕೌಂಟ್ ನಂಬರ್ ಕೊನೆಯ ಸಂಖ್ಯೆ ೬ ಅಥವಾ ೭ ಇದ್ದವರು ಏಪ್ರಿಲ್ ೦೮ ರಂದು ಮತ್ತು ಅಕೌಂಟ್ ನಂಬರ್ ಕೊನೆಯ ಸಂಖ್ಯೆ ೮ ಅಥವಾ ೯ ಇದ್ದವರು ಏಪ್ರಿಲ್ ೦೯ ರಂದು ಫಲಾನುಭವಿಗಳು ಈ ದಿನಾಂಕಗಳಂದು ಬ್ಯಾಂಕ್‌ಗಳಿಗೆ ತೆರಳಿ ಹಣ ವಿತ್‌ಡ್ರಾ ಮಾಡಿಕೊಳ್ಳಬಹುದು.

Previous ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ: ಏಪ್ರಿಲ್ 9 ರಂದು ನೇರ ಸಂದರ್ಶನ.
Next ಕೊರೊನಾ ಸೊಂಕು ಪರೀಕ್ಷೆಗಾಗಿ ಇನ್ಮುಂದೆ ಕಾಯ್ಬೆಕಿಲ್ಲ..! ಬಳ್ಳಾರಿ ವಿಮ್ಸ್ ನಲ್ಲಿಯೇ ವೈರಾಣು ಪರೀಕ್ಷಾ ಲ್ಯಾಬ್ ಆರಂಭ.

You might also like

0 Comments

No Comments Yet!

You can be first to comment this post!

Leave a Reply