ನೂರಾರು ಎಕರೆ ಅರಣ್ಯ ಭೂಮಿಯಲಿ ರೈತರ ಉಳುಮೆ; ರೈತರ ಒಕ್ಕಲೆಬ್ಬಿಸಿರೋದನ್ನ ತಡೆಯಲು ಮುಂದಾದ ಸಂಸದ

ನೂರಾರು ಎಕರೆ ಅರಣ್ಯ ಭೂಮಿಯಲಿ ರೈತರ ಉಳುಮೆ; ರೈತರ ಒಕ್ಕಲೆಬ್ಬಿಸಿರೋದನ್ನ ತಡೆಯಲು ಮುಂದಾದ ಸಂಸದ

ಬಳ್ಳಾರಿ-

 ಜಿಲ್ಲೆಯ ಸಂಡೂರು ತಾಲೂಕಿನ ಎಂ.ಲಕ್ಲಹಳ್ಳಿ ಸುತ್ತಲೂ‌ ಇರುವ ನೂರಾರು ಎಕರೆಯ ಭೂಮಿಯಲಿ ರೈತರು ಉಳುಮೆ ಮಾಡುತ್ತಿರೋದನ್ನ ಮನಗಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಉಳುಮೆ ಮಾಡೋದನ್ನ ತಡೆದು ಆ ಭೂಮಿಯಲಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ.ಇದರಿಂದ ನೂರಾರು ರೈತ ಕುಟುಂಬಗಳು ಬೀದಿ ಪಾಲಾಗೋದನ್ನ ಸೂಕ್ಷ್ಮವಾಗಿ ಅರಿತುಕೊಂಡ ಬಳ್ಳಾರಿಯ ಸಂಸದ ವೈ.ದೇವೇಂದ್ರಪ್ಪ ಅವರು, ಕೂಡಲೇ ಎಂ.ಲಕ್ಲಹಳ್ಳಿ ಗ್ರಾಮಕ್ಕೆ ಭೇಟಿಕೊಟ್ಟು ರೈತರನ್ನ ಒಕ್ಕಲೆಬ್ಬಿಸೋದು ಬ್ಯಾಡ ಎಂದು ಅರಣ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಸತತ 60 ವರ್ಷಗಳಿಂದಲೂ ಕೂಡ ಈ ಭೂಮಿಯಲಿ ಉಳುಮೆ ಮಾಡುತ್ತಾ ತಮ್ಮ ಬದುಕನ್ನ ಕಟ್ಟಿಕೊಂಡಿದ್ದಾರೆ.‌ ಈಗ ದಿಢೀರನೆ ಉಳುಮೆ ಮಾಡೋದನ್ನ ಬಿಡಿಸಿ ಗಿಡ- ಮರಗಳನ್ನ ನೆಡಲು ಮುಂದಾಗಿರೋದು ತರವಲ್ಲ. ಈ ಸಂಬಂಧ ಅರಣ್ಯ ಸಚಿವ ಆನಂದಸಿಂಗ್ ಅವರೊಂದಿಗೆ ಚರ್ಚಿಸಿ, ಅರಣ್ಯ ಇಲಾಖೆಯ ಸುಪರ್ದಿಗೆ ಒಳಪಡುವ ಈ ಭೂಮಿಯನ್ನ ರೈತರ ಉಳುಮೆಗೆ ಅವಕಾಶ ನೀಡುವಂತೆ ಕೋರುವೆ. ಅಂದಾಜು 150 ಎಕರೆಯ ಭೂಮಿಯಲ್ಲಿ ನಾನಾ ಬೆಳೆಗಳನ್ನ ರೈತರು ಬೆಳೆಯುತ್ತಿದ್ದಾರೆ. ಹೀಗಾಗಿ, ಅರಣ್ಯ ಅಧಿಕಾರಿಗಳು ರೈತರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ನಾನು ಸಚಿವರೊಂದಿಗೆ ಚರ್ಚಿಸಿ ಉಳುಮೆ ಮಾಡಲು ಅವಕಾಶ ಕಲ್ಪಿಸಿಕೊಡೋದಾಗಿ ಅಲ್ಲಿ ನೆರೆದಿದ್ದ ರೈತರಿಗೆ ಸಂಸದ ವೈ.ದೇವೇಂದ್ರಪ್ಪ ಭರವಸೆ ನೀಡಿದ್ದಾರೆ.

Previous ಮನೆಯ ಹಿತ್ತಲಲ್ಲಿ ಬೆಳೆದ ಗಾಂಜಾ ವಶಕ್ಕೆ ಪಡೆದ ಪೊಲೀಸ್
Next ಬಾಲಕನ ಪ್ರಾಣಕ್ಕೆ ಮುಳ್ಳಾಯಿತು ಪಬ್ ಜೀ ಗೇಮ್

You might also like

0 Comments

No Comments Yet!

You can be first to comment this post!

Leave a Reply