ಮುಂದಿನ ಎರಡು ವಾರಗಳು ಅತ್ಯಂತ ಜಾಗ್ರತೆಯಿಂದಿರಬೇಕು.

ಮುಂದಿನ ಎರಡು ವಾರಗಳು ಅತ್ಯಂತ ಜಾಗ್ರತೆಯಿಂದಿರಬೇಕು.

ಹಾಸನ,ಏ.9

ಹಾಸನದಲ್ಲಿ ಕೆಲವು ಖಾಸಗಿ ವೈದ್ಯರು ಟೆಲಿಮೆಡಿಸಿನ್ ಸೇವೆ ನೀಡಲು ಮುಂದೆ ಬಂದಿದ್ದು, ಅಗತ್ಯ ಇರುವವರು ದೂರವಾಣಿ ಕರೆಗಳ ಮೂಲಕ ಆರೋಗ್ಯ ಸಲಹೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಅವಶ್ಯಕತೆಯಿದ್ದಲ್ಲಿ ಮಾತ್ರ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಬಹುದು. ಸುಮಾರು 73 ವೈದ್ಯರು ಈ ಸೇವೆಯನ್ನು ಒದಗಿಸಲು ಮುಂದಾಗಿದ್ದು ಅವರ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್. ಗಿರಿಶ್ ಸುದ್ಧಿಗೋಷ್ಠಿಯಲ್ಲಿ  ತಿಳಿಸಿದ್ದಾರೆ.

 ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಸುದ್ಧಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಕೊರೋನಾ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದು, ಕಳೆದ ಒಂದು ವಾರದಲ್ಲಿ ದೆಹಲಿಯಿಂದ ಹಾಗೂ ಹೊರ ರಾಜ್ಯಗಳಿಂದ ಬಂದವರಲ್ಲಿ 60 ಕ್ಕೂ ಹೆಚ್ಚು ಮಂದಿಯ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ಎಲ್ಲವೂ ಋಣಾತ್ಮಕ ಎಂದು ಫಲಿತಾಂಶ ಬಂದಿದೆ.

ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಇದುವರೆಗೂ 92 ಪರೀಕ್ಷೆಗಳನ್ನು ಮಾಡಲಾಗಿದೆ, 3 ಫಲಿತಾಂಶ ಬರಬೇಕಿದ್ದು ಉಳಿದೆಲ್ಲವೂ ನೆಗೆಟೀವ್ ಬಂದಿದೆ ಹಾಗಾಗಿ ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 ಸೋಂಕು ಪರೀಕ್ಷಾ ಫಲಿತಾಂಶ ವಿಳಂಬ ತಡೆಗೆ ಮುಂದಿನ ದಿನಗಳಲ್ಲಿ ರ್ಯಾಪಿಡ್ ಟೆಸ್ಟಿಂಗ್ ಕಿಟ್‍ಗಳನ್ನು ಒದಗಿಸುವುದಾಗಿ ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಇದರಿಂದ ಕೇವಲ ಅರ್ಧ ಗಂಟೆಯಲ್ಲೇ ಫಲಿತಾಂಶ ದೊರೆಯುತ್ತದೆ. ಹಾಗಾಗಿ ಹೆಚ್ಚಿನ ಸಂಖ್ಯೆಯ ಜನರನ್ನು ತಪಾಸಣೆ ಮಾಡಲು ಸಹಾಯಕವಾಗಿದ್ದು, ರೋಗ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಾಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಮುಂದಿನ ಎರಡು ವಾರಗಳು ಅತ್ಯಂತ ಜಾಗ್ರತೆಯಿಂದಿರಬೇಕು. ಹೆಚ್ಚಿನ ಸಾಮಾಜಿಕ ಅಂತರವನ್ನು ಕಯ್ದುಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ

Previous ಒಂದು ವರ್ಷದ ಮುಖ್ಯಮಂತ್ರಿ-ಸೇರಿದಂತೆ ಎಲ್ಲಾ ಶಾಸಕರ ಶೇಕಡಾ 30 ರಷ್ಟು ವೇತನ ಭತ್ಯೆ ಕಡಿತ : ಜೆ ಸಿ ಮಾಧುಸ್ವಾಮಿ.
Next ಜಿಲ್ಲಾಡಳಿತಕ್ಕೆ ಕಂಫರ್ಟ್ ಕಿಟ್ ದೇಣಿಗೆ ನೀಡಿದ ಅಜೀಂ ಪ್ರೇಮ್ ಜೀ ಫೌಂಡೇಶನ್.

You might also like

0 Comments

No Comments Yet!

You can be first to comment this post!

Leave a Reply