ಲಾಕ್ ಡೌನ್ ಆದೇಶ 31ರ ಮದ್ಯರಾತ್ರಿ 12 ಗಂಟೆಯಿಂದ ಏಪ್ರಿಲ್ 14 ರ ಮದ್ಯರಾತ್ರಿ 12 ಗಂಟೆವರೆಗೆ ಜಾರಿ.

ಲಾಕ್ ಡೌನ್ ಆದೇಶ 31ರ ಮದ್ಯರಾತ್ರಿ 12 ಗಂಟೆಯಿಂದ ಏಪ್ರಿಲ್ 14 ರ ಮದ್ಯರಾತ್ರಿ 12 ಗಂಟೆವರೆಗೆ ಜಾರಿ.

ಬಾಗಲಕೋಟೆ ಮಾ.31

 ಕೋವಿಡ್-19 ಭೀತಿ ಹಿನ್ನಲೆ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ 144 ರಡಿ ಬಾಗಲಕೋಟೆ ಜಿಲ್ಲೆಯಾದ್ಯಂತ ಕೆಲವು ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕ್ಯಾಪ್ಟನ್ ಆದೇಶ ಹೊರಡಿಸಿದ್ದಾರೆ.

 ಜೀವನೋಪಾಯಕ್ಕೆ ಅಗತ್ಯವಿರುವ ಆಹಾರ, ಪಡಿತರ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣು ಹಂಪಲ ಸರಬರಾಜು, ಅಗತ್ಯ ಸರಕು ಸಾಗಾಣಿಕೆ, ಜಾನುವಾರುಗಳಿಗೆ ಮೇವು ಸರಬರಾಜು, ಆಹಾರ ಸಂಸ್ಕರಣಾ ಘಟಕಗಳು, ಕುಡಿಯುವ ನೀರು ಸರಬರಾಜು, ಹಾಲು ಉತ್ಪಾದನಾ ಘಟಕಗಳು, ಗೋದಿ & ಅಕ್ಕಿ ಗೋದಾಮುಗಳಲ್ಲಿ ಸರಕು ಹೇರುವುದು ಮತ್ತು ಇಳಿಸುವದು ಹಾಗೂ ರವಾನಿಸುವುದು, ವಾಹನಗಳಿಗೆ ಇಂಧನ ಪೂರೈಕೆ, ಅಗತ್ಯ ಸಾರ್ವಜನಿಕ ಸೇವೆಗಳಾದ ವಿದ್ಯುತಚ್ಛಕ್ತಿ, ನೀರು, ದೂರವಾಣಿ, ಬ್ಯಾಂಕ್, ಔಷಧಿ, ವೈದ್ಯಕೀಯ, ಅಂಚೆ, ಪೌರ, ಅಗ್ನಿಶಾಮಕ ಹಾಗೂ ವಿಮಾ ಮುಂತಾದ ಸೇವೆಗಳು ಮುಂದುವರೆಯಲಿವೆ ಆದೇಶದಲ್ಲಿ ತಿಳಿಸಿದ್ದಾರೆ.

 ಈ ಆದೇಶವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಕಟ್ಟುನಿಟ್ಟಾಗಿ ಜಾರಿಗೆ ತರುವ ಬಗ್ಗೆ ಕ್ರಮ ಜರುಗಿಸತಕ್ಕದ್ದು. ಈ ಆದೇಶದ ಅನುಷ್ಠಾನಕ್ಕೆ ಇತರೆ ಯಾವುದೇ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ಸೇವೆ ಅಗತ್ಯವಿದ್ದಲ್ಲಿ ಅವರ ಸೇವೆ ಪಡೆದುಕೊಳ್ಳಲು ಆರಕ್ಷಕ ಇಲಾಖೆಗೆ ಅನುಮತಿ ನೀಡಲಾಗಿದೆ.

ಅಲ್ಲದೇ ಜಿಲ್ಲೆಯ ಎಲ್ಲ ತಾಲೂಕಾ ದಂಡಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ಉಪವಿಭಾಗದ ದಂಡಾಧಿಕಾರಿಗಳು ಈ ಆದೇಶವನ್ನು ತಮ್ಮ ಕಾರ್ಯವ್ಯಾಪ್ತಿಯಲ್ಲು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ಆರಕ್ಷಕ ಇಲಾಖೆ ಗೆ ಅಗತ್ಯ ಸಹಕಾರ ನೀಡತಕ್ಕದ್ದು. ಆದೇಶ ಉಲ್ಲಂಘನೆಯಾದಲ್ಲಿ ತಕ್ಷಣವೇ ಆಪಾದಿತರ ವಿರುದ್ದ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಈ ಆದೇಶ ಮಾರ್ಚ 31ರ ಮದ್ಯರಾತ್ರಿ 12 ಗಂಟೆಯಿಂದ ಏಪ್ರಿಲ್ 14 ರ ಮದ್ಯರಾತ್ರಿ 12 ಗಂಟೆವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

Previous ಖಾಸಗಿ ವೈದ್ಯಕೀಯ ಸೇವೆ; ಪಾಸ್ ನೀಡಲು ನಿರ್ದೇಶನ.
Next ದಿನಸಿ ಹಾಗೂ ತರಕಾರಿ ಅಂಗಡಿಗಳ ಮಾಹಿತಿಗೊಂದು ಆ್ಯಪ್.

You might also like

0 Comments

No Comments Yet!

You can be first to comment this post!

Leave a Reply