ಕಲಬುರಗಿ ಪ್ರಯೋಗಾಲಯ ವರದಿಯೇ ಅಂತಿಮ.

ಕಲಬುರಗಿ ಪ್ರಯೋಗಾಲಯ ವರದಿಯೇ ಅಂತಿಮ.

ಕಲಬುರಗಿ.ಏ.22

ಕೋವಿಡ್-19 ಪರೀಕ್ಷೆ ಕೈಗೊಳ್ಳುತ್ತಿರುವ ಕಲಬುರಗಿ ಜಿಮ್ಸ್ ಪ್ರಯೋಗಾಲಯ ನೀಡುವ ವೈದ್ಯಕೀಯ ವರದಿ ಅಂತಿಮವಾಗಿದ್ದು, ದೃಢೀಕರಣಕ್ಕಾಗಿ ಬೆಂಗಳೂರು ಅಥವಾ ಪುಣೆ ಕಳುಹಿಸುವ ಅಗತ್ಯವಿಲ್ಲ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಹೇಳಿದ್ದಾರೆ.

ಕಲಬುರಗಿ ಪ್ರಯೋಗಾಲಯ ಆರಂಭವಾದ ನಂತರ ಶಿಷ್ಠಚಾರದ ಪ್ರಕಾರ ಬೆಂಗಳೂರು ಅಥವಾ ಪುಣೆಗೆ ಕಳುಹಿಸಲಾಗುತಿತ್ತು. ಇದೀಗ ಈ ಪ್ರಯೋಗಾಲಯವನ್ನು ಉನ್ನತ್ತೀಕರಿಸಿರುವುದರಿಂದ ದೃಡೀಕರಣಕ್ಕಾಗಿ ಬೇರೆ ಪ್ರಯೋಗಾಲಕ್ಕೆ ವರದಿ ಕಳುಹಿಸುವ ಅಗತ್ಯವಿಲ್ಲ. ಇನ್ನೂ ಕೋವಿಡ್-19 ಪರೀಕ್ಷೆಗೆ ಅಗತ್ಯ ಪ್ರಮಾಣದಲ್ಲಿ ಕೆಮಿಕಲ್ ಸಹ ಲಭ್ಯವಿದೆ ಎಂದರು.

ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಕಿರಾಣಾ ದಿನಸಿಗಳು ಹೆಚ್ಚಿಗೆ ದರದಲ್ಲಿ ಮಾರಾಟ ಮಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕಲಬುರಗಿ ನಗರದಿಂದ ಕಿರಾಣಿ ದಿನಸಿಗಳನ್ನು ತೆಗೆದುಕೊಂಡು ಹೋಗಲು ವಾರದಲ್ಲಿ ಕನಿಷ್ಟ 4 ದಿನ ಕಲಬುರಗಿ ನಗರದ ಕಿರಾನಿ ದಿನಸಿಗಳ ಡೀಲರ್ ಅಂಗಡಿಗಳನ್ನು ತೆರೆಯಲು ಅಧಿಕಾರಿಗಳಿಗೆ ನಿರ್ದೇಶನ  ನೀಡಲಾಗಿದೆ ಎಂದರು.

Previous ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ಗಳು ಮೂಲೆ ಸೇರುವುದು ಪಕ್ಕಾ…?
Next ಟಾಟಾ ವಾಹನ ಮಾಲೀಕರಿಗೆ ಸಿಹಿ ಸುದ್ಧಿ.

You might also like

0 Comments

No Comments Yet!

You can be first to comment this post!

Leave a Reply