ವಿದ್ಯುತ್ ಗ್ರಾಹಕರಿಗೆ ಬಿಲ್ ಪಾವತಿಸುವಂತೆ ಇಂಧನ ಇಲಾಖೆ ಮನವಿ.

ವಿದ್ಯುತ್ ಗ್ರಾಹಕರಿಗೆ ಬಿಲ್ ಪಾವತಿಸುವಂತೆ ಇಂಧನ ಇಲಾಖೆ ಮನವಿ.

ಬೆಂಗಳೂರು ಏಪ್ರಿಲ್ 03

ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಉತ್ಪಾದಕರ ಬಿಲ್‍ನ್ನು ಪಾವತಿಸಲು ಹಾಗೂ ಗ್ರಾಹಕರಿಗೆ ಅಡಚಣೆ ರಹಿತ ವಿದ್ಯುತ್ ಸರಬರಾಜು ಮಾಡಲು ಗ್ರಾಹಕರನ್ನು ಆನ್‍ಲೈನ್/ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ಲನ್ನು ಪಾವತಿಸಲು ಇಂಧನ ಇಲಾಖೆಯ ವಿನಂತಿ ಮಾಡಿದೆ. ವಿದ್ಯುತ್ ಗ್ರಾಹಕರು ಮೂರು ತಿಂಗಳ ಅವಧಿಗೆ ಬಿಲ್ ಪಾವತಿಸುವುದನ್ನು  ಮುಂದೂಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಆದರೆ ಬಿಲ್ ಪಾವತಿಯ ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳು ಯಾವುದೇ ನಿರ್ದೇಶನಗಳನ್ನು ನೀಡಲಾಗಿರುವುದಿಲ್ಲ ಎಂದು ಇಂಧನ ಇಲಾಖೆ ಮನವಿ ಮಾಡಿದೆ.

ಏಪ್ರಿಲ್ ತಿಂಗಳ ಮಾಸಿಕ ಮಾಪಕ ಹಾಗೂ ಬಿಲ್ ವಿತರಣೆಯನ್ನು ಸರಾಸರಿ ಬಿಲ್ ಅಥವಾ ಹಿಂದಿನ ತಿಂಗಳ  ಬಿಲ್‍ನ್ನು ನೀಡುವ ಮೂಲಕ  ನಿರ್ವಹಿಸಲಾಗುವುದು.

ಹಾಲಿ ವಿದ್ಯುತ್ ಬಿಲ್  ಗ್ರಾಹಕರಿಗೆ ವಿದ್ಯುತ್  ಬಿಲ್‍ನ್ನು ಇ-ಮೇಲ್/ಎಸ್‍ಎಮ್‍ಎಸ್/ ಪಾಟ್ಸಾಪ್ ಮುಖಾಂತರ ಕಳುಹಿಸಲಾಗುವುದು. ಗ್ರಾಹಕ ಸಹಾಯವಾಣಿ 1912 ಗೆ ಕರೆ ಮಾಡಿ, ಅಕೌಂಟ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ ಬಿಲ್ ವಿವರಗಳನ್ನು ಪಡೆಯಬಹುದು. ಅಲ್ಲದೇ ವಿದ್ಯುತ್ ಸರಬರಾಜು ಕಂಪನಿಯ ಮೊಬೈಲ್ ಆಪ್/ ಜಾಲತಾಣದಲ್ಲಿ ನೋಂದಾಯಿಸಿಕೊಂಡು ಸಹ ಬಿಲ್ ವಿವರಗಳನ್ನು ಪಡೆಯಬಹುದಾಗಿದೆ. ಗ್ರಾಹಕರು ಸಂಬಂಧಪಟ್ಟ ಉಪವಿಭಾಗ ಕಛೇರಿಯನ್ನು ಸಂಪರ್ಕಿಸಿ ಬಿಲ್ ವಿವರಗಳನ್ನು ಪಡೆಯಬಹುದಾಗಿದೆ ಎಂದಿದೆ.

ಯಾವುದೇ ಗ್ರಾಹಕರು ಬಿಲ್ ಪಾವತಿಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದಿದ್ದಲ್ಲಿ, ಅಂತಹ ಗ್ರಾಹಕರು ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿಗಳ ಉಪವಿಭಾಗಾಧಿಕಾರಿಗಳ ಕಛೇರಿಗೆ ಲಿಖಿತ ಮನವಿ ಸಲ್ಲಿಸಲು ಕೋರಿರುತ್ತಾರೆ.

Previous ಮಹಾನಗರ ಪಾಲಿಕೆಯಿಂದ ಬೀದಿ ನಾಯಿಗಳಿಗೆ ಆಹಾರದ ವ್ಯವಸ್ಥೆ.
Next ದೆಹಲಿ ಸಾಮೂಹಿಕ ಪ್ರಾರ್ಥನೆ ಮುಗಿಸಿ ಬಂದವರ ಮೇಲೆ ವಿಶೇಷ ನಿಗಾಕ್ಕೆ ಸಚಿವ ಸಿ.ಸಿ ಪಾಟೀಲ ಸೂಚನೆ.

You might also like

0 Comments

No Comments Yet!

You can be first to comment this post!

Leave a Reply