ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಘೋಷಿಸಿ ಆದೇಶ.

ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಘೋಷಿಸಿ ಆದೇಶ.

ವಿಜಯಪುರ ಏ.12:

 ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ವಿಜಯಪುರ ನಗರದ ಹಕೀಮ್ ಚೌಕ್, ಕಾಮತ್ ಹೊಟೇಲ್ ಮುಂಭಾಗದ ಹರಣಶಿಖಾರಿ ಓಣಿ, ಕೊಂಚಿಕೊರವರ ಓಣಿ, ಬಡಿ ಕಮಾನ, ಚಪ್ಪರ್ ಬಂದ್ ಓಣಿ, ಜುಮ್ಮಾ ಮಸೀದಿಯ ಹಿಂದೆ ಇರುವ ಕೆ.ಎಚ್.ಬಿ ಕಾಲನಿ, ಪೈಲ್ವಾನ್ ನಗರ, ಮಹೀಬೂಬ್ ನಗರ, ಬೆಂಡಿಗೇರಿ ಓಣಿ, ಸುಭಾಸ್ ಕಾಲನಿ, ಶಾಂತಿ ನಗರ ಈ ಭೌಗೋಳಿಕ ಪ್ರದೇಶವನ್ನು ನಿಷೇಧಿತ ಪ್ರದೇಶ ಮತ್ತು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.

 ಈ ಕಂಟೇನ್ಮೆಂಟ್ ಜೋನ್ ಹೊರಗಿನ ಸುತ್ತಮುತ್ತಲಿನ 100 ಮೀಟರ್ ಪ್ರದೇಶದ ವ್ಯಾಪ್ತಿಯ ಭೌಗೋಳಿಕ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಈ ಪ್ರದೇಶದ ವ್ಯಾಪ್ತಿಯಲ್ಲಿ ಯಾವದೇ ವ್ಯಕ್ತಿ ಜನರ ಕಾಲ್ನಡಿಗೆ/ ವಾಹನದ ಮೂಲಕ ಅಥವಾ ಇನ್ನಾವುದೇ ರೀತಿಯಿಂದ ಪ್ರದೇಶದಲ್ಲಿ ಆಗಮನ ಮತ್ತು ನಿರ್ಗಮನವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

Previous ಕೆಮ್ಮು, ಶೀತ, ಜ್ವರ ಮತ್ತು ಗಂಟಲುನೋವಿಗೆ ಮಾತ್ರೆ ಅಥವಾ ಸಿರಪ್ ಖರೀದಿಸಿದರೂ ಮಾಹಿತಿ ನೀಡಿ.
Next ಆಹಾರವಿಲ್ಲ ಎಂದ ಅಲೆಮಾರಿಗಳಿಗೆ ಗಂಟೆಯಲ್ಲಿಯೆ ಆಹಾರ ಪದಾರ್ಥಗಳ ಕಿಟ್ ಪೂರೈಕೆ.

You might also like

0 Comments

No Comments Yet!

You can be first to comment this post!

Leave a Reply