ಸುರೇಶ್ ರೈನಾ ಸೋದರ ಮಾವನ ಬರ್ಬರವಾಗಿ ಹತ್ಯೆ

ಸುರೇಶ್ ರೈನಾ ಸೋದರ ಮಾವನ ಬರ್ಬರವಾಗಿ ಹತ್ಯೆ

ನವದೆಹಲಿ: ಟೀಮ್ ಇಂಡಾಯದ ಮಾಜಿ ಸ್ಪೋಟಕ್ ಬ್ಯಾಟ್ಸ್‌ಮನ್ ಸುರೇಶ್ ರೈನ್ ಐಪಿಎಲ್ ನಿಂದ ಹೊರಹೋಗಿದಕ್ಕೆ ಸೂಕ್ತವಾದ ಕಾರಣ ನೀಡುವ ಮೂಲಕ ತಮ್ನ ಮೇಲ ಬಂದಿದ್ದ ಆರೋಪಕ್ಕೆ ತರೆಯಳೆದಿದ್ದಾರೆ.

ಸುರೇಶ್ ರೈನಾ ಅವರು ಯುಎಇ ಇಂದ ಭಾರತಕ್ಕೆ ವಾಪಸ್ ಬಂದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಆದ್ರೆ ಇದಕ್ಕೆಲ್ಲಾ ರೈನಾ ತರೆ ಯಳೆದು ಭಯಾನಕ ವಿಷಯ ಒಂದನ್ನು ಹೊರಹಾಕಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಐಪಿಎಲ್-2020 ಆಡಲು ಯುಎಇಗೆ ಹೋಗದಿದ್ದ ರೈನಾ ಅವರು ವೈಯಕ್ತಿಕ ಕಾರಣದಿಂದ ವಾಪಸ್ ಬಂದಿದ್ದರು. ಇದಾದ ಬಳಿಕ ಅವರು ಐಪಿಎಲ್‍ನಿಂದ ಹೊರಗೆ ಬಂದಿರುವ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇಷ್ಟಾದರೂ ರೈನಾ ಅವರು ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಈಗ ಮೊದಲ ಬಾರಿಗೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ರೈನಾ, ಪಂಜಾಬ್‍ನಲ್ಲಿ ನನ್ನ ಕುಟುಂಬದವರಿಗೆ ಆಗಿರುವುದು ಭಯಾನಕತೆಯನ್ನು ಮೀರಿದೆ. ನನ್ನ ಸೋದರಮಾವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನನ್ನ ಸೋದರತ್ತೆ ಮತ್ತು ನನ್ನ ಸೋದರತ್ತೆ ಮಕ್ಕಳ ಮೇಲೂ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ದುರದೃಷ್ಟವಶಾತ್ ನನ್ನ ಸೋದರತ್ತೆ ಮಗನೋರ್ವ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದಾರೆ. ನನ್ನ ಸೋದರತ್ತೆ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ ಎಂದಿದ್ದಾರೆ. ನಾನು ಪಂಜಾಬ್ ಪೊಲೀಸರಿಗೆ ಮನವಿ ಮಾಡುತ್ತೇನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ. ನಾವು ಕೊನೆ ಪಕ್ಷ ಈ ಘೋರ ಕೃತ್ಯವನ್ನು ಯಾರು ಮಾಡಿದ್ದಾರೆ ಎಂದು ಪತ್ತೆ ಹೆಚ್ಚುವಂತೆ ಮನವಿ ಮಾಡಿದ್ದಾರೆ..

Previous ಮೊಗ್ಗಿನ ಮನಸ್ಸು ಡೈರೆಕ್ಟರ್ ಗೆ ಆ ವಿಷಯವೇ ಗೊತ್ತಿರಲಿಲ್ಲ
Next ಇಂದಿನ ಸ್ಟಾಕ್-ಮಾರುಕಟ್ಟೆ-ಮಾಹಿತಿ

You might also like

0 Comments

No Comments Yet!

You can be first to comment this post!

Leave a Reply