ಆದೇಶ ಪಾಲಿಸದವರ ವಿರುದ್ಧ ಸೂಕ್ತ ಕ್ರಮ.

ಆದೇಶ ಪಾಲಿಸದವರ ವಿರುದ್ಧ ಸೂಕ್ತ ಕ್ರಮ.

ಮೈಸೂರು, ಏಪ್ರಿಲ್.7

-ಕೋವಿಟಡ್-19 ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಮೈಸೂರು ನಗರ ಫೋಲೀಸ್ ಕಮಿಷನರೇಟ್ ಘಟಕದ ವ್ಯಾಪ್ತಿಯಲ್ಲಿ ಏಪ್ರಿಲ್ 5 ರಿಂದ 14 ರವರೆಗೆ ಪ್ರತಿದಿನ ಸಂಜೆ 6 ಗಂಟೆಯ ನಂತರ ತರಕಾರಿ, ದಿನಸಿ ಪದಾರ್ಥ ಹಣ್ಣಿನ ಅಂಗಡಿ ಒಳಗೊಂಡಂತೆ ಎಲ್ಲಾ ರೀತಿಯ ಅಂಗಡಿ-ಮುಂಗಟ್ಟುಗಳ ವ್ಯಾಪಾರ ವಹಿವಾಟುಗಳನ್ನು ನಿರ್ಬಂಧಿಸಿ ಕಡ್ಡಾಯವಾಗಿ ಮುಚ್ಚಲು ಆದೇಶಿಸಲಾಗಿರುತ್ತದೆ.

ಅದಾಗಿಯೂ ಸಾರ್ವಜನಿಕರು ಕೆಲ ನೆಪದಲ್ಲಿ ಮನೆಯಿಂದ ಹೊರಬಂದು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ ಹಾಗೂ ನಿಯಮವನ್ನು ಪಾಲಿಸದೆ ಅನಗತ್ಯವಾಗಿ ಓಡಾಡುವುದು ಕಂಡು ಬಂದಿದೆ.

ಕೋವಿಂಡ್ 19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ನಗರದಲ್ಲಿ ನಿಗದಿಪಡಿಸಲಾದ ಸಮಯದ ನಂತರ ವ್ಯಾಪಾರ-ವಹಿವಾಟು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಂಡುಬಂದಲ್ಲಿ ನಿಷೇದಾಜ್ಞೆಯ ಉಲ್ಲಂಘನೆ ಎಂದು ಪರಿಗಣಿಸಿ ಅಂತವರ ವಿರುದ್ಧ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಈ ಆದೇಶವು ಹಾಲು, ವೈದ್ಯಕೀಯ ಸೇವೆಗಳು, ಆಹಾರ ಪದಾರ್ಥಗಳ ಹೋಂ ಡಿಲೆವರಿ ಹಾಗೂ ಕಿಚನ್ ಸೇವೆಗಳು ಮತ್ತು ಯಾವುದೇ ರೀತಿಯ ಸರಕು ವಾಹನಗಳ ಸಂಚಾರಕ್ಕೆ ಅನ್ವಯವಾಗುವುದಿಲ್ಲ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous ಜಗತನ್ನು ಕಾಡುತ್ತಿರುವ ಮಹಾ ಮಾರಿ 117 ದೇಶಕ್ಕೆ ವ್ಯಾಪಿಸಿದ ವೈರಸ್.
Next ಅನಾವಶ್ಯಕವಾಗಿ ದ್ವಿಚಕ್ರ, ನಾಲ್ಕು ಚಕ್ರಗಳ ವಾಹನ ಸಂಚಾರ ನಿಷೇಧ.

You might also like

0 Comments

No Comments Yet!

You can be first to comment this post!

Leave a Reply